ಗ್ರಾಮದ ಪಾವಗಡ ರಸ್ತೆಯಲ್ಲಿನ ಶ್ರೀ ಲಕ್ಷಿö್ಮÃಚನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಬೆಳಗ್ಗೆ ಶ್ರೀ ರಾಮಾನುಜಾಚಾರ್ಯರ 1006 ನೇ ಜಯಂತ್ಯುತ್ಸವ ಹಾಗೂ ಉಪನಯನದ ವಟುಗಳಿಗೆ ಸಮಾಶ್ರಯಣ, ಮತ್ತು ಮುದ್ರಾದಾರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು
ಶ್ರೀ ವೈಷ್ಣವ ಧರ್ಮದಲ್ಲಿ ಪ್ರತೀ ಕುಟುಂಬದಲ್ಲಿ ಜನಿಸಿದ ಮಕ್ಕಳಿಗೆ ಚಿಕ್ಕಂದಿನಲ್ಲೇ ಉಪನಯನ ಕಾರ್ಯ ನಡೆಸಿ ಅವರಿಗೆ ಶ್ರೀ ರಾಮಾನುಜಾಚಾರ್ಯರ ಆದರ್ಶ, ತತ್ವಗಳನ್ನು ತಿಳಿಸಿಕೊಟ್ಟು ಸ್ವಾಸ್ಥö್ಯ ಸಮಾಜದ ನಿರ್ಮಾಣಕ್ಕೆ ಅನುವು ಮಾಡಿಕೊಡಲಾಗುತ್ತಿದೆ ಎಂದರು
ಉಪನಯನದ ಪೌರೋಹಿತ್ಯವನ್ನು ಬಿ ಎಚ್ ಶ್ರೀನಿವಾಸ, ತುಳಸೀ ಆಚಾರ್ಯ, ಹರಿಪ್ರಸಾದ್ ಮತ್ತು ತಂಡದವರು ನಡೆಸಿಕೊಟ್ಟರು
ಜಯಂತ್ಯುತ್ಸವದ ಅಂಗವಾಗಿ ದೇವಸ್ಥಾನದ ಶ್ರೀ ಚನ್ನಕೇಶವಸ್ವಾಮಿ ಹಾಗೂ ಭಗವದ್ ಶ್ರೀ ರಾಮಾನುಜಾಚಾರ್ಯರಿಗೆ ಪಂಚಾಮೃತಾಭಿಷೇಕ ಹಾಗೂ ಹೂವಿನ ಅಲಂಕಾರ ಸೇವೆ ನೀಡಿದರು
ರಾಯದುರ್ಗದ ಮಲ್ಲಾಪುರಂ ವಿಪ್ರಮಲ್ಲೆöÊ ವಿಶಿಷ್ಟಾದವ್ವೆöÊತ ವಿಶ್ರಮಾತಾಶ್ರಮದ ಶ್ರೀ ಎ ಪಿ ರಾಮಮೂರ್ತಿ ಸ್ವಾಮೀಜಿ ಅವರಿಗೆ ಶ್ರೀ ವೈಷ್ಣವ ಸಮುದಾಯದವರು ಪೂರ್ಣ ಕುಂಭ ಸ್ವಾಗತ ನಡೆಸಿಕೊಟ್ಟರು
ಸಮುದಾಯದ ಸ್ವಾಮೀಜಿಗಳು ಮತ್ತು ಸಮಿತಿಯವರು ಉಪನಯನದ ವಟುಗಳಿಗೆ ಶ್ರೀ ಗಳಿಂದ ಸಮಾಶ್ರಯಣ ಮುದ್ದಾಧಾರಣಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು
ಉಪನ್ಯಾಸಕ ದಾವಣಗೆರೆ ನಯನಜಮೂರ್ತಿ ಮಾತನಾಡಿ ನಾವಿಂದು ಅಧುನಿಕ ಕಾಲಘಟ್ಟದ, ಸಾಮಾಜಿಕ ಬದಲಾವಣೆಗೆ ತಕ್ಕಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಮ್ಮ ಮಕ್ಕಳಿಗೆ ತಂತ್ರಜ್ಞಾನಾದಾರಿತ ಶಿಕ್ಷಣ ನೀಡಿ ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಅವರನ್ನು ತಯಾರು ಮಾಡಬೇಕಿದೆ ಎಂದರು
ಜಯAತ್ಯುತ್ಸವದಲ್ಲಿ ಪಾಲ್ಗೊಂಡವರಿಗೆ ಪ್ರಸಾದ ವಿತರಿಸಿ ಅನ್ನಸಂತರ್ಪಣೆ ಏರ್ಪಡಿಸಿದ್ದರು ಶ್ರೀಗಳ ಆಶೀರ್ವಚನ ರಾಮಾನುಜಾಚಾರ್ಯರ ಉತ್ಸವ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಮಧ್ಯಾಹ್ನ ತದಿಯಾರಾಧನೆ ಕಾರ್ಯಕ್ರಮ ನಡೆಸಿದರು ಕಾರ್ಯಕ್ರಮದಲ್ಲಿ ಬಿ ಗರುಡಾಚಾರ್ಯ, ಎಲ್ ನಾರಾಯಣಸ್ವಾಮಿ, ಶ್ರೀನಿವಾಸ, ಅನಂತ್, ಅಚ್ಯುತನ್, ವರದರಾಜು, ನರಸಿಂಹಮೂರ್ತಿ, ಕೃಷ್ಣಸ್ವಾಮಿ, ಗಿರೀಶ, ಕೃಷ್ಣಮೂರ್ತಿ, ಆಡಳಿತ ಮಂಡಳಿಯ ಅಧ್ಕ÷್ಷ ಎಸ್ ಎಚ್ ಆಡಳಿತ ಮಂಡಳಿಯ ಅಧ್ಯಕ್ಷ ಸತ್ಯನಾರಾಯಣಮೂರ್ತಿ, ಕೆ ಬಿ ರಾಮಕೃಷ್ಣ, ಎಸ್ ಹನುಮಂತರಾಯ, ಪ್ರಭಾಕರ, ವಾಸು, ರಾಜಕುಮಾರ, ಆಂಧ್ರ ಕರ್ನಾಟಕ ರಾಜ್ಯಗಳ ಶ್ರೀ ವೈಷ್ಣವ ಸಮುದಾಯದವರು ಗ್ರಾಮಸ್ಥರು ಇದ್ದರು
ಪೋಟೋ (ಪಿಆರ್‌ಪುರ ಧಾರ್ಮಿಕ 26 )
ಪರಶುರಾಮಪುರ ಗ್ರಾಮದ ಶ್ರೀ ಲಕ್ಷಿö್ಮÃಚನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಬೆಳಗ್ಗೆ ಶ್ರೀ ರಾಮಾನುಜಾಚಾರ್ಯರ 1006 ನೇ ಜಯಂತ್ಯುತ್ಸವ ಹಾಗೂ ಉಪನಯನದ ವಟುಗಳಿಗೆ ಸಮಾಶ್ರಯಣ, ಮತ್ತು ಮುದ್ರಾದಾರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ರಾಯದುರ್ಗದ ವಿಶ್ವಮಾತಾಶ್ರಮದ ಶ್ರೀ ರಾಮಮೂರ್ತಿ ಸ್ವಾಮೀಜಿ ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು ಆಡಳಿತ ಮಂಡಳಿಯ ಅಧ್ಯಕ್ಷ ಸತ್ಯನಾರಾಯಣಮೂರ್ತಿ, ಕೆ ಬಿ ರಾಮಕೃಷ್ಣ, ಎಸ್ ಹನುಮಂತರಾಯ, ಪ್ರಭಾಕರ, ವಾಸು, ರಾಜಕುಮಾರ, ಆಂಧ್ರ ಕರ್ನಾಟಕ ರಾಜ್ಯಗಳ ಶ್ರೀ ವೈಷ್ಣವ ಸಮುದಾಯದವರು ಗ್ರಾಮಸ್ಥರು ಇದ್ದರು

About The Author

Namma Challakere Local News
error: Content is protected !!