ಚಳ್ಳಕೆರೆ : ಕಿತ್ತು ತಿನ್ನುವ ಬಡತನ ಮಧ್ಯೆ ಹೇಗಾದರೂ ಮಾಡಿ ತನ್ನ ಪುಟ್ಟ ಕಂದಮ್ಮನ ಜೀವ ಉಳಿಸಿಕೊಳ್ಳಬೇಕು ಎಂಬ ಹೆತ್ತವರ ಅಳಲು ಎಂಥಹ ಕಲ್ಲು ಹೃದವನ್ನು ಕರಗಿಸುತ್ತದೆ, ಇಂತಹ ಹೃದಯ ವಿದ್ರವಕ ಘಟನೆ ಚಳ್ಳಕೆರೆ ತಾಲೂಕಿನ ಸಾಣೀಕೆರೆ ಗ್ರಾಪಂ ವ್ಯಾಪ್ತಿಯ ಕಾಪರಹಳ್ಳಿ ಗ್ರಾಮದ ಬಡಕುಟುಂಬದಲ್ಲಿ ಕಾಣಬಹುದು.
ಬಡಕುಟುಂಬದ ಜಿ.ಟಿ.ಕುಮಾರ್ ಇವರ 7 ವರ್ಷದ ಪುತ್ರಿ ಪಲ್ಲವಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಮಗುವಿಗಾಗಿ ಈಗಾಗಲೆ ಸಾಕಷ್ಟು ಚಿಕಿತ್ಸೆಗಾಗಿ ಹಣ ಖರ್ಚು ಮಾಡಿಕೊಂಡು ಹಣವಿಲ್ಲದೆ ಚಿಕಿತ್ಸೆಗಾಗಿ ಅಲೆದಾಡುತ್ತಿದ್ದಾರೆ.
ಎಲ್ಲಾ ಮಕ್ಕಳಂತೆ ಶಾಲೆಗೆ ಹೋಗುತ್ತಾ, ಗೆಳೆಯರೊಂದಿಗೆ ಆಟವಾಡುವ ವಯಸ್ಸಿನಲ್ಲಿ ಈ ಪುಟ್ಟ ಬಾಲಕಿಗೆ ಥಲೆಸ್ಸೇಮಿಯ ರಕ್ತ ಸಮಸ್ಯೆಯಿಂದ ಬಳಲುತಿದ್ದಾಳೆ.
ಈ ಮಾರಣಾಂತಿಕ ಖಾಯಿಲೆ ಚಿಕಿತ್ಸೆಗೆ ಈಗಾಗಲೆ ಸುಮಾರು 2 ರಿಂದ 3 ಲಕ್ಷ ರೂ ಖರ್ಚು ಮಾಡಿ ಚಿಕಿತ್ಸೆಕೊಡಿಸಿದ್ದು ಮಗಳ ಶಸ್ತ್ರಚಿಕಿತ್ಸೆ ಮಾಡಿಸಲು ಸುಮಾರು 10 ಲಕ್ಷ ರೂಗಳ ಅವಶ್ಯಕತೆ ಇದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಈ ಖಾಯಿಲೆಯಿಂದ ಬೇಸತ್ತಾ ಪೋಷಕರು ನೆರವಿನ ಹಸ್ತಕ್ಕೆ ಕೋರಿದ್ದಾರೆ, ಕಡುಬಡತನ ಮಧ್ಯೆ ಜೀವಿಸುವ ಇವರ ಬದುಕು ದುಸ್ಥಿರವಾಗಿದೆ, ಪ್ರತಿ ತಿಂಗಳು ಎರಡು ಬಾರಿ ರಕ್ತ ಹಾಗೂ ಬಿಳಿ ರಸ್ತೆ ಕಣಗಳನ್ನು ಹಾಕಿಸಬೇಕು. ಹೀಗಾಗಿ ಕೂಲಿ ನಾಲಿಯಿಂದ ಜೀವನ ಸಾಗಿಸುವ ಬಡಕುಟುಂಬಸ್ಥರಿಗೆ ದಿಕ್ಕೇ ತೋಚದಂತಾಗಿದೆ ಎಂಬುದು ಮಗುವಿನ ತಂದೆ ತಾಯಿಯ ಅಳಲಾಗಿದೆ.
ಪೋಷಕರ ವಿಳಾಸ :
ವಿಳಾಸ ಎಸ್.ಟಿ.ಕುಮಾರ ಬಿನ್ ತಿಮ್ಮಪ್ಪ, ಕಾಪರಹಳ್ಳಿ, ಅಂಚೆ, ಚಳ್ಳಕೆರೆ ತಾ. ಚಿತ್ರದುರ್ಗ ಜಿಲ್ಲೆ, ಬ್ಯಾಂಕ್ ಖಾತೆ ಡಿಸಿಸಿ ಬ್ಯಾಂಕ್ ಖಾತೆ-199000689302, ಐಎಪ್‌ಎಸ್ ಕೋಡ್ -0004001 ಚಳ್ಳಕೆರೆ ಶಾಖೆ ಮೊಬೈಲ್ ಸಂಖ್ಯೆ-8197333213, ನೆರವು ನೀಡುವ ದಾನಿಗಳು ಸಂಪರ್ಕಿಸುವAತೆ ಕೋರಿದ್ದಾರೆ.

About The Author

Namma Challakere Local News
error: Content is protected !!