ಚಳ್ಳಕೆರೆ : ಕಳೆದ 2019ರಿಂದ ಕ್ಷೇತ್ರದಲ್ಲಿ ಸಕ್ರಿಯವಾಗಿ ಬಿಜೆಪಿ ಪಕ್ಷದಲ್ಲಿ ದುಡಿಯುತ್ತಾ ಕೇಂದ್ರ ಮತ್ತು ರಾಜ್ಯ ಸರಕಾರ ಹೊರ ತರುವ ಮಹತ್ವದ ಯೋಜನೆಗಳನ್ನು ಸಾರ್ವಜನಿಕರಿಗೆ ತಿಳಿಸುವ ಮೂಲಕ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಥಳೀಯನಾಗಿದ್ದೆನೆ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂ.ಎಸ್.ಜಯರಾA ಹೇಳಿದ್ದಾರೆ.
ಅವರು ನಗರದ ಸಾರಿಗೆ ಬಸ್ ನಿಲ್ದಾಣ ಪಕ್ಕದಲ್ಲಿರುವ ತಮ್ಮ ಕಛೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು 2023ಕ್ಕೆ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದು ಶತಸಿದ್ದ, ಇನ್ನೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳುತ್ತದೆ, ಈಗಾಗಲೇ ಪಕ್ಷದ ವರೀಷ್ಠರ ನಿಲುವಿನಂತೆ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಮನೆ ಮನೆ ಬೇಟಿ ಮಾಡಿ ಪಕ್ಷ ಸಂಘಟನೆ ಮಾಡಿದ್ದೆನೆ ನಮ್ಮ ಪಕ್ಷದಲ್ಲಿ ದುಡಿದವರೆಗೆ, ತತ್ವ ಸಿದ್ದಾಂತದ ಮೇಲೆ ಇರುವವರೆಗೆ ನಮ್ಮ ಬಿಜೆಪಿ ಪಕ್ಷ ಯಾವತ್ತು ಕೈ ಬಿಡುವುದಿಲ್ಲ ಆದ್ದರಿಂದ ಈ ಬಾರಿ ಟಿಕೆಟ್ ನೀಡುವ ವಿಶ್ವಾಸ ನನಗಿದೆ.
ಈ ಗಾಗಲೇ ವರಿಷ್ಠರ ನಿರ್ಧಾರದಂತೆ ಎಲ್ಲಾ ಅರ್ಹತೆಗೆ ನಾನು ಒಪ್ಪುವಂತವರು, ಸ್ಥಳೀಯ ಅಭ್ಯರ್ಥಿಯು ಹೌದು, ತತ್ವ ಸಿದ್ದಾಂತ ಮೇಲೆ ನಂಬಿಕೆ ಇಟ್ಟವರು ಕೂಡ ನಾವು ಈಗೇ ಅವರ ಎಲ್ಲಾ ಆಯ್ಕೆಗಳಲ್ಲಿ ನಾವು ಸಕ್ರಿಯವಾಗಿ ಪಾಲ್ಗೊಂಡಿದ್ದೆವೆ ಎಂದರು.

ಆಯಿಲ್ ಸಿಟಿಯಲ್ಲಿ ಕಮಲ ಅರಳುತ್ತಾ..?
ನೂರಕ್ಕೆ ನೂರರಷ್ಟು ಕಮಲ ಅರಳುತ್ತೆ ಅನುಮಾನವೇ ಬೇಡ, ಕ್ಷೇತ್ರದ ಜನರು ಬದಲಾವಣೆ ಬಯಸುತ್ತಾರೆ. ಆದ್ದರಿಂದ ಈ ಬಾರಿ ಬದಲಾವಣೆ ಖಂಡಿತ ಮತದಾರರಿಂದ ಹಾಗುತ್ತದೆ ಅದು ಬಿಜೆಪಿ ಆಡಳಿತ ಬರುತ್ತೆ, ಇನ್ನೂ ಕೇಂದ್ರ ಹಾಗೂ ರಾಜ್ಯ ಸರಕಾರದ ಮಹತ್ವ ಯೋಜನೆಗಳನು ಜನಸಮಾನ್ಯರ ಬದುಕಿಗೆ ಹತ್ತಿರವಾಗಿವೆ ಆದ್ದರಿಂದ ಆಯಿಲ್ ಸಿಟಿಯಲ್ಲಿ ಕಮಲ ಪ್ರಜ್ವಲಿಸುತ್ತದೆ.
ನಿಮ್ಮ ಪಕ್ಷದಲ್ಲಿ ಆರು ಬಣಗಳು ಹೇಗೇ ಸಾಧ್ಯ..?
ನಮ್ಮ ಬಿಜೆಪಿ ಪಕ್ಷದಲ್ಲಿ ಯಾವುದೇ ಬಣಗಳು ಇಲ್ಲ, ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಆಕಾಂಕ್ಷಿಗಳು ಹಾಗಬಹುದು, ಅದರಂತೆ ಪಕ್ಷ ತಿರ್ಮಾನಿಸಿ ಒಬ್ಬ ಸೂಕ್ತ ಅಭ್ಯರ್ಥಿಗೆ ಬಲ ಪಡಿಸಿದರೆ ಎಲ್ಲಾ ಒಟ್ಟಾಗಿ ಬಿಜೆಪಿ ಅಧಿಕಾರಕ್ಕೆ ತರುತ್ತೆವೆ. ಎಷ್ಟೇ ಬಣಗಳಿದ್ದರೂ ಕೊನೆಗೆ ಬಿಜೆಪಿ ಪಕ್ಷ ಅದಿಕಾರಿಕ್ಕೆ ಬರವುದು.
ಚಳ್ಳಕೆರೆಯಲ್ಲಿ ನಿಮ್ಮ ವರ್ಚಸ್ಸು ಹೇಗಿದೆ ..?
ಈಗಾಗಲೇ ಕಳೆದ ಹಲವು ದಿನಗಳಿಂದ ಸುಮಾರು ಗ್ರಾಪಂ.ಯ ಹಳ್ಳಿಗಳಿಗೆ ಬೇಟಿ ಮಾಡಿದ್ದೆನೆ, ನಾನು ನನ್ನ ಉಪನ್ಯಾಸ ಸೇವಾ ದಿನಗಳಲ್ಲಿ ಕಟ್ಟಿದ ಯುವ ಪಡೆ ಕ್ಷೇತ್ರದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚಿದೆ ಅದರಂತೆ 140 ಹಳ್ಳಿಗಳಲ್ಲಿ ಮನೆಗೊಬ್ಬರಂತೆ ನನ್ನ ಸದಸ್ಯರು ಇದ್ದಾರೆ ಇವರೆಲ್ಲಾ ವರ್ಚಸ್ಸು ನನಗಿದೆ ಆದ್ದರಿಂದ ನಿರಂತರ ಮತದಾರರ ಸಂಪರ್ಕದಲ್ಲಿ ತೊಡಗಿದ್ದೆನೆ,
ನಿಮ್ಮ ಗೆಲವಿನ ನಿರೀಕ್ಷೆ ಏನು.?

ಕಳೆದ ಐದು ವರ್ಷಗಳಿಂದ ಕ್ಷೇತ್ರದಲ್ಲಿ ಮತದಾರರ ಒಡನಾಟದಿಂದ ಈ ಬಾರಿ ಬಿಜೆಪಿ ಟಿಕೆಟ್ ನೀಡಿದರೆ ಸುಮಾರು 45 ಸಾವಿರ ಅಂತರದಲ್ಲಿ ಗೆಲವು ನಿಶ್ಚಿತ ನನದಾಗಿದೆ. ಆದ್ದರಿಂದ ವರಿಷ್ಠರ ನಿಲುವಿನಂತೆ ಐದು ವರ್ಷಗಳಿಂದ ಪಕ್ಷಕ್ಕೆ ದುಡಿಯುತ್ತಿದ್ದೆನೆ, ಅದರಂರೆ ಈ ಬಾರಿ ಆಕಾಂಕ್ಷಿಯಾಗಿ ಪಕ್ಷ ಸಂಘಟನೆಯಲ್ಲಿ ಇದ್ದೆನೆ.
ಸಮುದಾಯಗಳ ನಿಲುವಿಗೆ ನಿಮ್ಮ ಮಾತು..?
ಕ್ಷೇತ್ರದಲ್ಲಿ ಮೂರು ಸಮುದಾಯಗಳು ಮಾತ್ರ ಬಹು ದೊಡ್ಡ ಜನ ಸಂಖ್ಯೆಯನ್ನು ಹೊಂದಿದ್ದಾವೆ, ಅದರಂತೆ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಇನ್ನೂ ಗೊಲ್ಲ ಸಮುದಾಯ ಜನಸಂಖ್ಯೆ ಜಾಸ್ತಿ ಇದೆ ಅದರಂತೆ ಚಿಕ್ಕ ಸಮುದಾಯಗಳು ಕೂಡ ಬಿಜೆಪಿಗೆ ಒಲವು ತೋರುತ್ತಿವೆ ಅದರಂತೆ ಮುಸ್ಲಿಂ ಸಮುದಾಯದ ಮತಗಳು ಕೂಡ ಈ ಬಾರಿ ಶೇ.80ರಷ್ಟು ಬಿಜೆಪಿಗೆ ದಕ್ಕಲಿವೆ, ಆದ್ದರಿಂದ ನನ್ನ ಪಕ್ಷ ನಿಷ್ಠೆ, ವ್ಯಕ್ತಿತ್ವ, ತತ್ವ ಸಿದ್ದಾಂತ ಈ ಎಲ್ಲಾ ವರ್ಚ್ಸ್ಸು ಕ್ಷೇತ್ರದಲ್ಲಿ ಬಲವಾಗಿದೆ.

ಈದೇ ಸಂಧರ್ಭದಲ್ಲಿ ವೆಂಕಟೇಶ್, ಶ್ರೀನಿವಾಸ್, ಮೀರಾಸಾಬಿಹಳ್ಳಿ ಜಯರಾಮ, ನಾಗರಾಜ್, ಇತರರು ಇದ್ದರು.

About The Author

Namma Challakere Local News
error: Content is protected !!