ಚಿತ್ರದುರ್ಗ: ಮೊಳಕಾಲ್ಮುರು ತಾಲೂಕು ಶಿಶು ಅಭಿವೃದ್ಧಿ
ಯೋಜನೆಯಲ್ಲಿ ಖಾಲಿ ಇರುವ 20 ಅಂಗನವಾಡಿ
ಕಾರ್ಯಕರ್ತೆಯರ ಮತ್ತು 34 ಸಹಾಯಕಿಯರ
ಹುದ್ದೆಗಳಿಗೆ ಆಫ್ ಲೈನ್ ಮೂಲಕ ಅರ್ಜಿ
ಆಹ್ವಾನಿಸಲಾಗಿದೆ.
ಸಲ್ಲಿಕೆ ಈಗಾಗಲೇ ಮಾ.27 ರಿಂದ
ಅರ್ಜಿ ಪ್ರಾರಂಭವಾಗಿದ್ದು, ಏ.27ರ ಸಂಜೆ 5.30 ರವರೆಗೆ ಅರ್ಜಿ
ಸಲ್ಲಿಕೆಗೆ ಕಾಲಾವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಸಂಬಂಧಿಸಿದ ಗ್ರಾಮ ಪಂಚಾಯತ್ ಕಚೇರಿ, ಶಾಲೆ, ರೈತ ಸಂಪರ್ಕ
ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸ್ಥಳೀಯ
ಅಂಗನವಾಡಿ ಕೇಂದ್ರ ಗಳಲ್ಲಿಯೂ ಪ್ರಕಟಿಸಿರುವ ಪ್ರಕಟಣೆ
ನೋಡಬಹುದಾಗಿದೆ ಎಂದು ಮೊಳಕಾಲ್ಮುರು ಶಿಶು
ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.