ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ತುರುವನೂರು ಗ್ರಾಮದಲ್ಲಿ ನಡೆದ ಶ್ರೀ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಮನುಷ್ಯನ ದಿನ ನಿತ್ಯದ ತೊಳಲಾಟದಲ್ಲಿ ನೆಮ್ಮದಿ, ಹಾಗೂ ಶಾಂತಿ ಕಂಡುಕೊಳ್ಳಲು ದೇವರ ಮೊರೆಹೋಗುವುದು ಅನಿವಾರ್ಯ ಅಂತಹ ಧಾರ್ಮಿಕ ನೆಲೆಗಟ್ಟು ನಮ್ಮ ಸಂಸ್ಕೃತಿಯಲ್ಲಿ ನೆಲೆಯೂರಿದೆ ಆದ್ದರಿಂದ ಪುರಾತನ ಕಾಲದಿಂದಲೂ ಇಲ್ಲಿ ಧಾರ್ಮಿಕ ಸಂಪ್ರಾದಯಗಳು ಜೀವಂತವಾಗಿವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಾಬು ರೆಡ್ಡಿ, ಪ್ರಕಾಶ್‌ಮೂರ್ತಿ ಸ್ಥಳೀಯ ಮುಖಂಡರು ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.