ಚಿತ್ರದುರ್ಗ, ಫೆ.20 – ನಗರದ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದಿ. 22-2-23ರಂದು ಬುಧವಾರ ಬೆಳಗ್ಗೆ 9.00 ರಿಂದ ಸಂಜೆ 4.00 ರವರೆಗೆ ಉಚಿತ ಕಿವಿ, ಮೂಗು, ಗಂಟಲು ಮತ್ತು ಕಣ್ಣಿನ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಭಾಗವಹಿಸುವವರಿಗೆ ಕೆಲವೊಂದು ಪರೀಕ್ಷೆಗಳು ಹಾಗು ಶಸ್ತçಚಿಕಿತ್ಸೆ (ಪೊರೆ ಶಸ್ತçಚಿಕಿತ್ಸೆ) ಉಚಿತವಾಗಿ ಮಾಡಲಾಗುವುದು ಮತ್ತು ಔಷಧಿಗಳನ್ನು ರೋಗಿಯೇ ಭರಿಸಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 9980486823, 9743218549 ಸಂಪರ್ಕಿಸಲು ಕೋರಿದ್ದು, ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಪತ್ರಿಕಾ ಹೇಳಿಕೆಯಲ್ಲಿ ಕೋರಿದ್ದಾರೆ.