ಚಳ್ಳಕೆರೆ: ನಗರದ ಹೃದಯ ಭಾಗವಾದ ಖಾಸಗಿ ಬಸ್ ನಿಲ್ದಾಣ ಸಮೀಪ ಇರುವ ಸಾರ್ವಜನಿಕ ಶೌಚಾಲಯದ ಮಲಮೂತ್ರ ವಿಸರ್ಜನೆಯ ತ್ಯಾಜ್ಯವನ್ನು ತೆರೆದ ಚರಂಡಿಗೆ ಬಿಡುವ ಈ ಅವ್ಯವಸ್ಥೆಗೆ ಸ್ಥಳೀಯರು ನಗರಸಭೆ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ.
ಈ ಸ್ಥಳದಲ್ಲಿ ಮಲಮೂತ್ರ ವಿಸರ್ಜನೆಯ ವಾಸನೆಯಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ
ಇನ್ನು ಸಾರ್ವಜನಿಕ ಶೌಚಾಲಯದ ಮಲ ಮೂತ್ರ ವಿಸರ್ಜನೆಯ ತ್ಯಾಜ್ಯವನ್ನು ಸಾರ್ವಜನಿಕರ ಶೌಚಾಲಯ ಗುತ್ತಿಗೆ ಪಡೆದ ಗುತ್ತಿಗೆದಾರರು ಈ ತೆರೆದ ಚರಂಡಿಗೆ ಬಿಡುವುದರಿಂದ ಮುಂದಕ್ಕೆ ಹೋಗದೆ ನಿಂತ ಸ್ಥಳದಲ್ಲೇ ನಿಂತು ವಿಪರೀತ ವಾಸನೆಯಿಂದ ಕೂಡಿದೆ
ನಗರಸಭೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಸ್ಥಳೀಯರು ಮನವಿ ಮಾಡಿಕೊಂಡರು ಕ್ಯಾರೆ ಎನ್ನದೆ ಮೌನವಹಿಸಿದ್ದಾರೆ ಎಂದು ನಗರಸಭೆ ಸದಸ್ಯರಾದ ಪ್ರಶಾಂತ್ ಕುಮಾರ್ ಆರೋಪಿಸಿದ್ದಾರೆ.
ಇನ್ನು ಈ ಅವ್ಯವಸ್ಥೆಗೆ ಪೌರಾಯುಕ್ತರು, ಆರೋಗ್ಯ ನಿರೀಕ್ಷಕ ಸಿಬ್ಬಂದಿ ವರ್ಗದವರು ಗುತ್ತಿಗೆದಾರನಿಂದ ಹಣವನ್ನು ಪಡೆದು ಇದಕ್ಕೆ ಸಹಕರಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ
ಇನ್ನೂ ಪಕ್ಕದಲ್ಲಿ ಗ್ರಾಮೀಣ ಪ್ರದೇಶದಿಂದ ಆಸ್ಪತ್ರೆಗೆ ಹೋಗಿ ಬರುವ ರೋಗಿಗಳು ಒಂದೆಡೆಯಾದರೆ, ಪಕ್ಕದಲ್ಲಿ ಶಾಲಾ-ಕಾಲೇಜಿಗೆ ಬಸ್ ನಿಲ್ದಾಣಕ್ಕೆ ಹೋಗುವ ಮಾರ್ಗ ಇದಾಗಿದೆ ದಿನ ನಿತ್ಯ ದುರ್ವಾಸನೆಯಿಂದ ಕಂಡರೂ ಕಾಣದಂತಿರುವ ನಗರಸಭೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಕಿಡಿಕಾರಿದ್ದಾರೆ..
ಇಂತಹ ನಗರಸಭೆ ವ್ಯವಸ್ಥೆಗೆ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಸಾರ್ವಜನಿಕರ ಮುಕ್ತ ಓಡಾಟಕ್ಕೆ ಅನುಕೂಲ ಮಾಡಿಕೊಡುವವರು ಪರಿಸರದಲ್ಲಿ ಶುಚಿತ್ವ ಕಾಪಾಡುವರೋ ಕಾದುನೋಡಬೇಕಾಗಿದೆ.