ಚಳ್ಳಕೆರೆ : ಚುನಾವಣೆ ಸಮೀಪಿಸುತ್ತಿದ್ದು ಈಗಾಗಲೇ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮದ ಮೂಲಕ ಚುನಾವಣೆ ನಡೆಸಲು ಅಧಿಕಾರಿಗಳ ಆದೇಶದ ಮೆರೆಗೆ ವಿದ್ಯುನ್ಮಾನ ಮತಯಂತ್ರ (ಇವಿಎಂ), ವಿವಿ ಪ್ಯಾಟ್ ಬಗ್ಗೆ ಮತದಾರರಿಗೆ ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದು ಸಹಾಯಕ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ರೇಹಾನ್ ಪಾಷ ತಿಳಿಸಿದರು.
ನಗರದ ತಾಲೂಕು ಕಚೇರಿ ಚುನಾವಣೆ ಶಾಖೆಯ ಸಭಾಂಗಣದಲ್ಲಿ ಸೆಟ್ಟರ್ ಅಧಿಕಾರಿಗಳು ಇವಿಎಂ–ವಿವಿ ಪ್ಯಾಟ್ ಬಳಕೆ ಬಗ್ಗೆ ಮತದಾರರಿಗೆ ಪ್ರಾತ್ಯಕ್ಷತೆ ಬಗ್ಗೆ ತರಬೇತಿ ನೀಡಿದರು. ವಿಧಾನ ಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಇಂದಿನಿAದ ಮತದಾರರಿಗೆ ಮತಗಟ್ಟೆ ವ್ತಾಪ್ತಿಯಲ್ಲಿ ಮತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ
ಮತಯಂತ್ರದ ಜತೆ ಅಳವಡಿಸುವ ವಿವಿ ಪ್ಯಾಟ್‌ನ ಮುದ್ರಣವಾಗುವ ಖಾತರಿ ಪತ್ರಕ್ಕೆ ನೋಟುಗಳಿಗೆ ನೀಡುವ ರೀತಿಯಲ್ಲಿ ಭದ್ರತಾ ಕೋಡ್ ನೀಡಲಾಗುತ್ತದೆ. ಹೀಗಾಗಿ, ಮತಯಂತ್ರಗಳನ್ನು ಹ್ಯಾಕ್ ಮಾಡುವುದು ಅಸಾಧ್ಯ ಎಂದು ಹೇಳಿದರು.
ಯಾರಿಗೆ ಮತದಾನ ಮಾಡಿದ್ದೇನೆ ಎಂಬುದನ್ನು ಮತದಾರ ಕ್ಷಣದಲ್ಲೇ ವೀಕ್ಷಣೆ ಮಾಡಬಹುದು. ಮತ ಚಲಾಯಸಿದವರಿಗೆ ಮಾತ್ರ ವೀಕ್ಷಣೆಗೆ ಅವಕಾಶ ಇದೆ. ಹೀಗಾಗಿ ಯಾವುದೇ ಗೊಂದಲ ಇಲ್ಲ’ ಎಂದು ಸ್ಪಷ್ಟಪಡಿಸಿದರು. ಮತದಾರರಿಗೆ ಗೊಂದಲವಾಗದAತೆ ವಿವಿ ಪ್ಯಾಟ್ ಮತಯಂತ್ರಗಳ ಬಗ್ಗೆ ಅರಿವು ಮೂಡಿಸುವಂತೆ ಸೆಟ್ಟರ್ ಅಧಿಕಾರಿಗಳಿಗೆ ತಿಳಿಸಿದರು.