ದೊಡ್ಡೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಟಿ.ಚನ್ನಪ್ಪ ದ್ವಿತೀಯ ದರ್ಜೆ ಸಹಾಯಕ ಇವರನ್ನು ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸದ ನಿವೃತ್ತ ಜಂಟಿ ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ಹಾಗೂ ಆಡಳಿತಾಧಿಕಾರಿಗಳು ಎಸ್.ಆರ್.ಎಸ್.ವಿದ್ಯಾಸಂಸ್ಥೆ, ಚಳ್ಳಕೆರೆ. ಪಿ.ಎನ್.ಕೃಷ್ಣಪ್ರಸಾದ್ ಮಾತನಾಡಿ ವೃತ್ತಿಯಿಂದ ನಿವೃತ್ತಿ ಹೊಂದಿ ವೃತ್ತಿ ವ್ಯಕ್ತಿಯಾಗಿರಬೇಕು ಎಂದರು. ವೃತ್ತಿಯಾದ ನಂತರ ನಾವುಗಳು ಪರಿಪೂರ್ಣತೆ ಕಾಣುತ್ತೇವೆ. ವೃತ್ತಿಯಾದ ನಂತರ ಹೆಚ್ಚು ಅಧ್ಯಯನ ಅಭ್ಯಾಸ ಬೆಳೆಸಿಕೊಳ್ಳಬೇಕು ಭಾರತದ ಜೀವಂತಿಕೆ ಹಳ್ಳಿಯಲ್ಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್.ಲಕ್ಷö್ಮಣ ಮಾತನಾಡಿ ಪ್ರಾಚಾರ್ಯರು ಮತ್ತು ಉಪನ್ಯಾಸಕರು ವೃತ್ತಿಯ ಜೊತೆಗೆ ಪ್ರವೃತ್ತಿಯನ್ನು ಬೆಳಿಸಿಕೊಳ್ಳಬೇಕು. ನಿವೃತ್ತಿಯಾದ ತಕ್ಷಣ ನಮ್ಮ ಜೀವನ ಮುಗಿಯಿತು ಎಂಬ ಕಲ್ಪನೆಯನ್ನು ಹೊರಹಾಕಿ ಸಮಾಜದ ಸೇವೆಯಲ್ಲಿ ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು. ಪ್ರಾಚಾರ್ಯರು ಹಾಗೂ ಸಿಬ್ಬಂದಿ ಒಂದೇ ನಾಣ್ಯದ ಎರಡು ಮುಖಗಳು ನಾನು ಈ ಕಾಲೇಜಿನ ಪ್ರಾಚಾರ್ಯರರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಟಿ.ಚನ್ನಪ್ಪ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ನನ್ನ ಜೊತೆಯಲ್ಲಿ ಹಗಲಿರುಳು ಶ್ರಮಿಸಿದ್ದಾರೆ ಹಾಗೂ ಉಪನ್ಯಾಸಕರ, ವಿದ್ಯಾರ್ಥಿಗಳ ಮತ್ತು ಗ್ರಾಮದ ಮುಖಂಡರೊAದಿಗೆ ಉತ್ತಮ ಸಂಬAಧ ಹೊಂದಿದ್ದರು ಎಂದು ತಿಳಿಸಿ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಕಾಲೇಜಿನ ಅಭಿವೃದ್ಧಿಗೆ ಶ್ರಮಿಸಬೇಕೆಂದು ಸಲಹೆ ನೀಡಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಯ ನಾಗರಾಜ್ ಮಾತನಾಡಿ ಜೀವನದಲ್ಲಿ ನಾವು ಎರಡು ಸಂತೋಷ ಕಾಣುತ್ತೇವೆ. ಒಂದು ಸೇವೆ ಸೇರುವಾಗ ಮತ್ತು ವಿಶ್ರಾಂತಿ ಹೊಂದಿದಾಗ ಎಂದು ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರ ವೃತ್ತಿ, ಬಡವರಿಗೆ ಶಿಕ್ಷಣ ಒಂದು ಅಸ್ತçವಾಗಿದೆ ಎಂದರು.
ವಯೋನಿವೃತ್ತಿ ಸನ್ಮಾನ ಸ್ವೀಕರಿಸಿದ ಟಿ.ಚನ್ನಪ್ಪ ಮಾತನಾಡಿ ನಾನು ನನ್ನ ಸೇವಾ ಅವಧಿಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಪ್ರತಿಫಲವಾಗಿ ನನ್ನ ಮಗಳಿಗೂ ಹಾಗೂ ಮಗನಿಗೆ ಸರ್ಕಾರಿ ನೌಕರಿ ದೊರೆತಿದೆ ಎಂದು ಹಾಗೂ ನನ್ನನ್ನು ಸನ್ಮಾನಿಸಿದಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ ಎಂದು ತಿಳಿಸಿದರು.
ಚಿತ್ರದುರ್ಗ ಬಾಲಕಿಯರ ಸರ್ಕಾರಿ ಪೂರ್ವ ಕಾಲೇಜಿನ ಅರ್ಥಶಾಸ್ತç ಉಪನ್ಯಾಸಕ ಡಿ.ಬಸವರಾಜ್, ನಿವೃತ್ತ ಕನ್ನಡ ಉಪನ್ಯಾಸಕ ಕಟ್ಟಪ್ಪ ಮತ್ತು ಇತರರು ಮಾತನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪಾಚಾರ್ಯ ಮಲ್ಲಿಕಾರ್ಜುನ್, ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಪಾಲಯ್ಯ, ಉತ್ತಮ ಉಪನ್ಯಾಸಕ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ತಿಮ್ಮಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಣ್ಣ, ವೆಂಕಟೇಶ್, ಗ್ರಾಮದ ಮುಖಂಡರಾದ ಪ್ರಕಾಶ ಒಡೆಯರ್, ಉಪನ್ಯಾಸಕರಾದ ಕರಿಯಪ್ಪ, ಹೀನಾ ಕೌಸರ್, ಓ.ನಾಗರಾಜ್, ಆರ್.ನಾಗರಾಜ್, ರಾಮಾಂಜನೇಯ, ಸಿಬ್ಬಂದಿ ದುರ್ಗಪ್ಪ ಮತ್ತು ಇತರರು ಹಾಜರಿದ್ದರು.