ಚಳ್ಳಕೆರೆ : ವಿಜ್ಞಾನ ನಗರಿಯಲ್ಲಿ ಮಾರ್ಚ್ 12ರಂದು ನಡೆಯುವ 4ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲೂಕಿನ ಡಾ.ಮಲ್ಲಿಕಾರ್ಜುನಾ ಕಲಮರಹಳ್ಳಿ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಮಾ.12ರಂದು ನಡೆಯುವ ಅಕ್ಷರ ಜಾತ್ರೆಗೆ ನಡೆದ ಪೂರ್ವ ಸಿದ್ದತಾ ಸಭೆಯಲ್ಲಿ ಈ ಮಹತ್ವ ನಿರ್ಣಯ ಕೈಗೊಂಡಿದ್ದಾರೆ.
ಇನ್ನೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿಟಿ.ವೀರಭದ್ರಸ್ವಾಮಿ ಮಾತನಾಡಿ, 4ನೇ ಕನ್ನಡ ಸಾಹಿತ್ಯ ಸಮ್ಮೆಳನದ ಅಧ್ಯಕ್ಷರಾಗಿ ತಾಲೂಕಿನ ಕಲಮರಹಳ್ಳಿ ಗ್ರಾಮದ ಕವಿಗಳು, ಚಿಂತಕರು, ಹಾಗೂ ಬರಹಗಾರರಾದ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಅವರನ್ನು ಸರ್ವನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇನ್ನೂ ಮಾ.12ರಂದು ನಡೆಯುವ ಅಕ್ಷರ ಜಾತ್ರೆಗೆ ಸಕಲ ಸಿದ್ದತೆಗಳನ್ನು ಆಯೋಜಿಸಲು ವಿವಿಧ ತಂಡಗಳ ಮೂಲಕ ಭರ್ಜರಿ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೆಳನದ ಅಧ್ಯಕ್ಷರಾಗಿ ಕಾರ್ಯನಿರ್ವಾಹಿಸಿದ್ದ ಹಿರಿಯ ಸಾಹಿತಿ ತಿಪ್ಪಣ್ಣ ಮರಿಕುಂಟೆ, ಪ್ರೋ.ಶಿವಲಿಂಗಪ್ಪ, ಕ.ಸಾ.ಪ ಕಾರ್ಯದರ್ಶಿ ಚಿತ್ತಯ್ಯ, ಡಿ.ದಯಾನಂದ್, ಮೃತ್ಯುಂಜಯ, ಟಿ.ಜೆ.ತಿಪ್ಪೆಸ್ವಾಮಿ, ರಾಜಣ್ಣ, ವಿಷ್ಟುಮೂರ್ತಿ, ಇತರರು ಇದ್ದರು.