ಚಳ್ಳಕೆರೆ : ರಾಜ್ಯಾದ್ಯಂತ ಸುರಿದ ಬಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿ ಅಪಾರ ಸಾವು ನೋವುಗಳಾಗಿವೆ.
ಇನ್ನೂ ಬೆಂಗಳೂರು ನಗರಿಯಲ್ಲಿ ಒರ್ವ ಯುವತಿ ಅಂಡರ್ ಪಾಸ್ ದಾಟುವ ವೇಳೆ ಕಾರು ನೀರಿನಲ್ಲಿ ಸಿಲುಕಿ ಮೃತಪಟ್ಟ ಘಟನೆ ರಾಜ್ಯದ ಜನತೆಯಲ್ಲಿ ಮಡುಗಟ್ಟಿದೆ.
ಇನ್ನೂ ಅದರಂತೆ ರಾಜ್ಯದ ತುಂಬೆಲ್ಲ ಸುರಿದ ಬಾರೀ ಮಳೆಗೆ ಅಪಾರ ಬೆಳೆ ನಷ್ಟವಾಗಿ ರೈತರು ಕಣ್ಣಿರಿನಲ್ಲಿ ಕೈ ತೊಳೆಯುವಂತಾಗಿದೆ.
ಅದರಂತೆ ಬಯಲು ಸೀಮೆ ಚಳ್ಳಕೆರೆ ತಾಲೂಕಿನ ಜಡೆಕುಂಟೆ ಗ್ರಾಮದ ರೈತ ಚಿಕ್ಕಣ್ಣರವರ ಸುಮಾರು 4 ಎಕರೆ ಜಮೀನಿನಲ್ಲಿ ಬೆಳೆದು ನುಗ್ಗೆ ಗಾಳಿಮಳೆಗೆ ಸಂಪೂರ್ಣ ವಾಗಿ ಹಾನಿಯಾಗಿ ನೆಲಕ್ಕೆ ಉರುಳಿದ್ದು ಲಕ್ಷಾಂತರ ರೂಪಯಿ ನಷ್ಟವಾಗಿದೆ
ಇನ್ನೂ ಪ್ರಕೃತಿ ವಿಕೋಪಕ್ಕೆ ಸಿಲುಕಿದ ರೈತನ ಬೆಳೆಗೆ ಸರಿಯಾದ ಪರಿಹಾರ ನೀಡುವಂತೆ ರೈತ ಚಿಕ್ಕಣ್ಣ ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ