ಪ
ಚಳಕೆರೆ : ದಿನ ನಿತ್ಯ ಗ್ರಾಮೀಣ ಭಾಗದ ಜನರು ಅನ್ಯ ಕೆಲಸದ ನಿಮ್ಮಿತ್ತ ಬರುವ ವಾವನ ಸವಾರರಿಗೆ ವಿನಾ ಕಾರಣ ತೊಂದರೆ ನೀಡುತ್ತಾ ಕಿರಿ ಕಿರಿ ಉಂಟುಮಾಡುತ್ತಿದ್ದಾನೆ.
ಹೌದು ಚಳ್ಳಕೆರೆ ನಗರದ ಹೃದಯ ಭಾಗವಾದ ನೆಹರು ವೃತ್ತದಲ್ಲಿ ಮುಂಜಾನೆ ಮೂರರಿಂದ ಪ್ರಾರಂಭವಾದ ಹುಚ್ಚನ ಉಚ್ಚಾಟ ದಿನಪೂರ್ತಿ ರಸ್ತೆ ಮಧ್ಯದಲ್ಲಿ ಓಡಾಡುವ ವಾಹನಗಳಿಗೆ ಕಿರಿಕಿರಿ ಉಂಟು ಮಾಡುತ್ತಾ, ಅಡ್ಡಗಟ್ಟಿ ದಾರಿ ಹೋಕರಿಗೆ ತೊಂದರೆ ಉಂಟು ಮಾಡುತ್ತಿದ್ದಾನೆ.
ಇನ್ನೂ ಮೈ ಮೇಲಿನ ಬಟ್ಟೆಯನ್ನು ಕಳಚಿ ಮಹಿಳೆಯರ ಮುಂದೆ ನೃತ್ಯವನ್ನು ಮಾಡುತ್ತಾನೆ.
ಇನ್ನೂ ಅತೀ ವೇಗದಲ್ಲಿ ಇರುವ ಕಾರುಗಳಿಗೆ ಅಡ್ಡಗಟ್ಟಿ ಕಾರಿನ ಮೇಲೆ ನಿಂತು ಸಾವರರಿಗೆ ಗಾಜು ಒಡೆಸುವುದಾಗಿ ಆಕ್ಷನ್ ಮಾಡುತ್ತಾನೆ.
ಇದರಿಂದ ಬೇಸತ್ತ ವಾಹನ ಸವಾರರು ಹಾಗೂ ಮಹಿಳೆಯರು ಶಾಪ ಹಾಕುತ್ತಾ ಮುಂದೆ ಸಾಗುತ್ತಾರೆ
ಇಷ್ಟೆಲ್ಲಾ ನೆಹರು ವೃತ್ತದಲ್ಲಿ ನಡೆದರು ಪೊಲೀಸ್ ಇಲಾಖೆಯ ದಿವ್ಯ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ, ಇಂತಹ ವ್ಯಕ್ತಿಗಳನ್ನು ಸಂಬಂಧಿಸಿದ ಮಾನಸೀಕ ಚಿಕಿತ್ಸಾ ಕೇಂದ್ರಕ್ಕಾದರೂ ರವಾನಿಸಬೇಕಾಗಿ ಕೊರಿದ್ದಾರೆ..
ಇನ್ನೂ ಈ ಸಂಬಂಧ ಪಟ್ಟ ಪೊಲೀಸ್ ಇಲಾಖೆ, ಹುಚ್ಚನ ಹುಚ್ಚಾಟಕ್ಕೆ ಬ್ರೇಕ್ ಹಾಕುವರೋ ಕಾದು ನೋಡಬೇಕಿದೆ..