ನಗ ಮುಖದಲ್ಲಿ ಪರೀಕ್ಷ ಕೇಂದ್ರಕ್ಕೆ
ತೆರಳಿದ ವಿದ್ಯಾರ್ಥಿಗಳು
ಚಳ್ಳಕೆರೆ ನಗರದಲ್ಲಿ 6 ಪರೀಕ್ಷಾ ಕೇಂದ್ರಗಳು
ಮೊದಲ ದಿನವೇ ಪ್ರಥಮ ಭಾಷೆ ಕನ್ನಡ
ಚಳ್ಳಕೆರೆ ನಗರದ 6 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೊದಲ ದಿನದ ಕನ್ನಡ ಪ್ರಥಮ ಭಾಷೆಯ ಪರೀಕ್ಷೆಯನ್ನು ವಿದ್ಯಾರ್ಥಿಗಳು ಸಂತೋಷದಿAದ ಪರೀಕ್ಷಾ ಕೊಠಡಿಗೆ ತೆರಳಿದರು.
ಇನ್ನೂ ಕಳೆದ ಎರಡು ವರ್ಷಗಳ ಕಾಲ ಕೊವಿಡ್ ಕಾರಣದಿಂದ ಪರೀಕ್ಷೆಗಳು ನಡೆಯದೆ ಪಾಸಾಗಿರುವ ವಿದ್ಯಾರ್ಥಿಗಳು ಕೂಡ ಇವರಾಗಿದ್ದಾರೆ ಇಂತಹ ವಿದ್ಯಾರ್ಥಿಗಳು ಇಂದು ನಗು ಮುಖದಲ್ಲಿ ಪರೀಕ್ಷಾ ಕೇಂದ್ರದತ್ತಾ ತೆರಳಿದರು.
ಇನ್ನೂ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಶಿಕ್ಷಣ ಇಲಾಖೆ ಹಾಗೂ ತಾಲೂಕ ಆಡಳಿತ ವತಿಯಿಂದ ಪರೀಕ್ಷಾ ಕ್ರಮವನ್ನು ಕೈಗೊಂಡಿದ್ದೇವೆ 2023ನೇ ಸಾಲಿನ ಫಲಿತಾಂಶ 97.54 ಅನ್ನು ಪಡೆದು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಹಾಗೂ ರಾಜ್ಯದಲ್ಲಿ 8ನೇ ಸ್ಥಾನ ಪಡೆದಿದ್ದೆವೆ ಇನ್ನೂ ಈ ಭಾರಿಯೂ ಕೂಡ ವಿದ್ಯಾರ್ಥಿಗಳು ಯಾವುದೇ ಭಯ ಆತಂಕ ಗೊಳ್ಳದೆ ನಿರ್ಭೀತಿಯಾಗಿ ಪರೀಕ್ಷೆಯನ್ನು ಬರೆಯಬೇಕು ಅಲ್ಲದೆ ಪೋಷಕರು ತಮ್ಮ ಮಕ್ಕಳನ್ನು ಇನ್ನು ಹೆಚ್ಚು ಪರ್ಸೆಂಟೇಜ್ ಬರಬೇಕು ಅನ್ನುವ ಮಾತನ್ನು ಬಿಟ್ಟು ಸಮಾಧಾನವಾಗಿ ಪರೀಕ್ಷೆ ಬರೆಯಿರಿ ಎಂದು ಪ್ರೋತ್ಸಾಹಿಸಬೇಕು ಎಂದಿದ್ದಾರೆ.
ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಮೊದಲಿಗೆ ಪರೀಕ್ಷಾರ್ಥಿಗಳಿಗೆ ಆರೋಗ್ಯ ತಪಾಸಣೆ ನೆಡಸಿದಿ ಕೊಠಡಿಯೊಳಗೆ ಪ್ರವೇಶ ಮಾಡಿಲಾಯಿತು ನಂತರ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಔಷಧೀಯ ಪ್ರಚಾರ ಎಲ್ಲಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮಾಡಿದ್ದೇವೆ ಎಂದು ತಿಳಿಸಿದರು