ಚಳ್ಳಕೆರೆ : ಬಯಲು ಸೀಮೆಯೆಂದೇ ಪ್ರಖ್ಯಾತಿ ಪಡೆದ ಮಧ್ಯಕನಾಟಕ ಭಾಗದ ಚಳ್ಳಕೆರೆ ತಾಲೂಕು ವರ್ಷದ ಹಲವು ತಿಂಗಳು ಕಾಲ ಇಲ್ಲಿ ಬೆಸಿಗೆ ತಾಪ ವೀಪರೀತ ಇಂತಹ ಉಷ್ಣಾಂಶ ಇರುವ ಇಲ್ಲಿ ವನ್ಯ ಜೀವಿಗಳು, ಮನಷ್ಯರು ತಮ್ಮ ದಣಿವನ್ನು ನೀಗಿಸಿಕೊಳ್ಳಲು ನೀರಿನ ಮೊರೆ ಹೋಗುವುದು ಮಾಮೂಲಿಯಾಗಿದೆ
ಅದರಂತೆ ಮೇ ತಿಂಗಳಿAದ ಬಿಸಿಲು ಜಳ ಇನ್ನೂ ಹೆಚ್ಚಾಗುವ ಸಂಭವದಲ್ಲಿ ಇಲ್ಲಿನ ಜನರು ಮದ್ಯಾಹ್ನದ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಈಜು ಕೊಳದ ಮೊರೆ ಹೋಗಿ ಸುಮಾರು ತಾಸುಗಟ್ಟಲೆ ನೀರಿನಲ್ಲಿ ದಣಿವನ್ನು ನೀಗಿಸಿಕೊಳ್ಳುವುದು ಕಾಣಬಹುದು
ಬಿಸಿಲಿನ ಬೇಗೆಯಿಂದ ಕಂಗಾಲಾಗಿರುವ ಹಳ್ಳಿಗಳ ಜನತೆ ದಣಿವು ನೀವಾರಿಸಿಕೊಳ್ಳಲು ಜಮೀನಿಲ್ಲಿರುವ ಈಜಾಡಲು ನೀರಿನ ತೊಟ್ಟಿಗಳ ಮೊರೆ ಹೋಗುತ್ತಿದ್ದಾರೆ.
ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದ ಸಮೀಪವಿರುವ ರೈತರ ಜಮೀನಿಲ್ಲಿ ನೀರು ಸಂಗ್ರಹಣೆಗಾಗಿ ನಿರ್ಮಿಸಿರುವ ನೀರಿನ ತೊಟ್ಟಿಯಲ್ಲಿ ಮಕ್ಕಳು ಈಜಾಡುವ ಮೂಲಕ ಬಿಸಿನ ದಣಿವಾರಿಕೊಳ್ಳುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಹಾಗುತ್ತಿದೆ.
ಇನ್ನೂ ಶಾಲೆಗಳಿಗೆ ಬೇಸಿಗೆ ರಜೆ ಇರುವುದರಿಂದ ವಿದ್ಯಾಥಿಗಳು ನೀರಿನ ತೊಟ್ಟಿ, ಹೊಲದಲ್ಲಿ ಇರುವ ದೊಡ್ಡ ಹೊಂಡಗಳು ಹಾಗೂ ವೇದಾವತಿ ನದಿ, ಕೆರೆಗಳಲ್ಲಿ ಈಜಲು ಮುಗಿಬೀಳುತ್ತಿದ್ದಾರೆ.
ಇಂತಹ ಒಂದು ಬಿಸಿಲು ನಾಡಿನಲ್ಲಿ ಕನಿಷ್ಟ ಪಕ್ಷ ಒಂದು ಈಜು ಕೋಳ ಇಲ್ಲದೆ ಇರವುದು ವಿಪಯಾಸವೇ ಸರಿ
ಆದರೆ ಮೂರು ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಕ್ಷೇತ್ರದ ಚುಕ್ಕಾಣಿ ಹಿಡಿದ ಶಾಸಕ ಟಿ,ರಘುಮೂರ್ತಿ ಇಂತಹ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ ಕ್ಷೇತ್ರಕ್ಕೆ ಏನು ಬೇಕು ಏನು ಬೇಡ ಎಂಬುದನ್ನು ಮನಗಾಣಬೇಕಿದೆ ಇನ್ನೂ ತಮ್ಮದೇ ಆದ ಕಾಂಗ್ರೆಸ್ ಸರಕಾರ ಕೂಡ ರಚನೆ ಹಾಗಿದೆ ಆದ್ದರಿಂದ ಈ ಬಾಗಕ್ಕೆ ರಘುಮೂರ್ತಿಯ ಮೊದಲ ಕೆಲಸ ಯಾವುದು ಎಂಬುದು ಕ್ಷೇತ್ರದ ಜನರ ಯಕ್ಷ ಪ್ರಶ್ನೆಯಾಗಿದೆ.