ಚಳ್ಳಕೆರೆ : ಇಂದು ಚಳ್ಳಕೆರೆ ನಗರದ ಶಾಸಕರ ಭವನದ ಆವರಣದಲ್ಲಿ ನಡೆದ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಡಿ ಮತ್ತು ಅಂಗವಿಕಲರ ಕಲ್ಯಾಣ ಇಲಾಖೆ ವತಿಯಿಂದ ವಿಕಲಚೇತನರಿಗೆ ಆರು ತ್ರಿಚಕ್ರ ವಾಹನಗಳನ್ನು ವಿತರಣೆ ಮಾಡಲಾಯಿತು.
ಇನ್ನೂ ಸ್ಥಳೀಯ ಶಾಸಕ ಟಿ.ರಘುಮೂರ್ತಿ ವಿಕಲ ಚೇತನರಿಗೆ ಬೈಕ್ ಗಳನ್ನು ವಿತರಸಿ ನಂತರ ಮಾತನಾಡಿದ ಅವರು ನಿಮಗೆ ನೀಡಿದ ಬೈಕ್‌ಗಳನ್ನು ನಿಮ್ಮ ಸಂಬAಧಿಕರಿಗೆ ನೀಡದೆ ನಿವೇ ಓಡಿಸಿ, ಇನ್ನೂ ಉಳಿದ ವಿಕಲ ಚೇತನರಿಗೆ ಮುಮದಿನ ದಿನಗಳಲ್ಲಿ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು, ಇನ್ನೂ ಸರಕಾರದಿಂದ ವಿಲ ಚೇತನರಿಗೆ ಬರುವ ಎಲ್ಲಾ ಸೌಲಭ್ಯಗಳನ್ನು ತಲುಪಿಸುವ ಮೂಲಕ ನಿಮ್ಮ ಜೊತೆಗೆ ನಾವು ಇದ್ದೆವೆ ಎಂದು ಆತ್ಮಸ್ಥöರ್ಯ ತುಂಬಿದರು.
ಇನ್ನೂ ಇದೇ ಸಂಧರ್ಭದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ಅಧಿಕಾರಿ ವೈಶಾಲಿ ಮಾತನಾಡಿ, ಇಂದು ನೀಡಿದ 6 ತ್ರಿ ಚಕ್ರವವಾಹನಗಳನ್ನು 6 ಫಲಾನುಭವಿಗಳಿಗೆ ನೀಡಿದ ಮುಂದಿನ ದಿನಗಳಲ್ಲಿ ಎಲ್ಲಾ ಫಲಾನುಭವಿಗಳಿಗೆ ಜೇಷ್ಠತಾ ಆಧಾರದ ಮೇಲೆ ನೀಡಲಾಗುವುದು, ಇನ್ನೂ ತಾಲೂಕಿನಲ್ಲಿ ಇರುವ ಒಟ್ಟು ಫಲಾನುಭವಿಗಳಲ್ಲಿ ಶೇ.ಅರ್ಧದಷ್ಟು ಫಲಾನುಭವಿಗಳಿಗೆ ತ್ರಿಚಕ್ರ ವಾಹನ ನೀಡಲಾಗಿದೆ ಎಂದರು.
ಇದೇ ಸಂಧರ್ಭಧಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಯ್ಯ ನಗರಸಭೆ ಸ್ಥಾಮಿ ಸಮಿತಿ ಅದ್ಯಕ್ಷ ರಾಘವೇಂದ್ರ, ಮಾಜಿ ತಾಲೂಕ ಪಂಚಾಯಿ ಸದಸ್ಯರಾದ ಗಿರಿಯಪ್ಪ ಮುಖಂಡರುಗಳಾದ ಮಲ್ಲಿಕಾರ್ಜುನ, ಹನುಮಂತಪ್ಪ, ನನ್ನಿವಾಳ ಬಸವರಾಜ್, ಮುಖಂಡರು ಕಾರ್ಯಕರ್ತರು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.