ಚಳ್ಳಕೆರೆ : ಹಿರಿಯೂರಿನ ಶಿಕ್ಷಕ ಶಿವಾನಂದ ಅವರ ದಲಿತ ವಿರೋಧಿ ನಡೆಯು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಗೊಂಡ ಹಿನ್ನೆಲೆಯಲ್ಲಿ ಜವಬ್ದಾರಿ ಸ್ಥಾನದಲ್ಲಿರುವ ಅವರನ್ನು ಶಿಕ್ಷಕ ವೃತ್ತಿಯಿಂದ ಅಮಾನತುಗೊಳಿಸಬೇಕು ಎಂದು ನಾಯಕನಹಟ್ಟಿ ಹೋಬಳಿಯ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ನಾಯಕನಹಟ್ಟಿ ಪಟ್ಟಣದ ನಾಡಕಚೇರಿಯ ಆವರಣದಲ್ಲಿ ಗುರುವಾರ ದಲಿತ ವಿರೋಧಿ ಹೇಳಿಕೆ ನೀಡಿದ ಶಿಕ್ಷಕನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ, ಮನವಿ ಪತ್ರ ಸಲ್ಲಿಸಿದರು. ಹೋಬಳಿಯ ಡಿಎಸ್ಎಸ್ ಪದಾಧಿಕಾರಿಯಾದ ಓಬಳೇಶ್ ಮಾತನಾಡಿ, ಹಿರಿಯೂರು ನಗರದ ರಿಲಯನ್ಸ್ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ಶಿಕ್ಷಕ ಶಿವಾನಂದ ಅವರು ನೂತನವಾಗಿ ಮನೆಯನ್ನು ನಿರ್ಮಾಣ ಮಾಡಿರುತ್ತಾರೆ ಆ ಮನೆಯ ಪೇಂಟಿAಗ್ ಕೆಲಸಕ್ಕೆ ಪರಿಶಿಷ್ಟ ಜಾತಿಯ ಯುವಕರು ತೆರಳಿರುತ್ತಾರೆ. ಇದನ್ನು ಕಂಡು ಮನೆಯ ಮಾಲೀಕರಾದ ಶಿಕ್ಷಕ ಶಿವಾನಂದ ಗುತ್ತಿಗೆದಾರನ ಬಳಿ ನಮ್ಮ ಮನೆಯ ಕೆಲಸಕ್ಕೆ ಪರಿಶಿಷ್ಟ ಜಾತಿಯ ಯುವಕರನ್ನು ಕಳುಹಿಸಬೇಡ ಅದು ನಮಗೆ ಸರಿ ಹೋಗುವುದಿಲ್ಲ ಎಂದು ಹೇಳಿದ್ದಾರೆ ಹೀಗೆ ಹೇಳಿದ ದೂರವಾಣಿ ಸಂಭಾಷಣೆಯು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಮೇಲಾಗಿ ಮನೆಯ ಮಾಲೀಕ ಶಿವಾನಂದ ಮೂಲತಃ ಶಿಕ್ಷಕರಾಗಿದ್ದು ಶಿಕ್ಷಕ ವೃತ್ತಿಗೆ ಕಳಂಕಿತರಾಗಿದ್ದಾರೆ.

ವಿದ್ಯಾರ್ಥಿಗಳಿಗೆ ಪಾಠಪ್ರವಚನ ಮಾಡುವ ಮೂಲಕ ಸಮ ಸಮಾಜದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಬೇಕಾದ ಶಿಕ್ಷಕ ಶಿವಾನಂದ ಜಾತಿವಾದಿಯಾಗಿದ್ದಾರೆ. ಇಂಥವರು ಪವಿತ್ರವಾದ ಶಿಕ್ಷಕ ವೃತ್ತಿಯಲ್ಲಿ ಮುಂದುವರಿಯುವ ಅರ್ಹತೆಯನ್ನು ಕಳೆದುಕೊಂಡಿದ್ದಾರೆ ಹಾಗಾಗಿ ಅವರನ್ನು ಶಿಕ್ಷಕ ವೃತ್ತಿಯಿಂದ ಶಾಶ್ವತವಾಗಿ ವಜಾಗೊಳಿಸಿ ಕಾನೂನಿನ ಕ್ರಮ ಜರುಗಿಸಬೇಕು ಎಂದು ಆಗ್ರಸಿದರು.
ಬಹುಜನ ಸಮಾಜವಾದಿ ಪಕ್ಷದ ತಾಲ್ಲೂಕು ಅಧ್ಯಕ್ಷ ಬಿ.ಟಿ.ಶಿವಕುಮಾರ್ ಮಾತನಾಡಿ, ಶಿಕ್ಷಕ ಶಿವಾನಂದ ಅವರ ದಲಿತ ವಿರೋಧಿ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಮಸ್ತ ದಲಿತ ವರ್ಗಕ್ಕೆ ಅವಮಾನವೆಸಾಗಿದ್ದಾರೆ. ಕೂಡಲೇ ಪೊಲೀಸ್ ಇಲಾಖೆ ಅವರ ವಿರುದ್ಧ ದಲಿತ ದೌರ್ಜನ್ಯ ವಿರೋಧಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಹಾಗೂ ಶಿವಾನಂದ ಅವರು ವಹಿಸಿರುವ ಸಂಘ ಸಂಸ್ಥೆಗಳಲ್ಲಿನ ಸ್ಥಾನಮಾನಗಳು, ಸರ್ಕಾರಿ ಹುದ್ದೆಯಿಂದ ಅವರನ್ನು ವಜಾಗೊಳಿಸಬೇಕು. ಇದರಿಂದ ಜಿಲ್ಲೆಯಲ್ಲಿರುವ ದಲಿತ ವಿರೋಧಿ ಮನಸ್ಥಿತಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇವರ ವಿರುದ್ಧ ಉಗ್ರ ಹೋರಾಟವನ್ನು ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಿಕ್ಷಕ ಶಿವಾನಂದ ಅವರ ಹೇಳಿಕೆ ಖಂಡನೀಯವಾಗಿದ್ದು, ಅವರ ವಿರುದ್ಧ ಕ್ರಮ ಜರುಗಿಸುವಂತೆ ನೀಡಿರುವ ಈ ಮನವಿಪತ್ರವನ್ನು ಮೇಲಾಧಿಕಾರಿಗಳಿಗೆ ರವಾನಿಸಲಾಗುವುದು ಎಂದು ಕಂದಾಯ ನಿರೀಕ್ಷಕ ಆರ್ ಚೇತನ್ ಕುಮಾರ್ ಹೇಳಿದರು.
ಇದೆ ವೇಳೆ ಬಿಜೆಪಿ ಎಸ್ಸಿ ಮೋರ್ಚಾ ಮಂಡಲ ಅಧ್ಯಕ್ಷ ಟಿ.ಶಿವದತ್ತ, ಡಿಎಸ್ಎಸ್ ಪದಾಧಿಕಾರಿಗಳಾದ ಎಂ.ಟಿ.ಮAಜುನಾಥ, ಆರ್.ತಿಪ್ಪೇಸ್ವಾಮಿ, ಟಿ.ಬಸವರಾಜ, ಬಿ.ತಿಪ್ಪೇಸ್ವಾಮಿ, ಜಿ.ಒ.ಸಂತೋಷ್ ರಾಮಚಂದ್ರಪ್ಪ, ಎಸ್.ಸಚಿನ್, ಟಿ.ಸ್ವಾಮಿ ಇ.ಪ್ರದೀಪ್, ಮಧು, ಶಶಿಧರ, ತರುಣ್ ಇದ್ದರು.

About The Author

Namma Challakere Local News
error: Content is protected !!