ಚಳ್ಳಕೆರೆ : ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ತಹಶೀಲ್ದಾರ್ ಎನ್.ರಘುಮೂರ್ತಿ ಕ್ಷೇತ್ರದ ವಿವಿಧ ಖಾಸಗಿ ಕಾರ್ಯಕ್ರಮಗಳು, ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಶಿವನ ಆರಾಧನೆ ಮಾಡಿದ್ದಾರೆ.
ಅದರಂತೆ ಚಳ್ಳಕೆರೆ ನಗರದ ಮಹಾಶಿವರಾತ್ರಿ ಉತ್ಸವ ಸಮಿತಿ ಗಾಂಧಿನಗರ ಇವರ ಸಮ್ಮಿಶ್ರಯದಲ್ಲಿ ಆಯೋಜಿಸಿದ ಶಿವರಾತ್ರಿ ಜಾಗರಣೆ ಕಾರ್ಯಕ್ರಮಕ್ಕೆ ಬೇಟಿನೀಡಿ ಶಿವನ ಕೃಪೆಗೆ ಪಾತ್ರರಾದರು, ನಂತರ ನರಹರಿನಗರದ ಶ್ರೀ ನರಹರಿ ಸೇವಾ ಸಂಘದಿAದ ಆಯೋಜಿಸಿದ್ದ ಮಹಾಶಿವರಾತ್ರಿ ಮಹೋತ್ಸವದಲ್ಲಿ ಫಾಲ್ಗೋಡಿದ್ದರು.
ಇನ್ನೂ ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು, ಬಯಲು ಸೀಮೆಯ ಹೆಸರಾಂತ ದೊಡ್ಡೇರಿ ಗ್ರಾಮದ ಶ್ರೀ ಕನ್ನೆಶ್ವರ ಗುರು ದತ್ತಾಪೀಠದ ಸತ್ ಉಪಾಸಿ ಶ್ರೀ ಗುರುಗಳ ಸಂಯುಕ್ತ ಆಶ್ರಯದಲ್ಲಿ ಅದ್ದೂರಿಯಾಗಿ ಆಚರಿಸಿದ ಬ್ರಹ್ಮ ರಥೋತ್ಸವದಲ್ಲಿ ಬಾಗಿಯಾಗಿದ್ದರು,
ನಂತರ ತಾಲೂಕಿನ ಬಂಡೆ ತಿಮ್ಮಾಲ್ಲಪುರ ಗ್ರಾಮದಲ್ಲಿ ಯುವಕರು ಆಯೋಜಿಸಿದಂತ ಶ್ರೀ ವಾಲ್ಮೀಕಿ ರಾಮಾಯಣ ಮೂಲದ ಬಯಲು ನಾಟಕದ ಪ್ರದರ್ಶನದಲ್ಲಿ ಭಾಗಿಯಾಗಿ ಯುವಕರಿಗೆ ಪ್ರೋತ್ಸಾಹ ನೀಡಿದರು. ಅದರಂತೆ ತಾಲೂಕಿನ ಕಾಮಸಮುದ್ರ ಗ್ರಾಮದ ಯುವಕರ ಕೊರಿಕೆಯಂತೆ ಸಾಮಾಜಿಕ ನಾಟಕದ ಉದ್ಘಾಟನೆ ನೆರೆವೆರಿಸಿದರು ಈಗೇ ಈಡೀ ಶಿವರಾತ್ರಿ ದಿನವೇಲ್ಲಾ ವಿವಿಧ ಕಾರ್ಯಕ್ರಗಳಲ್ಲಿ ಭಾಗಿ ಕ್ಷೇತ್ರದಲ್ಲಿ ಸುತ್ತಾಟ ನಡೆಸಿದ್ದಾರೆ.