ಜೆಪಿ.ನಡ್ಡಾ ಆಗಮನದಿಂದ
ಚಳ್ಳಕೆರೆ ಕ್ಷೇತ್ರದಲ್ಲಿ ಅರಳುತ್ತಾ ಕಮಲ..?
ನಡ್ಡಾ ನಡೆಗೆ ಬಯಲು ಸೀಮೆಯ ಮತದಾರರು ಮಣೆ ಹಾಕುವರಾ..!
ಚಳ್ಳಕೆರೆ : ಆಯಿಲ್ ಸಿಟಿಗೆ ಆಗಮಿಸುವ ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಜೆ.ಪಿ ನಡ್ಡಾ ರವರಿಗೆ ಚಳ್ಳಕೆರೆ ನಗರದಲ್ಲಿ ಅದ್ದೂರಿ ಸ್ವಾಗತ ದೊರೆಯಿತು
ಇನ್ನೂ ನಗರದ ತುಂಬೆಲ್ಲಾ ಕೇಸರಿ ಮಯ ಮಾಡಿದ ಕಾರ್ಯಕರ್ತರು ಕೇಸರಿ ಬಾವುಟ, ಪ್ಲೆಕ್ಸ್ ಬಂಟಿAಗ್ಸ ಕಟ್ಟಿ ಇಡೀ ನಗರ ಕೇಸರಿ ಮಯದ ಚಪ್ಪರ ಹಾಕಿದಂತೆ ಅದ್ದೂರಿ ಸ್ವಾಗತ ನೀಡಿದರು.
ಇನ್ನೂ ಮದ್ಯಾಹ್ನದ ವೇಳೆಗೆ ರಾಜ್ಯದ ವರಿಷ್ಟರೊಂದಿಗೆ ಆಗಮಿಸಿದ ನಡ್ಡಾರವರು ನಗರದ ಪಾವಗಡ ರಸ್ತೆಯ ಈಶ್ವರ ದೇವಾಸ್ಥಾನದಿಂದ ಪ್ರಾರಂಭವಾದ ವಿಜಯ ಸಂಕಲ್ಪ ಯಾತ್ರೆಗೆ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಇನ್ನೂ ಮೆರವಣಿಗೆ ಉದ್ದಕ್ಕೂ ಡೊಳ್ಳು ಕುಣಿತ, ಕೋಲಾಟ, ಪ್ರಧಾನ ಮಂತ್ರಿಯ ಒಳಗೊಂಡ ಪ್ರಮುಖ ಗೀತೆಗಳಿಗೆ ನೆರೆದಿದ್ದ ಜನರು ಸಿಳ್ಳೆ ಚಪ್ಪಾಳೆ ಜಯ ಘೋಷಗಳನ್ನು ಕೂಗಿದರು.
ಇನ್ನೂ ರಾಜ್ಯದ ಕಂದಾಯ ಸಚಿವರಾದ ಆರ್.ಅಶೋಕ ರವರು ಚಳ್ಳಕೆರೆ ಜನತೆಯೊಟ್ಟಿಗೆ ಜಯ ಘೋಷ ಮೊಳಗಿಸಿದರು.
ಬಾಕ್ಸ್ ಮಾಡಿ :
ರಥಯಾತ್ರೆ ಉದ್ದಕ್ಕೂ ಕಾರ್ಯಕರ್ತ ಅಭಿಮಾನಿ ಬಳಗದವರು ಪ್ರಬಲ ಟಿಕೆಟ್ ಆಕಾಂಕ್ಷಿಯಾದ ಎಂ.ಎಸ್.ಜಯರಾA ರವರ ಭಾವ ಚಿತ್ರಗಳನ್ನು ಹಿಡಿದ ಘೋಷಣೆಗಳನ್ನು ಕೂಗಿದರು ಹಾಗೂ ತಹಶೀಲ್ದಾರ್ ಎನ್.ರಘುಮೂರ್ತಿ ಎಂಬ ಜಯ ಘೋಷಗಳು ಮೊಳಗಿದವು ತಮ್ಮ ತಮ್ಮ ಕಾರ್ಯಕರ್ತರು ಅಭಿಮಾನಿ ಬಳಗವು ಟಿಕೆಟ್ ನೀಡಲು ಅಧ್ಯಕ್ಷರ ಗಮನ ಸೇಳೆಯಲು ಘೊಷಣೆಗಳನ್ನು ಕೂಗಿದರು.
ಇನ್ನೂ ನೆಹರು ವೃತ್ತದಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾದ ತಹಶೀಲ್ದಾರ್ ಎನ್.ರಘುಮೂರ್ತಿ ರವರ ಬೆಂಬಲಿಗರು ಕೇಸರಿ ಹಾಗೂ ಹಸಿರು ಬಣ್ಣದ ಬೃಹತ್ ಹೂವಿನ ಮಾಲೆ ಹಾಕುವುದರ ಮೂಲಕ ವರಿಷ್ಠರ ಗಮನ ಸೆಳೆದರು.
ಇನ್ನೂ ನೆಹರು ವೃತ್ತದಲ್ಲಿ ಅಪಾರ ಕಾರ್ಯಕರ್ತ ಅಭಿಮಾನಿ ಬಳಗವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟಿçÃಯ ಅಧ್ಯಕ್ಷ ಜೆ.ಪಿ.ನಡ್ಡಾ , ದೇಶದಲ್ಲಿ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಬಿಜೆಪಿ ಸರಕಾರ ಜನಪರವಾದ ಕೆಲಸ ಮಾಡಿದೆ ಇನ್ನೂ ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧ ಯೋಜನೆಗಳನ್ನು ಮೋದಿಜೀಯವರು ನೀಡಿದ್ದಾರೆ ಎಂದು ಹೇಳಿದರು.
ವಿಜಯ ಸಂಕಲ್ಪ ಯಾತ್ರೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ.ನಡ್ಡಾ, ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟಿಲ್, ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ, ಕಂದಾಯ ಸಚಿವರಾದ ಆರ್ ಅಶೋಕ್, ಜಿಲ್ಲಾಧ್ಯಕ್ಷ ಮುರುಳಿ, ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿಯಾದ ಎಂ.ಎಸ್.ಜಯರಾA, ಜಯಪಾಲಯ್ಯ, ರಾಮದಾಸ್, ಆಕಾಂಕ್ಷಿ ಅನಿಲ್ ಕುಮಾರ್, ಇತರರು ವಿಜಯ ಸಂಕಲ್ಪ ರಥಯಾತ್ರೆಯಲ್ಲಿ ಇದ್ದರು.