ಚಳ್ಳಕೆರೆ : ಚಳ್ಳಕೆರೆ ಕ್ಷೇತ್ರದಲ್ಲಿ ಕಾಂಗ್ರೇಸ್ ಭದ್ರಾ ಕೋಟೆ ಗಟ್ಟಿಗೊಳ್ಳಲು ಕಳೆದ ಹಲವು ವರ್ಷಗಳಿಂದ ಶ್ರಮಿಸುತ್ತಿದೆವೆ ಅದರಂತೆ ಶಾಸಕ ಟಿ.ರಘುಮೂರ್ತಿ ನೇತೃತ್ವದಲ್ಲಿ ದಲಿತರಿಗೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪಟ್ಟ ನೀಡಿರುವುದು ಸಂತಸ ತಂದಿದೆ ಎಂದು ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷ ಟಿಎಸ್ ಮಂಜುನಾಥ್ ಹೇಳಿದರು.
ನಗರದ ಶಾಸಕರ ಭವನ ಆವರಣದಲ್ಲಿ ಮಾದಿಗ ಸಮುದಾಯದಿಂದ ಆಯೋಜಿಸಿದ್ದ ಶಾಸಕ ಟಿ.ರಘುಮೂರ್ತಿ ಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು, ಕಾಂಗ್ರೇಸ್ ಪಕ್ಷ ಎನ್ನುವುದು ನಿನ್ನೆ ಮೊನ್ನೆಯದು ಅಲ್ಲ ಸ್ವಾತಂತ್ರö್ಯ ತಂದು ಕೊಟ್ಟ ಇತಿಹಾಸ ಇರುವ ಕಾಂಗ್ರೇಸ್ ಪಕ್ಷಕ್ಕೆ ಪ್ರತಿಯೊಬ್ಬರು ದುಡಿಯಬೇಕು, ಇನ್ನೂ ಮುಂಬರುವ 2023ರ ವಿಧಾನಸಭಾ ಚುನಾವಣೆ ಘೋಷಣೆಗೆ ಕೆಲವು ದಿನಗಳು ಭಾಕಿ ಇವೆ, ಆದ್ದರಿಂದ ಕ್ಷೇತ್ರದಲ್ಲಿ ಈಗಾಗಲೇ ಎರಡು ಬಾರಿ ಶಾಸಕರನ್ನಾಗಿ ಮಾಡಿದ ಮತದಾರರು ಮೂರನೇ ಬಾರಿಗೆ ಕಾಂಗ್ರೇಸ್ ಗೆಲುವಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.
ಇನ್ನೂ ನೂತನವಾಗಿ ಕಾಂಗ್ರೇಸ್ ಪಕ್ಷಕ್ಕೆ ಬಂದ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ಕಾಂಗ್ರೇಸ್ ಪಕ್ಷ ಎನ್ನುವುದು ಸಾಗರ ಅದಕ್ಕೆ ಅಂತ್ಯವೇ ಇಲ್ಲ ಅಂತಹ ಪಕ್ಷದಲ್ಲಿ ನನ್ನನ್ನು ಗುರುತಿಸಿ ಸದಸ್ಯನಾಗಿ ಮಾಡಿಕೊಂಡಿರುವುದು ಸಂತಸ ತಂದಿದೆ ಅದರಂತೆ ಚಳ್ಳಕೆರೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪಟ್ಟ ಕೆ.ವೀರಭದ್ರಯ್ಯ ನವರಿಗೆ ನೀಡಿರುವುದು ತುಂಬಾ ಸಂತೋಷ , ಈಗಾಗಲೇ ಎರಡು ಬಾರಿ ಜನ ಸೇವೆ ಮಾಡಲು ಅವಕಾಶ ನೀಡುರುವ ಮತದಾರರು ಈ ಬಾರಿ ಅವರ ಕೈ ಬಲ ಪಡಿಸಬೇಕು ನಾನು ಕೂಡ ನನ್ನ ವ್ಯಾಪ್ತಿಯಲ್ಲಿ ಅಳಿಲು ಸೇವೆ ಮಾಡುವೆ ಎಂದರು.
ಇನ್ನೂ ಮಾಜಿ ಜಿಪಂ.ಸದಸ್ಯ ಬಿ.ಪಿ.ಪ್ರಕಾಶ್ ಮೂರ್ತಿ ಮಾತನಾಡಿ, ದಲಿತ ಪರವಾದ ಪಕ್ಷವೆಂದರೆ ಅದರು ಕಾಂಗ್ರೇಸ್ ಪಕ್ಷ ಅದಕ್ಕೆ ನಿದರ್ಶನ ಎಂಬAತೆ ಚಳ್ಳಕೆರೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪದವಿ ಕೆ.ವೀರಭದ್ರಪ್ಪನಿಗೆ ನೀಡಿರುವುದು ನಮ್ಮ ಕ್ಷೇತ್ರದ ಶಾಸಕರ ಔದಾರ್ಯ ಎಂದರು.
ಇನ್ನೂ ಮಾಜಿ ಜಿಪಂ.ಸದಸ್ಯ ಬಾಬುರೆಡ್ಡಿ, ಮಾತನಾಡಿ 2023ರ ಚುನಾವಣೆಯ ಗೆಲುವು ನಿಮ್ಮ ಮೇಲೆ ಇದೆ ಆದ್ದರಿಂದ ನೀವುಗಳು ಪಕ್ಷದ ಎಲ್ಲಾ ಪದಾಧಿಕಾರಿಗಳಿನ್ನು ವಿಶ್ವವಾಸಕ್ಕೆ ಪಡೆದು ಗೆಲುವಿಗೆ ಶ್ರಮಿಸಬೇಕು ಇನ್ನೂ ವಿಧಾನ ಸಭೆ ಚುನಾವಣೆ ಕೇವಲ ಕೆಲವೇ ತಿಂಗಳು ಬಾಕಿಯಿದ್ದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಹಾಗೂ ಸಾಧನೆಗಳ ಬಗ್ಗೆ ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡುವ ಮೂಲಕ ಪ್ರತಿಯೊಂದು ಮನೆ ಮನೆಗೆ ಭೇಟಿ ನೀಡಿ ಮತದಾರರನ್ನು ಜಾಗೃತಿಮೂಡಿಸುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಬೇಕು ಅಧಿಕಾರ ಶಾಶ್ವತವಲ್ಲ ಅಧಿಕಾರವಧಿಯಲ್ಲಿ ಮಾಡಿದ ಸೇವೆ ಜನಮಾಸದಲ್ಲಿ ಉಳಿಯುತ್ತಿದೆ ಎಂದು ಕರೆ ನೀಡಿದರು.
ಬಾಕ್ಸ್ ಮಾಡಿ :
ಈಡೀ ಕ್ಷೇತ್ರದಲ್ಲಿ ಎಲ್ಲಾ ಜಾತಿ ಜಾನಂಗ ವರ್ಗದವರಿಗೆ ಕಾಂಗ್ರೆಸ್ ಪಕ್ಷ ಅಧಿಕಾರ ನೀಡಿದೆ ಅದರಂತೆ ದಲಿತ ಸಮುದಾಯವನ್ನು ಗುರುತಿಸಿ ಅವರಿಗೆ ಬ್ಲಾಕ್ ಕಾಂಗ್ರೆಸ್ ಪಟ್ಟ ನೀಡಿದೆ ಇನ್ನೂ ಯಾದವ ಸಮುದಾಯಕ್ಕೂ ಪರುಶುರಾಂಪುರ ಬ್ಲಾಕ್ ಕಾಂಗ್ರೆಸ್ ಪಟ್ಟ ನೀಡಿದೆ ಈಗೇ ಎಲ್ಲಾ ಸಮುದಾಯಗಳಿಗೆ ವಿಶೇಷ ಸ್ಥಾನ ಮಾನ ನೀಡುವುದರ ಮೂಲಕ ಈಡೀ ಕ್ಷೇತ್ರದ ಅಭಿವೃದ್ದಿಗೆ ಮೊದಲ ಸ್ಥಾನ ನೀಡಿದೆ.–ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ

ಈದೇ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ,ಉಪಾಧ್ಯಕ್ಷೆ ಮಂಜುಳಾ, ಮಾಜಿ ಜಿಪಂ.ಸದಸ್ಯ ಬಾಬುರೆಡ್ಡಿ, ನಗರಸಭೆ ಸದಸ್ಯ ಕೆ.ಸಿ.ನಾಗರಾಜ್, ಹೊಯ್ಸಳ ಗೊಂವಿದ್ , ರಮೇಶ್ ಗೌಡ, ಚಳ್ಲಕೆರೆಪ್ಪ, ಜಯಲಕ್ಷಿö್ಮÃ, ಕೃಷ್ಣಮೂರ್ತಿ, ಹಳೆನಗರದ ಮಾರಣ್ಣ, ವೀರಭದ್ರ, ಸಿದ್ದಾಪುರ ಶೇಖರ್, ದ್ಯಾವರನಹಳ್ಳಿ ಆನಂದ್, ತಿಪ್ಪೆಸ್ವಾಮಿ, ರಾಜು, ನಾಗರಾಜ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷÀ ಟಿ.ತಿಪ್ಪೇಸ್ವಾಮಿ. ಮಾಜಿ ಪರುಶುರಾಂಪುರ ಬ್ಲಾಕ್ ಅಧ್ಯಕ್ಷ ಕಿರಣ್ ಶಂಕರ್ ಅವರು ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಪ್ಪ ಹಾಗೂ ಶಶಿಧರ್ , ಗೀತಾಬಾಯಿ, ಉಷಾ, ಇದ್ದರು.

About The Author

Namma Challakere Local News
error: Content is protected !!