ಚಳ್ಳಕೆರೆ : ರಾಜ್ಯದ ವಿಧಾನಸಭಾ ಚುನಾವಣೆ ಘೋಷಣೆ ದಿನಾಂಕ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ನಗರಸಭೆ ಅಧಿಕಾರಿಗಳು ಪ್ಲೆಕ್ಸ್ ಬ್ಯಾನರ್ ತೆರವುಗೊಳಿಸಲು ಮುಂದಾಗಿದ್ದಾರೆ.
ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ರಾಜಕೀಯ ನಾಯಕರು ಅವರ ಬೆಂಬಲಿಗೊAದಿಗೆ ಸಭೆ ಸಮಾರಂಭಗಳನ್ನು ಮಾಡುವ ಜತೆಗೆ ವಿಶ್ರಾಂತಿ ಪಡೆಯುವ ಜತೆಗೆ ಸಾರ್ವಜನಿಕರು, ವೃದ್ದರೂ ಸಹ ಪ್ರವಾಸಿ ಮಂದಿರದ ಆವರಣದಲ್ಲಿ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದ ಪ್ರವಾಸಿ ಮಂದಿರ ಮುಖ್ಯ ಗೇಟ್ ಬಂದು ಮಾಡುವ ಮೂಲಕ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಮಾಡಿರುವುದರಿಂದ ಪ್ರವಾಸಿ ಮಂದಿರ ಬಿಕೋ ಎನ್ನುತ್ತಿವಂತೆ.
ಸರಕಾರಿ ಕಚೇರಿ ಹಾಗೂ ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ ಸರಕಾರದ ವಿವಿಧ ಯೋಜನೆಗಳ ಪ್ರಚಾರ ಹಾಗೂ ಸರಕಾರದ ಸಾಧನೆಗಳ ಜಾಹಿರಾತು ಫಲಕಗಳಿಗೆ ನಗರಸಭೆ ಅಧಿಕಾರಿಗಳು ಕಾಣದಂತೆ ಮುಚ್ಚುವ ಕೆಲಸ ಮಾಡಲು ಮುಂದಿದ್ದಾರೆ.
ಇನ್ನು ಸರಕಾರಿ ಕಚೇರಿಯಲ್ಲಿ ಸಾರ್ವಜನಿಕ ಸ್ಥಳಗಲ್ಲಿ ಹಾಗೂ ವಿವಿಧ ಕಾಮಗಾರಿಗಳ ಮೇಲಿರುವ ಜನಪ್ರತಿನಿಧಿಗಳ ನಾಮಫಲಗಳನ್ನು ಮುಚ್ಚಲಾಗುತ್ತಿದೆ.
ತಾಲೂಕು ಪಂಚಾಯತ್ ಕಚೇರಿ ಆವರಣದಲ್ಲಿರುವ ಶಾಸಕರ ಭವನವನ್ನು ಬಂದ್ ಮಾಡಲು ಮುಂದಾಗಿದ್ದಾರೆ.
ಕ್ಷೇತ್ರದ ಶಾಸಕ ಟಿ.ರಘುಮುರ್ತಿ ಇಂದು ಹಲವು ಕಾರ್ಯಕ್ರಮಗಳನ್ನು ಬೆಳ್ಳಂ ಬೆಳಗ್ಗೆ ಬಾಗಿಯಾಗಿದ್ದರು ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಕಾರ್ಯಕ್ರಮಗಳಿಂದ ನಿರ್ಗಮಿಸಿ ಅಧಿಕಾರಿಗಳು ಕಾರ್ಯಕ್ರಮಗಳನ್ನು ಮುಂದುವರೆಸುವAತೆ ಹೇಳಿ ಕಾರ್ಯಕ್ರಮಗಳಿಂದ ನಿರ್ಗಮಿಸಿದ ಪ್ರಸಂಗ ಜರುಗಿದೆ.

Namma Challakere Local News
error: Content is protected !!