ಚಳ್ಳಕೆರೆ : ಚುನಾವಣೆಗೆ ದಿನಾಂಕ ಘೋಷಣೆಯಾದಗಿನಿಂದ ಮತದಾನ ಮುಗಿಯುವವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಸರ್ಕಾರ, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ ಎಂದು ತಾಲೂಕು ಚುನಾವಣಾಧಿಕಾರಿ ಬಿ.ಆನಂದ್ ಹೇಳಿದರು.
ಅವರು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಚಳ್ಳಕೆರೆ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಹಾಗೂ ಪೂರ್ವ ಸಿದ್ದತೆಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಚುನಾವಣಾ ಅಕ್ರಮಗಳಿಗೆ ತಡೆ ಹಾಕಿ, ಶಾಂತಿಯುತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಚುನಾವಣೆ ಆಯೋಗ ನೀತಿ ಸಂಹಿತೆ ಜಾರಿಗೊಳಿಸಿದ್ದು ಎಲ್ಲರೂ ಪಾಲಿಸುವಂತೆ ತಿಳಿಸಲಾಗಿದೆ, ಆಡಳಿತಾರೂಢ ಪಕ್ಷ, ಸರ್ಕಾರದ ವಿವಿಧ ಇಲಾಖೆಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ನಿಗಮ- ಮಂಡಳಿಗಳು, ಸ್ಥಳೀಯ ಪೌರ ಸಂಸ್ಥೆಗಳು ಸೇರಿದಂತೆ ಸರ್ಕಾರದಿಂದ ಹಣಕಾಸಿನ ನೆರವು ಪಡೆಯವ ಪ್ರತಿಯೊಂದು ಸಂಸ್ಥೆ ಅಥವಾ ಕಚೇರಿಗಳು ಸೇರಿದಂತೆ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳಿಗೆ ನೀತಿ ಸಂಹಿತೆ ಅನ್ವಯವಾಗುತ್ತದೆ.
ನಾಮಪತ್ರ ಸಲ್ಲಿಸಲು ತಾಲೂಕು ಕಚೇರಿಯ ಎರಡನೇ ಮಹಡಿಯಲ್ಲಿ ಸ್ವೀಕರಿಸಲಾಗುವುದು ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿಗಳ ಕೊಠಡಿಗೆ ಅಭ್ಯರ್ಥಿ ಸೇರಿ 4 ಜನರಿಗೆ ಮಾತ್ರ ಅವಕಾಶವಿರುತ್ತದೆ ನಾಮಪತ್ರ ಸಲ್ಲಿಸಲು ನೂರು ಮೀಟರ್ ಅಂತರದಲ್ಲಿ ಜನ ಇರಬೇಕು ಮೂರು ವಾಹನಗಳಿಗೆ ನಾಮಪತ್ರ ಸಲ್ಲಿಸಲು ಬರಲು ಅವಕಾಶವಿದೆ.
ನಾಮಪತ್ರ ಸಲ್ಲಿಸುವ ಮುನ್ನವೇ ನಾವು ಪ್ರಚಾರ ಮಾಡುತ್ತಿವೆ ಅನ್ನುವರು ಚುನಾವಣೆ ಶಾಖೆಯಲ್ಲಿ ಅನುಮತಿ ಪಡೆÀದು ಪ್ರಚಾರ ಮಾಡಬಹುದು ವಿಧಾನಸಭೆಗೆ ಚುನಾವಣೆಗೆ ಸ್ಪರ್ಧೆ ಮಾಡುವ ಅಭ್ಯರ್ಥಿ 40 ಲಕ್ಷ ರೂಗಳ ಮಾತ್ರ ವೆಚ್ಚ ಮಾಡಲು ಅವಕಾಶವಿರುತ್ತದೆ ಪ್ರತ್ಯೆಖ ಖಾತೆ ತೆರದ ಖಾತೆಯಲ್ಲಿ ಮಾತ್ರ ಖರ್ಚು ಮಾಡಬೇಕು.
ಚುನಾವಣೆ ನಿಮಿತ್ತ ಚಳ್ಳಕೆರೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಗಡಿಭಾಗಗಳಲ್ಲಿ 6 ಚೆಕ್ ಪೊಸ್ಟ್ಗಗಳನ್ನು ತೆರೆಯಲಾಗಿದೆ. ಅಲ್ಲಿ ಅಧಿಕಾರಿಗಳು ಪರಿಶೀಲನೆ ಮಾಡುವುದು ಸಿಸಿ ಟಿವಿಯಲ್ಲಿ ಸೆರೆಯಾಗುತ್ತದೆ. ಸಾರ್ವಜನಿಕರಿಗೆ ತೊಂದರೆಯಾಗದAತೆ ಚೆಕ್ ಪೊಸ್ಟ್ ಗಳಲ್ಲಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ ಚುನಾವಣೆ ಚಲನವಲದ ಮೇಲೆ ಚುನಾವಣೆ ಆಯೋಗ ಕಣ್ಣುಗಾವಲಿನಲ್ಲಿ ನಡೆಯಲಿದೆ.
ಕ್ಷೇತ್ರಗಳಲ್ಲಿ ನೂರಕ್ಕೆ ನೂರಷ್ಟು ಮತದಾನ ಮಾಡಿಸಲು ಪಣತೊಡಲಾಗುವುದು. ಎಲ್ಲ ಮತಗಟ್ಟೆಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದ್ದು ಮತಗಟ್ಟೆ ಕೇಂದ್ರಗಳ ಬಳಿ ನಡೆಯುವ ಮತದಾನವನ್ನು ನೇರವಾಗಿ ಲೈವ್ ವೀಕ್ಷಣೆ ಮಾಡುವ ವ್ಯವಸ್ಥೆ ಇದೆ ಪ್ರಥಮವಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಸಹಾಯಕ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ರೇಹಾನ್ ಪಾಷಾ ಮಾತನಾಡಿ ವಿಧಾನ ಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಮತದಾರರ ವಿವರ
ಚಳ್ಳಕೆರೆ ವಿಧಾನಸಭಾ ಕ್ಷೇತ್ರವ್ಯಾಪ್ತಿಯ 259 ಮತಟ್ಟೆಗಳಿದ್ದು ಗಂಡು 108384 ಮತಗಳಿದ್ದರೆ ಮಹಿಳೆಯರು 109031 ಹಾಗೂ ಇತರೆ 3 ಸೇರಿ ಒಟ್ಟು 217418 ಮತದಾರರೊನ್ನಳಗೊಂಡಿದ್ದು ಈ ಬಾರಿ ಹಿರಿಯ ನಾಗರೀಕರ 80 ವರ್ಷ ಮೇಲ್ಪಟ್ಟ ಹಿರಿಯ ಮತದಾರಲ್ಲಿ 2108 ಪುರುಷರು 85287 ಹಾಗೂ ಮಹಿಳೆಯರು 2616 ಒಟ್ಟು4724 ಮತದಾರರಿದ್ದರೆ ವಿಕಲಚೇತನ 4170 ಮತದಾರರನ್ನು ಗುರುತಿಸಲಾಗಿದೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಮುಂಜಾಗೃತ ಕ್ರಮವನ್ನು ಕೈಗೊಳ್ಳಲಾಗಿದೆ ದಿನದ 24 ಗಂಟೆ ಕಾರ್ಯ ನಿರ್ವಹಿಸುವ 08195250648 ಸಹಾಯವಾಣಿ ತೆರೆದಿದ್ದೆವೆ ಚುನಾವಣೆಗೆ ಸಂಬAಧ ಪಟ್ಟ ಮಾಹಿತಿ ಹಾಗೂ ದೂರುಗಳನ್ನು ತಿಳಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್‌ಪಿ ರಮೇಶ್ ಕುಮಾರ್, ವೃತ್ತ ನಿರೀಕ್ಷಕ ಆರ್.ಎಫ್.ದೇಸಾಯಿ, ಅಬಕಾರಿ ಇಲಾಖೆ ಅಧಿಕಾರಿ ನಾಗರಾಜು ಇತರರಿದ್ದರು.

About The Author

Namma Challakere Local News
error: Content is protected !!