ಚಳ್ಳಕೆರೆ : ಬುಡಕಟ್ಟು ಸಂಸ್ಕೃತಿ ಹಾಸು ಹೊದ್ದ ಆಯಿಲ್ ಸಿಟಿಯಲ್ಲಿ ಸಾಹಿತಿಗಳಿಗೆ ಬರವಿಲ್ಲ ಎಂಬುದು ತರಾಸು, ವೆಂಕಣ್ಣ, ಬೆಳಗೆರೆ ಕೃಷ್ಣಶಾಸ್ತಿç ಈಗೇ ಹಲವು ಸಾಹಿತಿಗಳು ಹುಟ್ಟಿದ ತವರೂರು ಇದಾಗಿದೆ.
ಆದ್ದರಿಂದ ಗಡಿ ಭಾಗದ ಚಳ್ಳಕೆರೆಯಲ್ಲಿ ವರ್ಷದ ಉದ್ದಕ್ಕೆ ಬರವಿದ್ದರೂ ಸಾಹಿತ್ಯಕ್ಕೆ ಬರವಿಲ್ಲ ಎಂಬುದು ಸಾಭಿತು ಹಾಗಿದೆ ಆದ್ದರಂತೆ ಇಂದಿನ ಯುವ ಸಾಹಿತಿಗಳಿಂದ ಹಿಡಿದ ಹಳೆಯ ಕಾಲದ ಸಾಹಿತಿಗಳು ಇಲ್ಲಿ ನೆಲೆಸಿರುವುದು ಹಾಗೇ ಪ್ರಶಸ್ತಿ ಸನ್ಮಾನಗಳು ದಕ್ಕಿಸಿಕೊಳ್ಳುವುದು ಇಲ್ಲಿನ ವಿಶೇಷವಾಗಿದೆ.
ಆದರಂತೆ ಆಂದ್ರದ ಗಡಿಯನ್ನು ಅಂಚಿಕೊAಡ ತಾಲೂಕಿನ ಪಿ.ಮಹದೇವಪುರ ಗ್ರಾಮದ ಹಿರಿಯರು ಶಿಕ್ಷಣ ಪ್ರೇಮಿಗಳು ಸಾಹಿತಿಗಳು ಆಗಿರತಕ್ಕಂತ ರಾಮಚಂದ್ರಪ್ಪ ನಿವೃತ್ತ ಶಿಕ್ಷಕರು ಇವರಿಗೆ ಪಾವಗಡ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಕ್ಕೆ ಚಳ್ಳಕೆರೆ ಈಡಿಗ ಸಮಾಜದ ವತಿಯಿಂದ ಅಭಿನಂದಿಸಿ ಗೌರವಿಸಿದ್ದಾರೆ.
ಇನ್ನೂ ಸಮಾಜದ ಮುಖಂಡ ನೇತಾಜಿ ಪ್ರಸನ್ನಕುಮಾರ್ ಇತರರು ಭಾಗಹಿಸಿದ್ದರು.