ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ಹತ್ತಿರ ಮೋಟರ್ ಇನ್ ದಕ್ಷಿಣ ಡೇರ್ ರವರ ವತಿಯಿಂದ ಆಯೋಜಿಸಿದ್ದ ಬೈಕ್ ಮತ್ತು ಕಾರ್ ರ್ಯಾಲಿಯ ಐದನೇ ಪಂದ್ಯಾವಳಿಗೆ ಸ್ಥಳಿಯ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿದರು.
ಇನ್ನೂ ತಾಲೂಕಿನ ದೊಡ್ಡ ಉಳ್ಳಾರ್ತಿ, ಕಾವಲ್ ಸಮೀಪ ಆಯೋಜಿಸಿದ್ದ ಈ ಬೈಕ್ ಮತ್ತು ಕಾರು ರೇಸ್ ಗೆ ಚಾಲನೆ ನೀಡಿದ ಶಾಸಕ ಟಿ.ರಘುಮೂರ್ತಿ, ಬಯಲು ಸೀಮೆಯಲ್ಲಿ ಇಂತಹ ಬೈಕ್ ಕಾರು ರೇಸ್ ನಡೆಯುತ್ತಿರುವುದು ಬಯಲು ಸೀಮೆಯ ಯುವಕರಿಗೆ ಉತ್ಸವ ತರುವಂತಾಗಿದೆ ಈಗೇ ಪ್ರತಿಯೊಬ್ಬರಲ್ಲಿ ಕ್ರೀಡಾ ಮನೋಭಾವ ತಾಳಬೇಕು, ಇಂತಹ ಕ್ರೀಢೆಗಳಿಂದ ಪ್ರೇರಣೆಗೊಂಡು ರಾಜ್ಯ ಹಾಗೂ ರಾಷ್ಟç ಮಟ್ಟದಲ್ಲಿ ಹೆಸರು ಗಳಿಸಬೇಕು ಎಂದು ನೆರೆದಿದ್ದ ಯುವಕರಿಗೆ ಕಿವಿ ಮಾತುಹೇಳಿದರು.
ನಂತರ ಬೈಕ್ ಹಾಗೂ ಕಾರು ರೈರ‍್ಸ್ಗೆ ಸ್ಪರ್ಧೆಯಲ್ಲಿ ಸೋಲು ಗೆಲುವು ಖಚಿತ ಆದರೆ ಸೋತೆವು ಎಂದು ಕುಗ್ಗದೆ, ಆತಾಶೆರಾಗದೆ ನಿಮ್ಮ ಸ್ಪರ್ಧೆ ಗುರಿ ಹೊಂದಾಗಬೇಕು ಎಂದು ಶುಭರೈಸಿದರು.
ಇದೇ ಸಂಧರ್ಭದಲ್ಲಿ ರಾಜ್ಯ ಅಧ್ಯಕ್ಷರಾದ ಜಯದಾಸ್ ಮೆನನ್, ಆಯೋಜಕರಾದ ಎಮ್.ಚೇತನ್‌ಕುಮಾರ್, ಕಾಂಗ್ರೆಸ್‌ನ ಅಲ್ಪಸಂಖ್ಯಾತರ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಪರೀದ್‌ಖಾನ್, ನಗರಸಭೆ ಸದಸ್ಯರಾದ ರಮೇಶ್‌ಗೌಡ, ವಿಶ್ವಕರ್ಮ ರಾಜ್ಯಾಧ್ಯಕ್ಷರಾದ ಆರ್.ಪ್ರಸನ್ನ ಕುಮಾರ್, ಮುಖಂಡರುಗಳಾದ ಕೃಷ್ಣಮೂರ್ತಿ ಹಾಗೂ ಬೈಕ್ ರೈಡರ್ ಹನಿಕಾ, ನಿಖಿಲ್ ಹಾಗೂ ವಿವಿಧ ಮಹಾರಾಷ್ಟ್ರ ಶ್ರೀಲಂಕಾ ಕೇರಳ ಫ್ರಾನ್ಸ್ ದೇಶಗಳ ರೈಡರ್‌ಗಳು ಉಪಸ್ಥಿತರಿದ್ದರು.
ಬಾಕ್ಸ್ ಮಾಡಿ :
ಬಯಲು ಸೀಮೆಯ ಮಣ್ಣಿನ ರಸ್ತೆಗಳಲ್ಲಿ ಸುಮಾರು 45 ಕಿಲೋ, ದೂರದ ನನ್ನಿವಾಳ ವ್ಯಾಪ್ತಿಯ ದೊರೆಹಟ್ಟಿ ಗ್ರಾಮದ ಸಮೀಪಕ್ಕ ಒನ್ ವೇ ಮೂಲಕ ಹೋಗುವ ಸುಮಾರು 35 ಬೈಕ್ ರೈಡ್ ರ್‌ಗಳ ಸಹಾಸ ಹಾಗೂ ಸುಮಾರು ಕಾರುಗಳ ಸ್ಪರ್ಧೆಗಿಳಿದು ದೂಳೆಬ್ಬಿಸುವ ರೋಮಾಂಚನಕರವಾದ ದೃಶ್ಯಗಳು ನೊಡುಗರ ಕಣ್ಮನÀ ಸೆಳೆದವು.