ಚಳ್ಳಕೆರೆ : ನನ್ನನ್ನು ನಂಬಿ ಮ‌ೂರನೇ ಬಾರಿಗೆ ಶಾಸಕರನ್ನಾಗಿ ಆಯ್ಕೆ ಮಾಡಿದ ಚಳ್ಳಕೆರೆ ಕ್ಷೇತ್ರದ ಮತದಾರರಿಗೆ ಮೊದಲನೆಯ ದಾಗಿ ಧನ್ಯವಾದಗಳನ್ನು ಅರ್ಪಿಸುತ್ತೆನೆ ಎಂದು ಶಾಸಕ‌ ಟಿ.ರಘುಮೂರ್ತಿ ಹೇಳಿದರು.

ಅವರು ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ಪೂಜಾ ಕಾರ್ಯಕ್ರಮ ಹಾಗೂ ಬೆಂಬಲಿಗರು , ಕಾರ್ಯಕರ್ತರಿಗೆ ಧನ್ಯವಾದ ಹೇಳುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು
ನಮ್ಮ ಕಾಂಗ್ರೆಸ್ ಪಕ್ಷ ಚುನಾವಣೆ ಸಂಧರ್ಭದಲ್ಲಿ ಕೊಟ್ಟ ಭರವಸೆಯ ಗ್ಯಾರಂಟಿ ಗಳನ್ನು ಈಡೇರಿಸುವ ಮೂಲಕ ಮತದಾರರಿಗೆ ಉತ್ತಮ ರೀತಿಯಲ್ಲಿ ಆಡಳಿತ ನಡೆಸುತ್ತಿದೆ

ಇನ್ನೂ ಕ್ಷೇತ್ರದಲ್ಲಿ ಆಗುವ ಕೆಲವು ಕೆಲಸಗಳು ಬಹಳಷ್ಟು ಇವೆ ಆದರೆ ಈಗಲೇ ನಾನು ಏನು ಹೇಳುವುದಿಲ್ಲ ಬದಲಾಗಿ ನಮ್ಮದೇ ಸರಕಾರ ಇರುವುದರಿಂದ ಕ್ಷೇತ್ರದಲ್ಲಿ ಮಂತ್ರಿ ಮಾಡುವಷ್ಟು ಕೆಲಸಗಳನ್ನು ನಾನು ಮಾಡುವ ಭರಸೆ ಇದೆ ಎನ್ನುತ್ತಾರೆ

ಕೈ ತಪ್ಪಿದ ಮಂತ್ರಿ ಸ್ಥಾನಕ್ಕೆ ಅಸಮದಾನವಿದೇಯೇ..?

ಈಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹು ಸ್ಥಾನಗಳಿಂದ ಅಧಿಕಾರಕ್ಕೆ ಬಂದಿರುವುದು ಮತದಾರರು ಇಟ್ಟಿರುವ ವಿಶ್ವಾಸ ನಮಗಿದೆ ಅದರಂತೆ 16 ಕ್ಷೇತ್ರದಲ್ಲಿ 15 ಶಾಸಕರು ನಾಯಕ ಜನಾಂಗದ ಶಾಸಕರು ಆಯ್ಕೆಯಾಗಿದ್ದೆವೆ ಆದರೆ ಅದರಲ್ಲಿ ಕೆಲವರು ಹಿರಿಯರು, ಕಿರಿಯರು, ಹಲವು ಸ್ಥಾನ ಮಾನ ಇರುವ ಶಾಸಕರನ್ನು ವರಿಷ್ಟರು ಪರಿಗಣಿಸಿ ನಾಲ್ಕು ಸಚಿವ ಸ್ಥಾನ ನೀಡಿದ್ದರೆ, ಆದರೆ‌ ಮುಂದೊಂದು ದಿನ ಸ್ಥಾನಮಾನ ನೀಡುತ್ತಾರೆ ಎನ್ನುವ ಭರವಸೆ ನನಗಿದೆ

ಜಿಲ್ಲೆಯಲ್ಲಿ ಡಿ.ಸುಧಾಕರ್ ಗೆ ಒಲಿದ ಸಚಿವ ಸ್ಥಾನದ ಬಗ್ಗೆ ಏನು ಹೇಳುವಿರಿ..?

ನಿಜಕ್ಕೂ ಅಭಿನಂಧನೆಗಳು ಜಿಲ್ಲೆಯಲ್ಲಿ ನಾಲ್ಕು ಜನ ಶಾಸಕರು ಸೇರಿ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟೆದೆವೆ ಆದರೆ ರಾಜ್ಯದಲ್ಲಿ ಜೈನ್ ಸಮುದಾಯದಿಂದ ಗೆಲುವು ಸಾಧಿಸಿದ ಏಕೈಕ ಶಾಸಕರು ಡಿ.ಸುಧಾಕರ್ ಆದ್ದರಿಂದ ಅವರಿಗೆ ಸಚಿವ ಸ್ಥಾನ ಲಬಿಸಿದೆ.
ಇನ್ನೂ ಗೋಪಾಲಕೃಷ್ಣ ಹಾಗೂ ನಾನು, ನಾಯಕ ಸಮುದಾಯಕ್ಕೆ ಸೇರೆದ್ದೆವೆ ಆದರೆ ನಾಯಕ ಸಮುದಾಯದಲ್ಲಿ ನಾಲ್ಕು ಶಾಸಕರಿಗೆ ಸಚಿವ ಸ್ಥಾನ‌ ನೀಡಿದ್ದರಿಂದ ನಾವು ಸುಮ್ಮನಾದೆವು ಅದರಂತೆ ಲಂಬಾಣಿ, ಉಪ್ಪಾರ ಈಗೇ ಸಮುದಾಯಗಳಿಗೆ ತೃಪ್ತಿ ಪಡಿಸಲಾಗಿಲ್ಲ ಆದರೆ ಸರಕಾರ ನಮ್ಮದೆ ಇರುವುದರಿಂದ ನಮ್ಮ ಅಭಿವೃದ್ಧಿ ಕೆಲಸಗಳಿಗೆ ಸಚಿವ ಸ್ಥಾನ ಕೊರಗು ಇರಲಾರದು.

ಕ್ಷೇತ್ರದಲ್ಲಿ ‌ನಿಮ್ಮ‌ಮೊದಲ ಕೆಲಸ ಯಾವುದು..?

ಕ್ಷೇತ್ರದಲ್ಲಿ ಕಳೆದ‌ ಹತ್ತು ವರ್ಷಗಳಿಂದ ನಾನು ಯಾವುದೇ ಗ್ರಾಮಗಳನ್ನು‌ ಕಡೆಗಾಣಿಸದೆ ಸರ್ವತೋಮುಖ‌ ಅಭಿವೃದ್ದಿಗೆ ಶ್ರಮಿಸಿದ್ದೆನೆ‌, ಆದರಂತೆ ನಾನು ಕೆಲಸ ಮಾಡಿ ಹೇಳುತ್ತೆನೆ ನಾನು ಮೊದಲೇ ಹೇಳಿ ಸುದ್ದಿಯಾಗುವ ಶಾಸಕ‌ ನಾನಲ್ಲ , ನಗರದಲ್ಲಿ ಯುಜಿಡಿ, ಅರ್ಧಕ್ಕೆ ನಿಂತ ಕಟ್ಟಡಗಳು, ಸಮುದಾಯ ಭವನಗಳು, ಖಾಸಗಿ ಬಸ್ ನಿಲ್ದಾಣ, ಈಗೇ ಹಲವು ಅಭಿವೃದ್ಧಿ ಕಾಮಗಾರಿಗಳು ಇವೆ ಇವುಗಳನ್ನು ಸಂಪೂರ್ಣ ಮಾಡಿ ಅಭಿವೃದ್ಧಿ ಪಡಿಸುತ್ತೆನೆ ಎಂದರು.

ಇನ್ನೂ ಇದೇ ಸಂಧರ್ಭದಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು, ಭಾನುವಾರ ರಜಾ ದಿನವಾದರೂ ಮೂರು ಬಾರಿ ಗೆಲುವು ಪಡೆದ ಶಾಸಕ ಟಿ.ರಘುಮೂರ್ತಿಗೆ ಅಭಿನಂಧನೆ ಸಲ್ಲಿಸಲು ತಂಡಪೋ ತಂಡವಾಗಿ ಬಂದು ಶುಭಾ ಹಾರೈಸಿದರು.

Namma Challakere Local News
error: Content is protected !!