ಚಳ್ಳಕೆರೆ : ಕರ್ನಾಟಕದ ವಿಧಾನ ಸಭೆ ಚುನಾವಣೆಗೆ ಇನ್ನೂ ಕೇವಲ 29 ದಿನ ಬಾಕಿ ಇರುವಾಗಲೆ ಚುನಾವಣೆ ಆಯೋಗ ಕಟ್ಟು ನಿಟ್ಟಿನ ಸೂಚನೆಯ ಮೂಲಕ ಬಿಗಿ ಭದ್ರತೆ ಹೊದಗಿಸುತ್ತದೆ ಅದರಂತೆ ಚುನಾವಣೆಯಲ್ಲಿ ಅಕ್ರಮ ನಡೆಯದಂತೆ ಕ್ಷೇತ್ರಗಳಿಗೆ ಅಕ್ರಮ ವಸ್ತುಗಳು ಸಾಗಟವಾಗದಂತೆ ಚೆಕ್ ಪೋಸ್ಟ್ ನಿರ್ಮಿಸಿ ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡುತ್ತಿದ್ದಾರೆ
ಅದರಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‌ಜೆ, ರವರು ಚಳ್ಳಕೆರೆ ತಾಲೂಕಿಗೆ ದೀಡೀರ್ ಬೇಟಿ ನೀಡಿ ಚೆಕ್ ಪೋಸ್ಟ್ ತಪಾಸಣೆ, ಭದ್ರತಾ ಕೊಠಡಿ ಈಗೇ ಹಲವು ಚುನಾವಣೆಯ ಮುಖ್ಯ ಘಟ್ಟಗಳನ್ನು ಪರೀಶಿಲಿಸಿದರು.
ಇನ್ನೂ ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭದ್ರತಾ ಕೊಠಡಿಗೆ ಬಿಗಿ ಪೊಲಿಸ್ ಭದ್ರತೆ ಹೊದಗಿಸಿ ದಿನದ 24 ಗಂಟೆಗಳ ಕಾಲ ಸಿಸಿಟಿವಿ ಕಣ್ಗಾವಲಿನಲ್ಲಿ ಮತಪೆಟ್ಟಿಗೆಗಳು ಇರಬೇಕು, ಚೆಕ್ ಪೋಸ್ಟ್ ತಪಾಸಣೆ ಹೆಚ್ಚಿನದಾಗಿ ನಡೆಯಬೇಕು ಎಂದಿದ್ದಾರೆ.
ಇನ್ನೂ ಚುನಾವಣೆ ಅಧಿಕಾರಿ ಬಿ.ಆನಂದ ಮಾತನಾಡಿ, ತಾಲೂಕಿನಲ್ಲಿ ಈಗಾಗಲೇ ಚುನಾವಣೆಗೆ ಸಕಲ ತಯಾರಿ ಮಾಡಿಕೊಂಡಿದ್ದೆವೆ ಅದರಂತೆ ಕ್ಷೇತ್ರದಲ್ಲಿ ಯಾವುದೇ ಅಕ್ರಮ ನಡೆಯದಂತೆ, ಅಭ್ಯರ್ಥಿಗಳ ಪರ ಪ್ರಚಾರ ಈಗೇ ಎಲ್ಲಾವನ್ನು ಕಣ್ಗಾವಲಿನಲ್ಲಿ ಸೇರೆಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ಸಂಧರ್ಭದಲ್ಲಿ ಸಹಯಾಕ ಚುನಾವಣೆ ಅಧಿಕಾರಿ,ತಹಶೀಲ್ದಾರ್ ರೋಹನ್ ಪಾಷ, ಎಇಇ.ವಿಜಯ ಬಾಸ್ಕ್ರ್, ಚುನಾವಣೆ ಶಾಖೆಯ ಪ್ರಕಾಶ್, ಶ್ರೀಧರ್, ಆರ್‌ಐ.ಲಿಂಗೇಗೌಡ, ವಿಎ.ಪ್ರಕಾಶ್, ಡಿ.ಶ್ರೀನಿವಾಸ್,ಓಬಳೇಶ್, ಚೆನ್ನಕೇಶವ, ಇತರರು ಇದ್ದರು.