ಚಳ್ಳಕೆರೆ : ಸತತವಾಗಿ ಕಳೆದ ಮೂರು ಬಾರಿ ಗೆಲುವಿನ ನಗೆ ಬೀರಿದ ಶಾಸಕ ಟಿ.ರಘುಮೂರ್ತಿ ಈ ಕ್ಷೇತ್ರದ ಹ್ಯಾಟ್ರಿಕ್ ಶಾಸಕರಾಗಿದ್ದಾರೆ ಎಂದು ಪ್ರಜಾಪೀಠ ಈಶ್ವರಿ ವಿಶ್ವವಿದ್ಯಾಲದ ವಿಮಲಾ ಅಕ್ಕ ನವರು ಹೇಳಿದ್ದಾರೆ.
ಇನ್ನೂ ಪ್ರಜಾಪೀಠ ಈಶ್ವರಿ ವಿಶ್ವವಿದ್ಯಾಲಾಯದ ಸಭಾಂಗಣದಲ್ಲಿ ಆಯೋಜಸಿದ್ದ ನೂತನ ಶಾಸಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಬಯಲು ಸೀಮೆ ಎಂಬ ಹಣೆ ಪಟ್ಟಿಯನ್ನು ಹಳಸಿ ಹಾಕಿದ ಕೀರ್ತಿ ಈ ಶಾಸಕರಿಗೆ ಸಲ್ಲುತ್ತದೆ ಅದ್ದರಂತೆ ಇಂತಹ ಬಯಲು ಸೀಮೆಗೆ ಕಂಕಣ ಬದ್ದರಾದ ಇಂತಹ ಶಾಸಕರು ಮೂರು ಬಾರಿ ಗೆಲುವು ಸಾಧಿಸಿ ಮತ್ತೆ ನಮ್ಮ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿರುವುದು ನಮ್ಮ ಪುಣ್ಯ ಎಂದು ಹೇಳಿದರು.
ಇನ್ನೂ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಅನೇಕರ ಕಷ್ಟ ಸುಖಗಳನ್ನು, ನೋವು ನಲಿವುಗಳನ್ನು ಕಂಡಿದ್ದೆನೆ ಅವರ ನೋವಿನಲ್ಲಿ ಭಾಗಿಯಾಗಿದ್ದೆನೆ ಆದ್ದರಿಂದ ಈ ಬಾರಿಯೂ ಕೂಡ ನನ್ನನ್ನು ಕ್ಷೇತ್ರದ ಜನರು ಕೈ ಬಿಡದೆ ಸತತವಾಗಿ ಮೂರು ಬಾರಿ ಗೆಲುವು ತಂದು ಕೊಟ್ಟಿರುವುದು ಸಂತೋಷವಾಗಿದೆ. ಆದ್ದರಿಂದ 2023ಕ್ಕೆ ಸರ್ವತೋಮುಖ ಅಭಿವೃದ್ದಿಗೆ ಕಂಕಣ ಬದ್ದರಾಗುತ್ತೆನೆ ಇನ್ನೂ ಕೃಷಿ, ಶಿಕ್ಷಣ ಹಾಗು ಬಡತನ ನಿರ್ಮೂಲನೆಗೆ ಹೆಚ್ಚಿನ ಆಧ್ಯತೆ ನೀಡುವ ಮೂಲಕ ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಕೆಲಸವಾಗುತ್ತದೆ ಎಂದರು