ಚಳ್ಳಕೆರೆ : ಬಯಲು ಸೀಮೆಯಲ್ಲಿ ರಣ ಬಿಸಿಲು ಉಘ್ರ ತಾಂಡವಾಡುತ್ತಿದ್ದು ಅದರಂತೆ ಇಂದು ಚಳ್ಳಕೆರೆ ನಗರದಲ್ಲಿ ಬೇಕರಿಯೊಂದಕ್ಕೆ ಅಗ್ನಿ ಸ್ಪರ್ಶಿಸಿ ಬೇಕರಿಯಲ್ಲಿರುವ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಇನ್ನೂ ಯಾವುದೇ ಪ್ರಾಣ ಹಾನಿ ಸಂಭವಿಸಿದೆ ಮಾಲೀಕರು ಹಾಗೂ ಸಿಬ್ಬಂದಿ ಕ್ಷೇಮವಾಗಿದ್ದಾರೆ.
ಇನ್ನೂ ನಗರದ ಹೃದಯ ಭಾಗವಾದ ಖಾಸಗಿ ಬಸ್ ಸ್ಟ್ಯಾಂಡ್ ಹಿಂಭಾಗ ಬಳಿಯಲ್ಲಿ ಬರುವ ಮಹಾಲಕ್ಷ್ಮಿ ಬೇಕರಿಯಲ್ಲಿ ಆಕಸ್ಮಿಕ ಬೆಂಕಿ ಕಾಣಸಿಕೊಂಡಿದ್ದು ಬೇಕರಿಯ ಮಾಲೀಕ ಕಿರಣ್ ಹಾಗೂ ಶಶಿಕುಮಾರ್ ಗಾಬರಿಗೊಂಡು ಬೇಕರಿ ಒಳಭಾಗದಲ್ಲಿ ಹೊಗೆಯ ಆವರಿಸಿಕೊಂಡು ಬಂದಾಗ ಮಾಲಿಕ ಬಾಗಿಲು ತೆಗೆದು ನೋಡಿದಾಗ ದಟ್ಟವಾದ ಹೊಗೆ ಕಂಡು ಬಂದಿದ್ದು
ಮಾಲಿಕ ತಕ್ಷಣವೇ ಆಗ್ನಿಶಾಮಕ ಗಳಕ್ಕೆ ಫೋನ್ ಮಾಡಿ ತಿಳಿಸಿದ ತಕ್ಷಣ ಬೇಕರಿಯ ಒಳಭಾಗದಲ್ಲಿ ಹಲವಾರು ಸಾಮಗ್ರಿಗಳು ಸುಟ್ಟು ಕರಕಲಾಗಿದ್ದವು
ಹಾಗೂ ಸ್ವೀಟ್ ಪದಾರ್ಥಗಳು ಹಾಳಾಗಿವೆ ಅಗ್ನಿಶಾಮಕ ಪೊಲೀಸರ ಕಾರ್ಯಾಚರಣೆಗಳಿಂದ ಯಾವುದೇ ಅಪಾಯವಾಗದೆ ಬೇಕರಿಯ ಮಾಲೀಕರು ಬೇಕರಿಯ ಕೆಲಸಗಾರರು ಪ್ರಾಣಾಪಯದಿಂದ ಪಾರಾಗಿದ್ದಾರೆ,
ಅಗ್ನಿಅವಗಡಕ್ಕೆ ಕಾರಣ :
ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ಅಂಗಡಿಗಳಿಗೆ, ಕಿರಾಣಿ ಷಾಪ್ ಗಳಿಗೆ ಪರವಾನಿಗೆ ನೀಡದರೆ ಸೂಕ್ತಿವಾದ ಜಾಗ ಹಾಗೂ ಅದರ ಸೂಚನೆಗಳನ್ನು ಪರೀಶಿಲಿಸಿ ಮಾಡಬೇಕಿತ್ತು ಆದರೆ ಇವರ ವೈಪಲ್ಯದಿಂದ ಕಿಟಕಿ ಇಲ್ಲದೆ, ಗಾಳಿ ಬೆಳಕು ಇಲ್ಲದೆ ಇರುವ ಗೋಡನ್ ಗಳಲ್ಲಿ ಬೇಕರಿ, ಪ್ಯಾಕಟರಿಗಳಿಗೆ ಪರವಾನಿಗೆ ನೀಡಿದರೆ ಇಂತಹ ದುರಂತಗಳು ಸಂಭಿಸುತ್ತಾವೆ ಎಂದು ಸ್ಥಳಲಿದ್ದ ಸಾರ್ವಜನಿಕರು ನಗರಸಭೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

About The Author

Namma Challakere Local News
error: Content is protected !!