ಚಳ್ಳಕೆರೆ : ಬಯಲು ಸೀಮೆಯಲ್ಲಿ ಉದ್ಯೋಗ ವಿಲ್ಲದೆ ಗುಳೆ ಹೋಗುವುದನ್ನು ತಪ್ಪಿಸಿಲು ಸ್ವತಃ ಸ್ಥಳದಲ್ಲಿ ಉದ್ಯೋಗ ನೀಡುವ ಮಹತ್ವದ ಯೋಜನೆ ನರೇಗಾ ಯೋಜನೆ ಇದರಿಂದ ಗ್ರಾಮೀಣ ಜನರು ತಮ್ಮ ಬದುಕನ್ನು ಸುಂದರವಾಗಿಸಿ ಕೊಳ್ಳಬಹುದು ಎಂದು ತಾಲೂಕು ಪಂಚಾಯಿತಿ ಇಓ.ಹೊನ್ನಯ್ಯ ಹೇಳಿದರು.
ಅವರು ನಗರದ ತಾಲೂಕು ಪಂಚಾಯಿತಿ ಕಛೇರಿಯಲ್ಲಿ ನರೇಗಾ ಯೋಜನೆಯನ್ನು ಗ್ರಾಮೀಣ ಪ್ರದೇಶದಲ್ಲಿ ಸಂಪೂರ್ಣವಾಗಿ ಜನರು ಬಳಕೆ ಮಾಡಿಕೊಂದು ಉದ್ಯೋಗ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ಅಧಿಕಾರಿಗಳು ಸನ್ನದರಾಗಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ನರೇಗಾ ಯೋಜನೆಯಡಿಯಲ್ಲಿ ಬದು ನಿರ್ಮಾಣ, ಕೃಷಿ ಹೊಂಡ, ಕೆರೆ, ಕಾಲುವೆ, ಸಮುದಾಯ ಆಧಾರಿತ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳ ಬೇಕು, ಜಾನುವಾರು ಶೆಡ್ ನಿರ್ಮಾಣ ರೈತರಿಗೆ ಪ್ರಮುಖ ಆಧ್ಯತೆ ನೀಡಬೇಕು.
ರೈತರಿಗೆ ಅಗತ್ಯ ಬದು ನಿರ್ಮಾಣ, ಕೃಷಿ ಹೊಂಡ. ಕುರಿ ,ಮೇಕೆ ಶೆಡ್‌ಗಳನ್ನು ಗ್ರಾಮಸಭೆಗಳ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿ ಕೇಷಿ, ತೋಟಗಾರಿಕೆ ಇಲಾಖೆಗೆ ಕಳಿಸಿಕೊಂಡು ಅದು ಬಿಟ್ಟು ರೈತರು ಒಬ್ಬಬ್ಬರೆ ಬಂದು ಕ್ರಿಯಾಯೋಜನೆಗೆ ಸಹಿ ಮಾಡಿಕೊಳ್ಳಲು ಬರುತ್ತಾರೆ ರೈತರನ್ನು ಅಲೆದಾಡಿಸದೆ ನೀವೇ ಕ್ರಿಯಾಯೋನೆ ರೂಪಿಸಿ ಕಚೇರಿಗೆ ಕಳಿಸಿಕೊಂಡಿ ಎಂದು ತಿಳಿಸಿದರು.
ಉದ್ಯೋಗ ಖಾತ್ರಿ ಯೋಜನೆ ಕೂಲಿಕಾರರಿಗೆ ತುಂಬ ಸಹಕಾರಿಯಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗಳಿಗೂ ಮಾನವ ದಿನಗಳನ್ನು ಹೆಚ್ಚಳಪಡಿಸುವಂತೆ ಸೂಚನೆ ನೀಡಲಾಗಿದೆ. ಕೇವಲ ಕುಂಟು ನೆಪ ಹೇಳಿಕೊಂಡು ಹೋದರೆ ಜನರು ನಿಮ್ಮ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಾರೆ ಆದ್ದರಿಂದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ನಿಮ್ಮ ಬೆನ್ನೆಲುಬಾಗಿ ನಿಲ್ಲುತ್ತಾರೆ. ಅಭಿವೃದ್ಧಿ ಕೆಲಸಗಳನ್ನು ಮಾಡಲು ಅನುಕೂಲವಾಗುತ್ತದೆ
ಉದ್ಯೋಗ ಖಾತ್ರಿ ಯೋಜನೆಯಡಿ ಈ ವರ್ಷದಲಿ ಸುಮಾರು 11.15 ಲಕ್ಷ ಮಾನವ ದಿನಗಳನ್ನು ಗುರಿ ನಿಗದಿ ಮಾಡಲಾಗಿದ್ದು ಇಲ್ಲಿಯವರೆಗೆ 5.50 ಲಕ್ಷ ಮಾನವ ದಿನಗಳು ಗುರಿತಲುಪಿದ್ದು ಇನ್ನು 74532 ಹೆಚ್ಚು ಕೂಲಿ ಕೆಲಸ ನೀಡುವಂತೆ ತಿಳಿಸಿದರು.