ಚಳ್ಳಕೆರೆ : ಕಳೆದ ಒಂದು ತಿಂಗಳಿAದ ಬೆಳಂ ಬೆಳಿಗ್ಗೆ ರಸ್ತೆ ಗೀಳಿದ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ವಾರ್ಡನ ಜನರ ಸಮಸ್ಯೆಗಳನ್ನು ಆಲಿಸುತ್ತಾ ಸ್ಥಳದಲ್ಲಿ ಪರಿಹಾರ ರೂಪಿಸುವ ಮಹತ್ವದ ಕಾರ್ಯ ಮಾಡಲು ಮುಂದಾಗಿದ್ದಾರೆ.
ಇನ್ನೂ ನಗರದ 31 ವಾರ್ಡ್ಗಳ ಸರ್ವರ್ತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾದ ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾದ್ಯಕ್ಷೆ ಮಂಜುಳಾ , ಮುಂಜಾನೆ ನಸುಕಿನಲ್ಲಿ ರಸ್ತೆಗಿಳಿದು ಜನರ ಸಮಸ್ಯೆಗಳಿಗೆ ಸ್ಥಳದಲ್ಲಿ ಸೂಕ್ತ ಪರಿಹಾರ ಹೊದಗಿಸುವ ಮೂಲಕ ನಗರದ 31 ವಾರ್ಡ್ ಗಳ ಸರ್ವತೋಮುಖ ಅಭಿವೃದ್ದಿಗೆ ಕಂಕಣ ಬದ್ದರಾಗಿದ್ದಾರೆ.
ವಾರ್ಡ್ ನಲ್ಲಿ ಚರಂಡಿ ಸಮಸ್ಯೆ,, ರಸ್ತೆ, ಸ್ವಚ್ಛತೆ ಈಗೇ ವಿವಿಧ ಸಮಸ್ಯೆ ಗಳನ್ನು ಆಲಿಸಿದ ಅಧಿಕಾರಿಗಳು ಪೌರಕಾರ್ಮಿಕರೊಟ್ಟಿಗೆ ಸ್ಥಳದಲ್ಲಿ ಖುದ್ದಾಗಿ ಇದ್ದು ಪರಿಹಾರ ಕಂಡುಕೊಳ್ಳುತ್ತಿದ್ದಾರೆ.
ಇಧೇ ಸಂಧರ್ಭದಲ್ಲಿ ನಗರಸಭೆ ಸಿಬ್ಬಂದಿ ಮಹಾಲಿಂಗಪ್ಪ, ಗೀತಾ, ನರೇಂದ್ರಬಾಬು, ಸಿಬ್ಬಂದಿ, ಪೌರಕಾರ್ಮಿಕರು ಇದ್ದರು.