ಬೀದಿಬದಿ ವ್ಯಾಪಾರಸ್ಥರು ಡಿಜಿಟಲ್ ನಾನು ಕೋಡ್ ವ್ಯವಹರಿಸುವಂತೆ ಸೂಚನೆ ನೀಡಿದ ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಟಿ. ಲೀಲಾವತಿ
ನಾಯಕನಹಟ್ಟಿ:: ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಡಿಜಿಟಲ್ ನಾನು ಕೋಡ್ ಯೋಜನೆಯ ಜಾರಿಗೆ ತಂದಿರುವುದು ಬೀದಿಬದಿ ವ್ಯಾಪಾರಸ್ಥರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಟಿ. ಲೀಲಾವತಿ ಹೇಳಿದ್ದಾರೆ.
ಅವರು ಗುರುವಾರ ಪಟ್ಟಣ ಪಂಚಾಯತಿ ಕಚೇರಿಯಲ್ಲಿ ಆಯೋಜಿಸಿದ್ದ ಕೇಂದ್ರ ಪುರಸ್ಕೃತ ಯೋಜನೆಗಳ ಪಿಎಂ ಶ್ರೀನಿಧಿ ಅಡಿ ಬೀದಿಬದಿ ವ್ಯಾಪಾರಿಗಳಿಗೆ ಡಿಜಿಟಲ್ ನಾನ್ ಕೋಡ್ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ್ದಾರೆ
ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರಧಾನ ಮಂತ್ರಿ ಆತ್ಮ ನಿರ್ಬಾರ್ ಯೋಜನೆ ಅಡಿಯಲ್ಲಿ ಈ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ ಆದ್ದರಿಂದ ಬೀದಿಬದಿ ವ್ಯಾಪಾರಸ್ಥರಿಗೆ ಡಿಜಿಟಲ್ ನಾನು ಕೊಡನಲ್ಲಿ ವ್ಯಾಪಾರ ವ್ಯವಹರಿಸುವಂತೆ ತಿಳಿಸಿದರು.
ಇದೆ ವೇಳೆ ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ಸೂರ್ಯದೇವ ನಾಯಕ ಮಾತನಾಡಿ ಡಿಜಿಟಲ್ ನಾನ ಕೊಡಸುವುದರಲ್ಲಿ ಯಾವುದೇ ವಂಚನೆ ಮೋಸಕ್ಕೆ ಅವಕಾಶ ಸಿಗುವುದಿಲ್ಲ ಬ್ಯಾಂಕುಗಳಿಗೆ ಅಲೆದಾಡುವ ಸಮಯ ಕಡಿಮೆಯಾಗುತ್ತದೆ ಈ ಮಹತ್ವದ ಯೋಜನೆಯ ಸೌಲಭ್ಯವನ್ನು ಎಲ್ಲಾ ಬೀದಿಬದಿ ವ್ಯಾಪಾರಿಗಳು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಸ್‌ಬಿಐ ವ್ಯವಸ್ಥಾಪಕರಾದ ರಾಹುಲ್, ಸಮುದಾಯ ಸಂಘಟನಾಧಿಕಾರಿ ಪಿ ಬಸಣ್ಣ, ಸಮುದಾಯ ಸಂಘಟಿಕರು ನಾಗರತ್ನಮ್ಮ, ಸ್ಥಳೀಯ ಸಂಪನ್ಮೂಲ ವ್ಯಕ್ತಿ ರೇಣುಕಮ್ಮ ಸೇರಿದಂತೆ ಬೀದಿಬರಿ ವ್ಯಾಪಾರಸ್ಥರು ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು