ಚಳ್ಳಕೆರೆ : ರಾಜ್ಯಾದ್ಯಾಂತ ಜೆಡಿಎಸ್ ಪಕ್ಷದಿಂದ ಪ್ರಚಾರ ಕೈ ಗೊಂಡಿರುವ ಪಂಚರತ್ನ ರಥ ಯಾತ್ರೆ ನಾಳೆ ಆಯಿಲ್ ಸಿಟಿಗೆ ಪ್ರವೇಶ ಪಡೆಯಲಿದೆ ಎಂದು ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 2023 ಕ್ಕೆ ಜೆಡಿಎಸ್ ಗೆಲುವು ನಿಶ್ಚಿತ ಆದ್ದರಿಂದ ಈ ಬಾರಿ ಜನರು ನಮ್ಮ ಕೈ ಹಿಡಿಯುವ ವಿಶ್ವಾಸ ನಮಗಿದೆ ಅದರಂತೆ ಪಂಚರತ್ನ ರಥಯಾತ್ರೆ ನಾಳೆ ತುರುವನೂರು ಗ್ರಾಮದಿಂದ ಪ್ರಾರಂಭವಾದ ರಥಯಾತ್ರೆ ಚಳ್ಳಕೆರೆ, ಪರುಶುರಾಂಪುರ ಈಗೇ ವಿವಿಧ ಪ್ರಮುಖ ಗ್ರಾಮಗಳಲ್ಲಿ ತೆರಳಿ ಪಕ್ಷದ ಅಭಿವೃದ್ದಿ ಕಾರ್ಯಗಳನ್ನು ಪ್ರಾಚಾರ ಮಾಡುತ್ತಾ ಮತ್ತೆ ಚಳ್ಳಕೆರೆ ನಗರದ ಬಿಎಂಜಿಹೆಚ್‌ಎಸ್ ಪ್ರೌಢಶಾಲಾ ಮೈದಾನದಲ್ಲಿ ಬಹಿರಂಗ ಸಭೆ ನಡೆಸಲಾಗುವುದು ಎಂದು ಅಭ್ಯರ್ಥಿ ಎಂ.ರವೀಶ್ ಕುಮಾರ್ ಹೇಳಿದರು.
ತಾಲೂಕು ಅಧ್ಯಕ್ಷ ಪಿ.ತಿಪ್ಪೆಸ್ವಾಮಿ ಮಾತನಾಡಿ, ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ವರ್ಚಸ್ಸು ಕೂಡ ಎಚ್ಚಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಇನ್ನೂ ರಾಜ್ಯಾದ್ಯಂತ ಸಂಚರಿಸುವ ಜೆಡಿಎಸ್ ಪಕ್ಷದ ಪಂಚ ರತ್ನ ರಥ ಯಾತ್ರೆ ಏ.9 ರಂದು ಕ್ಷೇತ್ರಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಈಡಿ ಕ್ಷೇತ್ರದಲ್ಲಿ ಭರ್ಜರಿ ತಯಾರಿಕೂಡ ಭರದಿಂದ ಸಾಗುತ್ತಿದೆ, ಇನ್ನೂ ಸುಮಾರು 15 ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಪಕ್ಷದ ಅಭಿಮಾನಿಗಳು ಸೇರುವ ನಿರೀಕ್ಷೆಯಿಂದ ಈಗೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದರು.
ಇನ್ನೂ ಈದೇ ಸಂಧರ್ಭದಲ್ಲಿ ಕಾರ್ಯಧ್ಯಕ್ಷ ಆನಂದಪ್ಪ, ಮಾಜಿ ತಾಪಂ.ಉಪಾಧ್ಯಕ್ಷ ಶಿವಣ್ಣ, ನಗರಸಭೆ ಸದಸ್ಯ ಪ್ರಮೋಧ್, ಶ್ರೀನಿವಾಸ್, ವಿಶುಕುಮಾರ್, ಟಿ.ವಿಜಯ್ ಕುಮಾರ್, ಚೆನ್ನಿಗರಾಮಯ್ಯ, ಹಳೆ ನಗರದ ವೆಂಕಟೇಶ್, ಈಗೇ ಹಲವರು ಪಾಲ್ಗೊಂಡಿದ್ದರು.