ಮತದಾರರು ಈ ಬಾರಿ ಬದಲಾವಣೆ ಬಯಸುತ್ತಿದ್ದಾರೆ.
ಸ್ಥಳೀಯ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿ ಎಂಎಸ್.ಜಯರಾA ಹೇಳಿಕೆ

ಚಳ್ಳಕೆರೆ : ಭಾರತೀಯ ಜನತಾ ಪಾರ್ಟಿ ಈ ಬಾರಿ ಚಳ್ಳಕೆರೆ ಕ್ಷೇತ್ರದಲ್ಲಿ ಜಯಬೇರಿ ಬಾರಿಸುವುದು, ಅದರಂತೆ ಕ್ಷೇತ್ರದಲ್ಲಿ ಕಮಲ ಅರಳುವುದು ಶತಸಿದ್ದ ಚಳ್ಳಕೆರೆಯಲ್ಲಿ ಬಿಜೆಪಿಗೆ ಯಾರೇ ಅಭ್ಯರ್ಥಿಯಾದರೂ ಗೆಲವು ನಮ್ಮದೆ ಎಂದು ಚಳ್ಳಕೆರೆ ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ನಗರದ ಬೆಂಗಳೂರು ರಸ್ತೆಯಲ್ಲಿರುವ ಬಿಜೆಪಿ ಪಕ್ಷದ ಕಾರ್ಯಲಾಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು, ನಮ್ಮ ಕ್ಷೇತ್ರದಲ್ಲಿ ಯಾವುದೇ ಎದುರಾಳಿಗಳು ಬಿಜೆಪಿಗೆ ಸರಿಸಾಟಿ ಇಲ್ಲ ಇರುವ ಆಕಾಂಕ್ಷಿಗಳಲ್ಲಿ ಯಾವುದೇ ಭಿನ್ನಭಿಪ್ರಾಯ ಇಲ್ಲ ಯಾರಿಗೇ ಟಿಕೆಟ್ ನೀಡಿದರು ಎಲ್ಲಾರ ಸಹಕಾರ ಇರುತ್ತದೆ.
ಆದ್ದರಿಂದ ಇಲ್ಲಿ ಯಾವುದೇ ಭಿನ್ನಮತ ಇಲ್ಲ, ಇನ್ನೂ ನರೇಂದ್ರ ಮೋದಿ ಆಡಳಿತ ಸರಕಾರ ಬಡಜನರಿಗೆ ವರದಾನವಾಗಿದೆ ವಿವಿಧ ಯೋಜನೆಗಳ ಫಲಾನುಭವಿಗಳು ಬಿಜೆಪಿಗೆ ಒಲವು ತೋರುತ್ತಿದ್ದಾರೆ. ಆದ್ದರಿಂದ ಈ ಭಾರಿ ಚಳ್ಳಕೆರೆ ಕ್ಷೇತ್ರದಲ್ಲಿ ಬದಲಾವಣೆ ನಿಶ್ಚಿತ ಆದ್ದರಿಂದ ಬಿಜೆಪಿ ಗೆಲುವಿಗೆ ಸಕಲ ತಯಾರಿ ಕೂಡ ನಡೆದಿದೆ ಎಂದರು.
ಇನ್ನೂ ಬಿಜೆಪಿ ಕಾರ್ಯಕಾರಣಿ ಸದಸ್ಯ ಹಾಗೂ ಸ್ಥಳೀಯ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿ ಎಂಎಸ್.ಜಯರಾA ಮಾತನಾಡಿ, ಮತದಾರರು ಈ ಬಾರಿ ಬದಲಾವಣೆ ಬಯಸುತ್ತಿದ್ದಾರೆ. ಆದ್ದರಿಂದ ಚಳ್ಳಕೆರೆ ಕ್ಷೇತ್ರದಲ್ಲಿ ಕಮಲ ಅರಳುವುದು ನಿಶ್ಚಿತ ಇನ್ನೂ ಮತದಾರರು ಕಳೆದ ಎರಡು ಅವಧಿಯ ಆಡಳಿತವನ್ನು ನೋಡಿದ ಜನರು ಈ ಭಾರಿ ಬದಲಾವಣೆಯತ್ತ ಮತದಾರರು ಒಲವು ತೋರಿದ್ದಾರೆ ಎಂದರು.

ಇದೇ ಸಂಧರ್ಭದಲ್ಲಿ ಬಿಜೆಪಿ ಮುಖಂಡ ಬಾಳೆಕಾಯಿ ರಾಮದಾಸ್, ಬಿಜೆಪಿ ಎಸ್‌ಟಿ ಕಾರ್ಯಕಾರಣಿ ಸದಸ್ಯ ಅನಿಲ್ ಕುಮಾರ್, ಸೋಮಶೇಖರ್ ಮಂಡಿಮಠ್, ಎಂ.ಶಿವಮೂರ್ತಿ, ಇತರರು ಪಾಲ್ಗೊಂಡಿದ್ದರು.

ಪೋಟೊ ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿರುವ ಬಿಜೆಪಿ ಪಕ್ಷದ ಕಾರ್ಯಲಾಯದಲ್ಲಿ ಆಕಾಂಕ್ಷಿಗಳ ಮಧ್ಯೆ ಯಾವುದೇ ಭಿನ್ನಭಿಪ್ರಾಯ ಇಲ್ಲ ಎಂದು ಕೈ ಹಿಡಿದು ಸಂಸತ ವ್ಯಕ್ತಪಡಿಸಿದರು.

About The Author

Namma Challakere Local News
error: Content is protected !!