ಚಳ್ಳಕೆರೆ : ನಗರದ 27ನೇ ವಾರ್ಡ್ನಲ್ಲಿ ಕಳೆದ ಹಲವು ದಿನಗಳಿಂದ ಸ್ವಚ್ಚತೆ ಮಾಡದೆ ನಗರಸಭೆ ದಿವ್ಯ ನಿರ್ಲಕ್ಷö್ಯ ವಹಿಸಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ನಗರಸಭೆಗೆ ಕಸ ತುಂಬಿದ ಟ್ರಾಕ್ಟರ್ ತಂದು ಪ್ರತಿಭಟಸಿಲು ಮುಂದಾಗಿದ್ದಾರೆ ಅದರೆ ಪೌರಾಯುಕ್ತ ಸಿ.ಚಂದ್ರಪ್ಪ ಅವರನ್ನು ಮನವೊಲಿಸಿ ತುಂಬಿದ ಟ್ರಾಕ್ಟರ್ ಮರು ವಾಪಸ್ ಕಳಿಸಿದ ಘಟನೆ ಚಳ್ಳಕೆರೆ ನಗರಸಭೆ ಆವರಣದಲ್ಲಿ ನಡೆದಿದೆ.
ಹೌದು ನಿಜಕ್ಕೂ ಶೋಚನೀಯ ಸುಮಾರು 70 ರಿಂದ 80 ಸಾವಿರ ಜನ ಸಂಖ್ಯೆ ಇರುವ ನಗರಸಭೆ ಪ್ರದೇಶದಲ್ಲಿ ಕೇವಲ 80 ಜನ ಮಾತ್ರ ಪೌರಾಕಾರ್ಮಿಕರು ಕೆಲಸ ನಿರ್ವಸುತ್ತಿದ್ದು ಇದರಿಂದ ನಗರದಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಹಾಗುತ್ತಿಲ್ಲ ಎಂಬAತಾಗಿದೆ.
ಇನ್ನೂ ಆಡಳಿತ ಪಕ್ಷದ ಸದಸ್ಯರು ತಮ್ಮ ವಾರ್ಡಗಳ ಪ್ರತಿಷ್ಠೆಗೆ ಸಿಬ್ಬಂದಿ ರವಾನಿವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತಾರೆ, ಇನ್ನೂ ಉಳಿದ ಪೌರಕಾರ್ಮಿಕರು ರಸ್ತೆಗೆ ಸ್ವಚ್ಚತೆಗೆ ಮೀಸಲು ಹಾಗುತ್ತಾರೆ ಈಗೇ ನಗರಸಭೆ ಅಧಿಕಾರಿಗಳು ಅತಂತ್ರ ಸ್ಥಿತಿಯಲ್ಲಿ ದಿನನಿತ್ಯದ ಒತ್ತಡದಲ್ಲಿ 31 ವಾರ್ಡಗಳ ಸ್ವಚ್ಚತೆಗೆ ಮುಂದಾಗಿದ್ದಾರೆ
ಆದರೆ ಕೆಲ ಸದಸ್ಯರು ಹಾಗೂ ನಿವಾಸಿಗಳು ಜಗಳಕ್ಕೆ ಹೋಗುವುದು ನಗರಸಭೆಯಲ್ಲಿ ಮಾಮೂಲು ಹಾಗಿದೆ ಆದರೆ 31ಜನ ಸದಸ್ಯರು ತಾವು ಪ್ರತಿನಿಧಿಸಿದ ವಾರ್ಡಗಳಲ್ಲಿ ಸಾರ್ವಜನಿಕರ ಜಾಗೃತಿ ಕಾರ್ಯ ಮಾತ್ರ ಮಾಡುತ್ತಿಲ್ಲ, ಈ ಎಲ್ಲಾ ಒತ್ತಡಗಳ ಮಧ್ಯೆ ದಿನನಿತ್ಯ ಗ್ರಾಮೀಣ ಪ್ರದೇಶದಿಂದ ಸರಕು ತಂದು ಮಾರಾಟ ಮಾಡುವ ಸಾರ್ವಜನಿಕರ ಕಸದ ರಾಶಿಗಳನ್ನು ರವಾನಿಸಬೇಕು ಈಗೇ ಸಿಬ್ಬಂದಿ ಕೊರತೆಯ ಮಧ್ಯೆಯು ನಗರದ ಸ್ವಚ್ಚತೆಗೆ ಹಾಗುತ್ತಿಲ್ಲ ಎಂಬ ಮಾತು ಕೇಳಿ ಬಂದಿವೆ.
ಇನ್ನೂ ಸ್ಥಳೀಯ ನಿವಾಸಿಗಳ ಆರೋಪಕ್ಕೆ ತಕ್ಷಣವೇ ಜಾಗೃತರಾದ ಅಧಿಕಾರಿಗಳು 27ನೇ ವಾರ್ಡ್ನಲ್ಲಿ ಇರುವ ಕಸದ ರಾಶಿಗೆ ತಿಲಾಂಜಲಿ ಹಾಡುವಲ್ಲಿ ಯಶಶ್ವಿಯಾಗಿದ್ದಾರೆ.
ಪೌರಾಯುಕ್ತ ಚಂದ್ರಪ್ಪ ಪತ್ರಿಕೆಯೊಂದಿಗೆ ಮಾತನಾಡಿ ಪ್ರತಿನಿತ್ಯ ಬೆಳ್ಳಂಬೆಳಗ್ಗೆ ಅಧ್ಯಕ್ಷರು, ಉಪಾಧ್ಯಕ್ಷರು ನಗರಸಭೆ ಸಿಬ್ಬಂದಿಗಳು ಹಾಗೂ ಅಯಾ ವಾರ್ಡ್ ಸದಸ್ಯರ ಸಮ್ಮುಖದಲ್ಲಿ ಸ್ವಚ್ಚತೆ ಕಾರ್ಯ ಭರದಿಂದ ಸಾಗುತ್ತಿದೆ 27ನೇ ವಾರ್ಡ್ನಲ್ಲೂ ಸ್ಚಚ್ಚತೆ ಮಾಡಲಾಗುವುದು ಸದಸ್ಯರು ಕಸವನ್ನು ತಂದು ಕಚೇರಿಗೆ ಸುರಿಯುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದ್ದ ಈಗ ಅಲ್ಲಿನ ಕಸವನ್ನು ಸಹ ಸ್ವಚ್ಚತೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಖಾಲಿ ನಿವೇಶನಗಳ ರಂಪಾಟ : ನಗರದಲ್ಲಿ ಸರಿಸುಮಾರು ಗ್ರಾಮೀಣ ಪ್ರದೇಶದ ಜನರು, ಹಾಗೂ ಬೇರೆ ಸ್ಥಳಗಳಲ್ಲಿ ವಾಸ ಮಾಡುವ ಸಾರ್ವಜನಿಕರು ನಗರದಲ್ಲಿ ನಿವೇಶನ ಪಡೆದು ಅಭಿವೃದ್ದಿ ಪಡೆಸದೆ ಖಾಲಿ ಬಿಟ್ಟಿದ್ದಾರೆ ಇದರಿಂದ ನಗರದ ಪ್ರಮುಖ ಸ್ಥಳಗಳಲ್ಲಿ, ದೇವಾಸ್ಥನ ಸಮೀಪ ಈಗೇ ಈ ಖಾಲಿ ನಿವೇಶನಗಳು ಹಂದಿಗ ವಾಸಸ್ಥನಗಳಾಗಿ ಮಾರ್ಪಟ್ಟಿವೆ ಇನ್ನೂ ಖಾಲಿ ನಿವೇಶನ ಮಾಲೀಕರಿಗೆ ಎಚ್ಚರಿಕೆ ನೋಟಿಸ್ ನೀಡಿದರು, ಕ್ರಮ ಕೈಗೊಂಡಿಲ್ಲ, ಇದರಿಂದ ನಗರಸಭೆ ಸಿಬ್ಬಂದಿಗೆ ಹೆಚ್ಚಿನ ಹೊರೆ ಕೂಡ ಹಾಗಿದೆ, ಇನ್ನೂ ಈ ಖಾಲಿ ನಿವೇಶನ ಮಾಲೀಕರ ಹೆಸರಲ್ಲಿ ನಿವೇಶನದ ಸ್ವಚ್ಚತೆ ಮಾಡಿಸಿ ಹೆಚ್ಚುವರಿ ಕಂದಾಯ ವಸೂಲಿ ಮಾಡಲಾಗುತ್ತದೆ ಎನ್ನುತ್ತಾರೆ ಪೌರಾಯುಕ್ತ ಸಿ.ಚಂದ್ರಪ್ಪ.