ಚಳ್ಳಕೆರೆ : ವಿಧಾನಸಭೆ ಚುನಾವಣೆಗೆ ಕೇವಲ ಒಂದು ತಿಂಗಳ ಬಾಕಿ ಇರುವ ಕಾರಣ ರಾಜ್ಯದಲ್ಲಿ ಚುನಾವಣೆ ಕಾವು ರಂಗೇರಿದೆ.
ಅದರAತೆ ಜೆಡಿಎಸ್ ಪಕ್ಷದಿಂದ ಈಡೀ ರಾಜ್ಯಾದ್ಯಾಂತ ಸಂಚರಿಸುವ ಪಂಚರತ್ನ ರಥಯಾತ್ರೆ ಇದೇ ಏಪ್ರಿಲ್ 9 ರಂದು ಚಳ್ಳಕೆರೆ ಕ್ಷೇತ್ರಕ್ಕೆ ಆಗಮಿಸುವ ನಿಮಿತ್ತ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಭರ್ಜರಿಯಾಗಿ ತಯಾರಿ ನಡೆಸುತ್ತಿದ್ದಾರೆ.
ಅದರಂತೆ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ಆಗಮಿಸುವ ಸಲುವಾಗಿ ಪೂರ್ವಭಾವಿ ಸಭೆ ಮಾಡುವ ಮೂಲಕ ಜನರಿಗೆ ಹರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.
ಇನ್ನೂ ಕ್ಷೇತ್ರದ ಜಾಜೂರು ಜಿಪಂ ಕ್ಷೇತ್ರ, ನನ್ನಿವಾಳ, ತುರುವನೂರು ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ಮಾಡುವ ಮೂಲಕ ಈ ಬಾರಿ ಜೆಡಿಎಸ್ ಜಯಬೇರಿಗೆ ಪಂಚರತ್ನ ರಥ ಯಾತ್ರೆ ವರದಾನವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.