ಚಳ್ಳಕೆರೆ : ನಗರದಲ್ಲಿ ಕಳ್ಳರು ಸರಣಿ ಗಳ್ಳತನ ಮಾಡುವ ಮೂಲಕ ತಮ್ಮ ಕೈ ಚಳಕ ತೋರಿದ್ದಾರೆ.
ಇನ್ನೂ ನಗರದಲ್ಲಿ ಪ್ರತಿ ವಾರವು ಒಂದಿಲ್ಲೊAದು ಕಳ್ಳತನ ಪ್ರಕರಣಗಳು ಬೆಳಕಿಗೆ ಬರುತ್ತಿದೆ.
ಅದರಂತೆ ಇಲ್ಲಿನ ನಗರದಲ್ಲಿ ಶುದ್ದ ಕುಡಿಯುವ ನೀರಿಗಾಗಿ ಅಳವಡಿಸಿರುವ ಸುಮಾರು ಘಟಕಗಳು ಕಳೆದ ಹಲವು ವರ್ಷಗಳಿಂದ ಸೇವೆ ನೀರುತ್ತಿದೆ ಆದರೆ ಕಳೆದ ತಡರಾತ್ರಿ ಕಳ್ಳರು ಶುದ್ದ ನೀರಿನ ಘಟಕದಲ್ಲಿ ಇದ್ದ ಕಾಯಿನ್ ಭೂತ್‌ಗಳನ್ನು ಕದ್ದೊಯಿದ್ದಾರೆ.
ಒಂದೇ ರಾತ್ರಿಯಲ್ಲಿ ಸುಮಾರು ಮೂರು ಕಡೆಗಳಲ್ಲಿ ಕಾಯಿನ್ ಭೂತ್‌ಗಳ ಪೆಟ್ಟಿಗೆ ಹಾಗೂ ಅದರಲ್ಲಿ ಇರುವ ಹಣವನ್ನು ಕಳ್ಳರು ದೋಚಿದ್ದಾರೆ.
ಇನ್ನೂ ಘಟಕದ ಗ್ಲಾಸ್ ನ್ನು ಹೊಡೆದು ಹೊಳ ನುಗ್ಗಿದ ಕಳ್ಳರು ನಗರದ ಶಾಸಕರ ಭವನದ ಆವಣದಲ್ಲಿ ಇರುವ ಘಟಕ ಹಾಗೂ ನಗರಸಭೆ ಹಳೆ ಕಟ್ಟದ ಆವರಣದಲ್ಲಿ ಇರುವ ಘಟಕ ಇನ್ನೂ ಅಜ್ಜನಗುಡಿ ರಸ್ತೆ ಆಂಜನೇಯ ದೇವಾಸ್ಥಾನದ ಬಳಿ ಇರುವ ಘಟಕಗಳಿಗೆ ಸ್ಥಾಪಿಸಿರುವ ಕಾಯಿನ್ ಭೂತ್‌ಗಳನ್ನು ಕದ್ದೊಯಿದ್ದಾರೆ ಎನ್ನಲಾಗಿದೆ.

About The Author

Namma Challakere Local News
error: Content is protected !!