ಆಕಸ್ಮಿಕ ಬೆಂಕಿಗೆ ಜಾನುವಾರಗಳ ಮೇವಿನ ಬಣವೆಗಳು ಭಸ್ಮ,
ರೈತನ ಆಕ್ರಂದನ ಮುಗಿಲು ಮುಟ್ಟಿತು
ಚಳ್ಳಕೆರೆ : ರೈತನ ಮೇವಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಜಾನುವಾರುಗಳಿಗಾಗಿ ಸಂಗ್ರಹಿಸಿದ್ದ ಮೇವು ಸಂಪೂರ್ಣವಾಗಿ ಸುಟ್ಟು ಬಸ್ಮವಾಗಿರುವ ಘಟನೆ ಜರುಗಿದೆ.
ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ವ್ಯಾಪ್ತಿಯ ಬಂಜಿಗೆರೆ ಗ್ರಾಮದ ರೈತ ತಿಪ್ಪೇಸ್ವಾಮಿ ಇವರ ಕಣದಲ್ಲಿ ಸುಮಾರು 6 ಲೋಡು ಶೇಂಗಾ ಮೇವು, 3ಲೋಡು ಮೆಕ್ಕೆಜೋಳ ಸಪ್ಪೆ , 2ಲೋಡು ಬಿಳಿ ಜೋಳ ಸಪ್ಪೆ .2 ಲೋಡು ಕಡ್ಡಿ ಮೇವು ಹಾಗೂ ಗೋಪಾಲಪ್ಪ ಇವರದು 1 ಲೋಡು ಶೇಂಗಾ ಮೇವಿಗೆ ಮಂಗಳವಾರ ತಡ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಬೆಂಕಿ ನಂದಿಸುವಷ್ಣರಲ್ಲಿ ಸಂಪೂರ್ಣವಾಗಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕು ಸಂಪೂರ್ಣವಾಗಿ ಬಸ್ಮವಾಗಿದೆ.
ನೂರಾರು ಜಾನುವಾರಗಳ ಮೇವಿಗೆ ಸಂಗ್ರಹಿಸಿದ್ದ ರೈತನಿಗೆ ಬರಸಿಡಿಲು ಬಡಿದಂಗಾಗಿದೆ.
ಇನ್ನೂ ರೈತರಿಗೆ ಈಗ ಜಾನುವಾರಗಳ ಪೋಷಣೆಗೆ ಕಷ್ಟಕರವಾಗಿದ್ದು ಮೇವಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಆಕಸ್ಮಿಕ ಬೆಂಕಿಗೆ ಆಹುತಿಯಾದ ಮೇವಿನ ಬಣವೆಗಳು ಒಂದೆಡೆಯಾದರೆ ಜಾನುವಾರಗಳ ಮೇವಿನ ಕೊರತೆ ಕಾಣುತ್ತಿದೆ ಇದರಿಂದ ರೈತನಿಗೆ ಅಪಾರ ನಷ್ಟವಾಗಿದೆ ಎಂದು ನೊಂದ ರೈತರಾದ ಗೋಪಾಲಪ್ಪ, ತಿಪ್ಪೇಸ್ವಾಮಿ ನೋವನ್ನು ವ್ಯಕ್ತಪಡಿಸಿದರು.