ಚಳ್ಳಕೆರೆ : ಕಾಲೇಜ್ ವಿದ್ಯಾರ್ಥಿನಿಯ ಡಾನ್ಸ್ ಗೆ ಅಶ್ಲೀಲ ಚಿತ್ರ ಎಡಿಟ್ ಮಾಡಿ ಟ್ರೋಲ್ ಮಾಡುವ ಕದಿಮರನ್ನು ಇಂದು ಚಳ್ಳಕೆರೆ ಪೊಲೀಸರು ಎಡೆಮುರಿ ಕಟ್ಟಿದ್ದಾರೆ
ಇನ್ನೂ ಈ ಘಟನೆಗೆ ಸಂಬಂಧಿಸಿದ ಚಳ್ಳಕೆರೆ ನಗರದ ಯುವತಿಯ ಡಾನ್ಸ್ ಗೆ ಅಶ್ಲೀಲ ಚಿತ್ರಗಳನ್ನು ಎಡಿಟ್ ಮಾಡಿ ಅದನ್ನು ಮತ್ತೆ ಇನ್ಸಲ್ ಗ್ರಾಮ್ ಪೇಜ್ ಗೆ ಹಾಕಿ ಕಾಮೆಂಟ್, ಲೈಕ್ ನೋಡುವ ಖದೀಮರು ಇಂದು ಪೊಲೀಸರ ಅತಿಥಿಯಾಗಿದ್ದಾರೆ.
ವಿದ್ಯಾರ್ಥಿನಿಯ ಇನ್ಸ್ತಗ್ರಾಮ್ ಬಳಸಿ ಅದರಲ್ಲಿರುವ ಡಾನ್ಸ್ ಗೆ ಅಶ್ಲೀಲ ಚಿತ್ರವನ್ನು ಎಡಿಟ್ ಮಾಡಿ ಟ್ರೋಲ್ ಮಾಡುವ ಯುವಕನನ್ನು ಸಾರ್ವಜನಿಕರು ಇಂದು ಪೊಲೀಸ್ ರಿಗೆ ಒಪ್ಪಿಸಿ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ.
ಇನ್ನೂ ಸಾರ್ವಜನಿಕರ ಮಾಹಿತಿ ಪ್ರಕಾರ ಇವರು ಸಾಮಾಜಿಕ ಜಾಲತಾಣಗಳ ಪೇಕ್ ಅಕೌಂಟ್ ಕ್ರಿಯೆಟ್ ಮಾಡಿ ಅದರಿಂದ ಪೋಸ್ಟ್ ಮಾಡಲಾಗುತ್ತಿದೆ ಇನ್ನೂ ಇವರು ಸುಮಾರು 60 ರಿಂದ 70 ಜನ ಹುಡುಗಿಯರ ಪೊಟೋ ಕ್ರಿಯೆಟ್ ಮಾಡಲಾಗಿದೆ ಎಂದು ಸ್ಥಳೀಯರ ಅಭಿಪ್ರಾಯವಾಗಿದೆ.
ಇನ್ನೂ ಇದರ ಬಗ್ಗೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ದೇಸಾಯಿರವರನ್ನು ಸಂಪರ್ಕಿಸಿದರೆ ಈ ಪ್ರಕರಣದ ಹಿಂದೆ ಎಷ್ಟು ಯುವಕರು ಇದ್ದಾರೆ ಎಲ್ಲಿ ಕ್ರಿಯೆಟ್ ಮಾಡುತ್ತಾರೆ. ಇನ್ನೂ ಯಾವುದಕ್ಕೆ ಬಳಕೆ ಮಾಡಿಕೊಂಡಿದ್ದಾರೆ ಎಂಬದನ್ನು ಸೈಬರ್ ಕ್ರೈಮ್ ಡಿಪಾರ್ಟ್ಮೆಂಟ್ ತನಿಖೆ ಮಾಡುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನೂ ಇಂತಹ ಟ್ರೋಲ್ ರು ಪೊಲೀಸರ ಅತಿಥಿಯಾದ ತಕ್ಷಣ ನಗರದ ಯುವಕರೆಲ್ಲರು ಪೊಲೀಸ್ ಠಾಣೆಯ ಮುಂದೆ ಗುಂಪು ಕಟ್ಟಿಕೊಂಡು ಇಂತವನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ನೂರಾರು ಯುವಕರು ಜಮಾಯಿಸಿದ್ದರು