ಚಳ್ಳಕೆರೆ :
ಗ್ರಾಪಂ ವ್ಯಾಪ್ತಿಯ ಜನ ಜಾನುವಾರು ಕುಡಿವ ನೀರಿನ ತೊಟ್ಟಿ ಹಾಗೂ ಸಾರ್ವಜನಿಕರು ಕುಡಿವ ನೀರಿನ ಟ್ಯಾಂಕ್, ಕೊಳವೆ ಬಾವಿಗಳ ಬಳಿ ಸ್ವಚ್ಛತೆ ಕಾಪಾಡಬೇಕು ಎಂದು ಜಿಪಂ ಸಿಇಒ ಎಂ,ಎಸ್,ದೀವಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜೆಲ್ಲೆಯ ಎಲ್ಲಾ ಗ್ರಾಪಂ ವ್ಯಾಪ್ತಿಯ ಜಾನುವಾರು ಹಾಗೂಕುಡಿಯುವ ನೀರಿನ ಟ್ಯಾಂಕ್ , ತೊಟ್ಟಿಗಳ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಸ್ವಚ್ಚತೆ ಕಾಪಾಡುವಂತೆ ಈಗಾಗಲೆ ಕಳೆದ ೬ ತಿಂಗಳ ಹಿಂದೆ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸ್ಚಚ್ಚತೆಗೆ ಆದ್ಯತೆ ನೀಡಲಾಗಿತ್ತು ಮತ್ತೆ ಈಗ ಜನ ಜಾನುವಾರು ಕುಡಿಯುವ ನೀರಿನ ಸಂಗ್ರಹಣ ತೊಟ್ಟಿಗಳ ಸ್ವಚ್ಚತಾ ಕಾರ್ಯಕ್ರಮ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
.
ಜಾನುಕೊಂಡ GP ತೊಟ್ಟಿಗಳು & RO ವಾಟರ್ ಪ್ಲಾಂಟ್ಸ್ ಸ್ವಚ್ಛತೆ 6 ತಿಂಗಳ ನಂತರ ಮತ್ತೆ ಅಭಿಯಾನ
ಜನ ಜಾನುವಾರು ಕುಡಿಯುವ ನೀರಿನ ತೊಟ್ಟಿಗಳ ಸ್ವಚ್ಚತೆ ಇದ್ದರೆ ಯಾವ ರೋಗ ರುಜಿನಗಳು ಹತ್ತಿರ ಸುಳಿಯುವುದಿಲ್ಲ. ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ಕೊಳಚೆಯಂತ ನೀರನ್ನು ಕುಡಿದರೆ ದನಗಳ ಹಾಗೂ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಕುಡಿಯುವ ನೀರಿನ ತೊಟ್ಟಿಗಳನ್ನು ಎರಡ್ಮೂರು ದಿನಗಳಿಗೊಮ್ಮೆ ಸ್ಚಚ್ಛಗೊಳಿಸಬೇಕು.
ಜನ ಜಾನುವಾರುಗಳಿಗೆ ಕುಡಿವ ನೀರಿನ ಸಮಸ್ಯೆ ಸ್ವಚ್ಚತೆ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿರುವ ಹಿನ್ನೆಯಲ್ಲಿ ಕುಡಿಯುವ ನೀರು ಸಂಗ್ರಹಣೆ ತೊಟ್ಟಿಗಳ ಸ್ವಚ್ಚತೆ ಕಾಪಾಡುವಂತೆ ಈಗಾಗಲೆ ಜಿಲ್ಲೆಯ ಎಲ್ಲಾ ತಾಪಂ ಇಒ ಹಾಗೂ ಗ್ರಾಪಂ ಪಿಡಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
Share Post