ಚಳ್ಳಕೆರೆ : ಆಯಿಲ್ ಸಿಟಿಯ ಅದಿಪತ್ಯಕ್ಕೆ ಮೂರನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಲು ಶಾಸಕ ಟಿ.ರಘುಮೂರ್ತಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಬಹು ನೀರಿಕ್ಷೆಯಂತೆ ಸಾವಿರಾರು ಕಾರ್ಯಕರ್ಯರ ಮಧ್ಯೆ ಬೃಹತ್ ಮೆರವಣೆಗೆಯಲ್ಲಿ ಆಗಮಿಸಿದ ಶಾಸಕ ಟಿ.ರಘುಮೂರ್ತಿ ಬೆಂಗಳೂರು ರಸ್ತೆಯಲ್ಲಿರುವ ತಮ್ಮ ನಿವಾಸದಿಂದ ಪ್ರಾರಂಭಗೊAಡ ಮೆರವಣಿಗೆ ಸಾವಿರಾರು ಜನಸಂಖ್ಯೆಯಲ್ಲಿ ತೆರೆದ ವಾಹನದ ಮೂಲಕ ಆಗಮಿಸಿದ ರಘುಮೂರ್ತಿಗೆ ಕೈ ಕಾರ್ಯಕರ್ತರು ಬಿಸಿಲು ಲೆಕ್ಕಿಸದೆ ಜಯ ಗೋಷಗಳನ್ನು ಮೊಳಗಿಸಿದರು,
ಇನ್ನೂ ಬೃಹತ್ ರ‍್ಯಾಲಿಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಟಿ.ರಘುಮೂರ್ತಿರವರು ನಗರದ ನೆಹರು ವೃತ್ತದಿಂದ ಅಭಿಮಾನಿಗಳತ್ತ ಕೈ ಬೀಸುತ್ತಾ ಮುಂದೆ ಸಾಗಿದರು ನಂತರ ಅಭಿಮಾನಿಗಳೆ ತಯಾರಿಸಿದ ಬೃಹತ್ ಹೂವಿನ ಮಾಲೆಯನ್ನು ಕ್ರೇನ್ ಮೂಲಕ ಹಾಕಿ ಈ ಬಾರಿ ಕಾಂಗ್ರೇಸ್ ಗೆಲುವು, ಮತ್ತೊಂದು ಬಾರಿ ಶಾಸಕ ಟಿ.ರಘುಮೂರ್ತಿ ಎಂದು ಜಯ ಘೋಷಗಳನ್ನು ಕೂಗಿದರು.
ಇನ್ನೂ ಕಿಕ್ಕಿರಿದ ಜನರ ಮಧ್ಯೆ ಮುಂದೆ ಸಾಗಿದ ಬೃಹತ್ ರ‍್ಯಾಲಿಯಲ್ಲಿ ಶಾಸಕ ಟಿ.ರಘುಮೂರ್ತಿ ಹಾಗೂ ಇತರರು ಅಂಬೇಡ್ಕರ್ ವೃತ್ತಕ್ಕೆ ತಲುಪಿ
ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಹೂವಿನ ಹಾರ ಹಾಕಿ ಸಂವಿಧಾನ ಆಶಕ್ಕೆ ಮತ್ತೊಂದು ಬದ್ದನಾಗಿದ್ದೆನೆ ಎಂದು ಜನಗಳತ್ತ ಕೈ ಬೀಸಿದರು ನಂತರ ತಾಲೂಕು ಕಛೇರಿಗೆ ದಾವಿಸಿದ ಅವರು ನಾಮಪತ್ರ ಸಲ್ಲಿಸಿದರು, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೆ.ವೀರಭದ್ರಪ್ಪ, ಶಶಿಧರ್, ಮತ್ತು ಇತರರ ಜೊತೆಯಲ್ಲಿದ್ದರು.

ನಾಮಪತ್ರ ಸಲ್ಲಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಟಿ.ರಘುಮೂರ್ತಿ, ನನ್ನ ಎರಡು ವರ್ಷದ ಸೇವೆ ಜನರ ಮುಂದೆ ಇದೆ ಈಡೀ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚು ಆಧ್ಯತೆ ನೀಡುವ ಮೂಲಕ ರೈತ ಜೀವನಾಡಿಯಾಗಿ ವೇದಾವತಿ ಕೆರೆಗೆ ನೀರು ಬೀಡಿಸುವ ಮೂಲಕ ಬಯಲು ಸೀಮೆ ಹಸಿರುವ ಕರಣಕ್ಕೆ ಬದ್ದರಾಗಿದ್ದೆವೆ, ಅಂತಯೇ ಮೂರನೇ ಬಾರಿಗೆ ಜನರೇ ಮುಂದಿನ ಬಾರಿಗೆ ಬಯಸಿ ತಿರ್ಮಾಣ ಕೈ ಗೊಂಡು ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ, ಇನ್ನೂ ಇಂದು ನೆರೆದ ನಾಮಪತ್ರ ಸಲ್ಲಿಕೆಗೆ ಸೇರೆದ ಜನರೆ ಸಾಕ್ಷಿಯಾಗಿ 2023ಕ್ಕೆ ಖಚಿತ ಎಂಬ ಸೂಚನೆ ಕೂಡ ಮತದಾರರೇ ನಿರ್ಣಯಿಸಿದ್ದಾರೆ ಎಂದರು.

ಎರಡು ಅವಧಿಯಲ್ಲಿ ಅಭಿವೃದ್ದಿಗೆ ಒತ್ತು :
ಕಾಂಗ್ರೇಸ್ ಸರ್ಕಾರದಲ್ಲಿ ಇರುವಾಗ ವೇದಾವತಿ ಪಾತ್ರದಿಂದ ವಾಣಿವಿಲಾಸ ಸಾಗದರ ಮೂಲಕ 0.25 ಟಿ ಎಂ ಸಿ ನೀರನ್ನು ಹರಿಸಿ ಸಾವಿರಾರು ಎಕರೆ ಕೃಷಿ ಮಾಡಲು ಸಹಕಾರಿಯಾಗಿದೆ. ಬೇಸಿಗೆಯಲ್ಲಿ ಸಹ ವೇದಾವತಿ ಪಾತ್ರದಲ್ಲಿ ನೀರು ನಿಂತಿದ್ದು ರೈತರಿಗೆ ವರದಾನವಾಗಿದೆ.
ತುಂಗಾಭದ್ರ ಹಿನ್ನೀರಿನಿಂದ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಕುಡಿಯುವ ಮನೆ ಮನೆಗೆ ಕುಡಿಯುವ ನೀರಿನ ನಲ್ಲಿ ಸಂಪರ್ಕ, ಇಂಜಿನಿಯರಿAಗ್ ಕಾಲೇಜ್. ಸರಕಾರಿ ತರಬೇತಿ ಸಂಸ್ಥೆ, ಸಾರಿಗೆ ಬಸ್ ನಿಲ್ದಾಣ, ಘಟಕ, ನಗರ ಹಾಗೂ ಗ್ರಾಮೀಣ ರಸ್ತೆ ಅಭಿವೃದ್ಧಿ ಸರಕಾರಿ ಶಾಲಾ ಕಾಲೇಜುಗಳ ಕಟ್ಟಡಗಳ ಅಭಿವೃದ್ಧಿ. ,ಮಿನಿ ವಿಧಾನ ಸೌಧ,ವಿವಿಧ ಸಮುದಾಯಗಳ ಸಮುದಾಯ ಭವನ ನಿರ್ಮಾಣ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ ಆದ್ದರಿಂದ ಕ್ಷೇತ್ರದ ಮತದಾರರು ಮೂರನೇ ಬಾರಿಯ ಅವಧಿಗೂ ಯ್ಯಾಟ್ರಿಕ್ ಗೆಲವು ತಂಡು ಕೊಡುತ್ತಾರೆ ಎಂಬ ಭವರವಸೆ ನನಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಅಪೂರ್ಣ ಕಾಮಗಾರಿಗೆ ಜೀವ ತುಂಬುವ ಕಾರ್ಯ :
ಬಿಜೆಪಿ ಸರಕಾರದ ಅವಧಿಯಲ್ಲಿ ಹಿಂಪಡೆದಿರುವುದು ಅಭಿವೃದ್ಧಿಗೆ ಕುಂಠಿತವಾಗಿರುವುದು ನನನಗೆ ಬೇಸರ ತಂದಿದೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವುದು ಖಚಿತ ಹೆಚ್ಚಿನ ಅನುದಾನ ತಂದು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಿ ನಗರಸಭೆವ್ಯಾಪ್ತಿಯಲ್ಲಿ ಒಳ ಚರಂಡಿ ಯೋಜನೆ, ಸುಸಜ್ಜಿತ ಹೈಟೆಕ್ ಕ್ರೀಡಾಂಗಣ ಸೇರಿದಂತೆ ಕೆಲವು ಅಭಿವೃದ್ಧಿ ಕಾಮಗಾರಿಗೆ ಬಂದ ಅನುದಾನವನ್ನು ಮಾಡುವುದಾಗಿ ತಿಳಿಸಿದರು.

About The Author

Namma Challakere Local News
error: Content is protected !!