ಚಳ್ಳಕೆರೆ : ಸರ್ಕಾರಿ ಸಾರಿಗೆ ಬಸ್ ನಿಲ್ದಾಣದ ಅವ್ಯವಸ್ಥೆಗೆ ರೋಸಿ ಹೋದ ಜನಸಾಮಾನ್ಯರು ಅಧಿಕಾರಿ ವರ್ಗಕ್ಕೆ ಶಾಪ ಹಾಕುತ್ತಿದ್ದಾರೆ.
ಹೌದು ನಿಜಕ್ಕೂ ಶೋಚನೀಯ ಚಳ್ಳಕೆರೆ ನಗರದ ಸರ್ಕಾರಿ ಸಾರಿಗೆ ಬಸ್ ನಿಲ್ದಾಣದ ಅವಸ್ಥೆಗೆ ಸಾರ್ವಜನಿಕರು ಹಾಗೂ ಪ್ರಯಾಣಿಕರು ಬಸ್ ನಿಲ್ದಾಣದ ಒಳಗೆ ಹೋಗಲು ಅರಸಹಾಸ ಪಡುವಂತಾಗಿದೆ.
ಬಸ್ ನಿಲ್ದಾಣದ ಸುತ್ತಲೂ ಅವೈಜ್ಞಾನಿಕವಾಗಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿರುವುದರಿಂದ ಪ್ರಯಾಣಿಕರು ಬಸ್ ನಿಲ್ದಾಣದ ಒಳಗೆ ಮತ್ತು ಹೊರಗೆ ಓಡಾಡಲು ತುಂಬಾ ತೊಂದರೆಯಾಗುತ್ತಿದೆ ,
ಇನ್ನೂ ಇಂತಹ ದುಸ್ಥಿಯನ್ನು ನೋಡಿದರೂ ನೋಡದ ಹಾಗೆ ಸಾರಿಗೆ ಅಧಿಕಾರಿಗಳು ಮೌನ ವಹಿಸಿರುವುದು ಪ್ರಯಾಣಿಕೆರ ಕೋಪಕ್ಕೆ ಗುರಿಯಾಗಿದ್ದಾರೆ.
ಇನ್ನು ಸಾರಿಗೆ ನಿಲ್ದಾಣಕ್ಕೆ ಬರುವ ಅಂಗವಿಕಲರು ವೃದ್ಧರು ವಿಕಲಚೇತನರು ಹೀಗೆ ದಿನ ನಿತ್ಯದ ನೂರಾರು ಪ್ರಯಾಣಿಕರು ಬಂದು ಹೋಗುವ ಈ ಸ್ಥಳದಲ್ಲಿ ಬಸ್ ನಿಲ್ದಾಣ ಒಳಗೆ ಹೋಗಲು ಆಗದೆ ದ್ವಿಚಕ್ರ ವಾಹನಗಳನ್ನು ದಾಟಿ ಕಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ .
ಇನ್ನು ಈ ಕುರಿತು ಸಾರಿಗೆ ನೌಕರರು ಮೌನ ವಹಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ
ಇನ್ನಾದರೂ ದ್ವೀಚಕ್ರ ವಾಹನಗಳ ತೆರವಿಗೆ ಮುಂದಾಗಿ ಪ್ರಯಾಣಿಕರಿಗೆ ಅನುಕೂಲ ಮಾಡುವರೋ ಕಾದು ನೋಡಬೇಕಿದೆ.