1979-80 ನೇ ಸಾಲಿನಲ್ಲಿ ಹತ್ತನೇ ತರಗತಿ ಬ್ಯಾಚ್‌ನಿಂದ
ಪರಶುರಾಮಪುರ ಗ್ರಾಮದ ಕರ್ನಾಟಕ ಪಬ್ಲಿಕ್‌ಸ್ಕೂಲ್ ಆವರಣದಲ್ಲಿನ ಸರ್ಕಾರಿ ಪ್ರೌಢಶಾಲಾ ವಿಭಾಗದ ಬಯಲು ರಂಗಮAದಿರದಲ್ಲಿ ಮೇ 28 ರ ಭಾನುವಾರ ಬೆಳಗ್ಗೆ 10 ಗಂಟೆಗೆ 1979-80 ನೇ ಸಾಲಿನ ಎಸ್ಸೆಸ್ಸೆಲ್ಸಿ ಬ್ಯಾಚ್‌ನ ವಯಿಂದ ಗುರುವಂದನೆ ಮತ್ತು ಗೆಳೆಯರ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪತ್ರಕರ್ತ ಡಿ ಎಸ್ ರಾಮು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಅಂದಿನ ಗುರುವಂದನೆ ಮತ್ತು ಗೆಳೆಯರ ಸ್ನೇಹಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುರುಗಳಾದ ನಿವೃತ್ತ ಪ್ರಾಚಾರ್ಯ ಜಿ ಗಿರಿಯಪ್ಪ ವಹಿಸುವರು ಸಾಹಿತಿ ಮರಿಕುಂಟೆತಿಪ್ಪಣ್ಣ, ಕೆಪಿಎಸ್‌ನ ಪ್ರಾಚಾರ್ಯ ನಾಗರಾಜು, ಉಪ ಪ್ರಾಚಾರ್ಯ ತುಂಗಭದ್ರಪ್ಪ ಗ್ರಾಮದ ವೇದಾವತಿ ಎಜುಕೇಷನ್ ಟ್ರಸ್ಟ್ನ ಅಧ್ಯಕ್ಷ ಎ ನಾಗೇಶ, ಕಾರ್ಯದರ್ಶಿ ಎ ಸುಗುಣ ಅವರನ್ನು ಗೌರವಿಸಲಾಗುವುದು
2021-22 ನೇ ಸಾಲಿನಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ಪುಟ್ಟಲಿಂಗಪ್ಪ, ಕೆ ರಾಮಚಂದ್ರಪ್ಪ, ವಿ ಪ್ರಕಾಶ, ದುರುಗಮ್ಮ, ಚಿಕ್ಕಮ್ಮ, ಶಾರದಮ್ಮ, ವಿಜಯಮ್ಮ ಮತ್ತಿತರರನ್ನು ಗೌರವಿಸಲಾಗುವುದು
ಅಂದು ಬೆಳಗ್ಗೆ ಚಿತ್ರದುರ್ಗದ ಶ್ರೀ ಹರಿ ವಾದ್ಯವೃಂದದ ವತಿಯಿಂದ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಅಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಅನ್ನಸಂತರ್ಪಣೆ ಏರ್ಪಡಿಸಲಾಗುವುದು ಅಂದಿನ ಕಾರ್ಯಕ್ರಮವನ್ನು ಪತ್ರಕರ್ತ ಡಿ ಎಸ್ ರಾಮು, ಶ್ರೀನಿವಾಸುಲು, ಕೆ ವಿ ಸುಬ್ರಮಣ್ಯ, ಈ ನಾಗರಾಜು ನಿರ್ವಹಿಸುವರು ಎಂದು ಪ್ರಕಟಣೆ ತಿಳಿಸಿದೆ