ಚಳ್ಳಕೆರೆ : ಚುನಾವಣೆ ಕಣ ರಂಗೇರಿದ್ದು ಅದರಲ್ಲಿ ಆಯಿಲ್ ಸಿಟಿಯಲ್ಲಿ ಭರ್ಜರಿಯಾಗಿ ಮತ ದಾರರ ಓಲೈಕೆ ನಡೆಯುತ್ತಿದೆ.
ಇನ್ನೂ ಮೂರು ಪಕ್ಷಗಳಿಂದ ಮತದಾರರ ಮನಸೇಳೆಯುವ ಆಕಾಂಕ್ಷಿಗಳು ಕಸರತ್ತು ಈ ಬಾರಿ ಭರ್ಜರಿಯಾಗಿ ಕಂಡು ಬರುತ್ತಿದೆ.
ಅದರಂತೆ ಸ್ಥಳೀಯ ಬಿಜೆಪಿ ಆಕಾಂಕ್ಷಿಯಾದ ಎಂ.ಎಸ್.ಜಯರಾA ರವರು ಕಳೆದ ನಾಲ್ಕು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ಮನೆ ಮನೆಗೆ ಬೇಟಿ ನೀಡುವ ಮೂಲಕ ಇಡೀ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆಗಳನ್ನು ಮತದಾರರಿಗೆ ತಿಳಿಸುವ ಮೂಲಕ ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದಾರೆ.
ಅದರಂತೆ ಈಡೀ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ವರಿಷ್ಠರ ಸೂಚನೆ ಮೇರೆಗೆ ಈಡೀ ಕ್ಷೇತ್ರದಲ್ಲಿ ಸುಮಾರು ನಾಲ್ಕು ಹೋಬಳಿಗಳಲ್ಲಿ ತಿರುಗಾಟ ನಡೆಸುತ್ತಿದ್ದಾರೆ.
ಅದರಂತೆ ಚುಣಾವಣೆಗೆ ಕೇವಲ ಎರಡು ಮೂರು ತಿಂಗಳು ಬಾಕಿ ಇರುವಾಗಲೇ ಮಿಂಚಿನ ಸಂಚಾರ ನಡೆಸುತ್ತಿರುವ ಎಂ.ಎಸ್.ಜಯರಾA ಕ್ಷೇತ್ರದ ಹಬ್ಬ ಹರಿದಿನ, ಜಾತ್ರೆ, ಈಗೇ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಮತದಾರರ ಓಲೈಕೆಯಲ್ಲಿ ನಿರತರಾಗಿದ್ದಾರೆ.
ಅದರಂತೆ ಚಳ್ಳಕೆರೆ ನಗರದ ಚಿತ್ರನಹಟ್ಟಿಯಲ್ಲಿ ನಡೆದ ಬಿಜೆಪಿ ಮುಖಂಡರ ಮನೆಯಲ್ಲಿ ನಡೆದ ನಾಮಕರಣ ಮಹೋತ್ಸವದಲ್ಲಿ ಭಾಗಿಯಾಗಿದ್ದರು,.
ತದನಂತರ ನಗರದ ನರಹರಿ ಸೇವಾ ಪ್ರತಿಷ್ಟಾನದ ಶ್ರೀ ಡಾ.ರಾಜಾರಾಮ್ ರಾಮ್ ಸ್ವಾಮೀಜೀ ರವರ ಆರ್ಶಿವಾದ ಪಡೆದು ಈಡೀ ನಗರದಲ್ಲಿ ಸಂಚಾರ ನಡೆಸಿದ್ದಾರೆ.

About The Author

Namma Challakere Local News
error: Content is protected !!