ಚಳ್ಳಕೆರೆ : ಗ್ರಾಮೀಣ ಭಾಗದ ಮಕ್ಕಳು ಕಲಿಕೆಯಲ್ಲಿ ಹಿಂದೂಳಿಯದೆ ಶೈಕ್ಷಣಿಕವಾಗಿ ಮುಂದೆ ಬರಬೇಕು ಆದ್ದರಿಂದ ನೂತನ ತಂತ್ರಜ್ಞಾನ ಆಧಾರಿತ ಶಿಕ್ಷಣ ಪದ್ದತಿಯನ್ನು ಆಲವಡಿಸಿಕೊಳ್ಳುವ ಮೂಲಕ ಗುಣ ಮಟ್ಟದ ಶಿಕ್ಷಣ ಪಡೆಯಬೇಕು ಎಂದು ಶಾಸಕ ಟಿ.ರಘುಮುರ್ತಿ ಕಿವಿಮಾತು ಹೇಳಿದರು.
ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕುವೈತ್ ಕನ್ನಡ ಒಕ್ಕೂಟ ಹಾಗೂ ಮಾತೃ ಚಾರಿಟಬಲ್ ಟ್ರಸ್ಟ್ ವತಿಯಿಂದ ಸುಣ್ಣ, ಡಿಜಿಟಲ್ ತರಗತಿ ಅಗತ್ಯ ಮೂಲ ಭೂತ ಸೌಲಭ್ಯಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಇಂಗ್ಲೀಷ್ ವ್ಯಾಮಹೋಕ್ಕೆ ತುತ್ತಾಗಿ ತಮ್ಮ ಮಕ್ಕಳನ್ನು ನಗರದ ಖಾಸಗಿ ಶಾಲೆಗಳಿಗೆ ದುಬಾರಿ ಶುಲ್ಕವನ್ನು ಕಟ್ಟಿ ವ್ಯಾಸಂಗ ಮಾಡಿಸುತ್ತಿದ್ದು. ಸರಕಾರಿ ಶಾಲೆಗಳಲ್ಲಿ ಬಡ ಕುಟುಂಬದ ಮಕ್ಕಳು ವ್ಯಾಸಂಗ ಮಾಡುವುದರಿಂದ ಅವರೂ ಸಹ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಇತ್ತೀಚಿನ ದಿನಗಳಲ್ಲಿ ಹಳೆಯ ಶಾಲೆಯ ವಿದ್ಯಾರ್ಥಿಗಳು ಹಾಗೂ ಖಾಸಗಿ ಸಂಸ್ಥೆಗಳು ಸರಕಾರಿ ಶಾಲೆಗಳಿಗೆ ಸುಣ್ಣ ಬಣ್ಣ, ಶೌಚಾಲಯ, ಕುಡಿಯುವ ನೀರು, ಪೀಠೋಪಕರಣ, ಡಿಜಿಟಲ್ ತರಗತಿಗಳಿಗೆ ಅಗತ್ಯ ಸಾಮಾಗ್ರಿಗಳನ್ನು ನೀಡಲು ಮುಂದಾಗಿರುವುದು ಶ್ಲಾಘನೀಯವಾಗಿದೆ.

ದಾನಿಗಳು ನೀಡಿದ ಯಾವುದೇ ವಸ್ತುಗಳನ್ನು ರಕ್ಷಣೆ ಮಾಡವಂತೆ ತಿಳಿಸಿದ ಇದೇ ಸಂದ ದಾನಿಗಳು ಹೆಚ್ಚಿನ ನೆರವು ನೀಡುವುದರೆ ಸಕಾರಿ ಶಾಲೆಗಳು ಉಳಿಯಲು ಸಾಧ್ಯ ದಾನಿಗಳ ನೆರವಿನಿಂದ ಶಾಲೆಯ ಕಟ್ಟಡ ಸುಂದರವಾಗಿ ಕಾಣುವಂತಾಗಿದೆ ಎಂದು ತಿಳಿಸಿದರು.

ಕ್ಷೇತ್ರಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾತನಾಡಿ ಖಾಸಗಿ ಸಂಸ್ಥೆಗಳು ಅಗತ್ಯ ಮೂಲ ಭೂತ ಸೌಲಭ್ಯಗಳನ್ನು ನೀಡುತ್ತಿದ್ದು ಶಿಕ್ಷಕರು ಸದುಪಯೋಗ ಪಡಿಸಿಕೊಂಡು ಗುಣ ಮಟ್ಟದ ಶಿಕ್ಷಣ ನೀಡುವಂತೆ ಇಂದಿನ ಆಧುನಿಕ ಯುಗದಲ್ಲಿ ಡಿಜಿಟಲ್ ಸ್ಮಾರ್ಟ್ ಕ್ಲಾಸ್‌ಗಳು ಮಕ್ಕಳ ಭವಿಷ್ಯಕ್ಕೆ ತುಂಬಾ ಸಹಕಾರಿಯಾಗಿವೆ. ಇದನ್ನು ಅರಿತ ಕೆಲವು ಖಾಸಗಿ ಸಂಸ್ಥೆಗಳು ತಾಲೂಕಿನ ಹುಲಿಕುಂಟೆ, ನನ್ನಿವಾಳ, ಬಂಗಾರದೇವರಹಟ್ಟಿ, ಚನ್ನಮ್ಮನಾಗತಿಹಳ್ಳಿ, ಜಾಜೂರು, ಭರಮಸಾಗರ, ಹಲವು ಸರಕಾರಿ ಶಾಳೆಗಳನ್ನು ದತ್ತು ಪಡೆದು ಅಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡಲು ಮುಂದೆ ಬಂದಿವೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ , ಸದಸ್ಯರು, ಮುಖ್ಯ ಶಿಕ್ಷಕರು ಹಾಗೂ ಕುವೈತ್ ಕನ್ನಡ ಒಕ್ಕೂಟದ ಸದಸ್ಯರು ಇದ್ದರು.

Namma Challakere Local News
error: Content is protected !!