ಚಳ್ಳಕೆರೆ : ಹೌದು ರಾಜಾಕೀಯ ದಿನದಿಂದ ದಿನಕ್ಕೆ ರಂಗೇರುತ್ತಿದ್ದAತೆ ಆಯಿಲ್ ಸಿಟಯಲ್ಲಿ ಚುನಾವಣೆ ರಂಗೇರಿದೆ ಅದರಂತೆ ಮತದಾರರ ಓಲೈಕೆಗೆ ಮುರು ಪಕ್ಷಗಳ ಅಭ್ಯರ್ಥಿಗಳು ಮುಂಚೂಣಿಯಲ್ಲಿ ಬೀಡು ಬಿಟ್ಟಿದ್ದಾರೆ.
ಅದರಂತೆ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಮಾತ್ರ ನಿದ್ರೆಯಿಲ್ಲದೆ ಕಾರ್ಯಕರ್ತರನ್ನು ಪಕ್ಷದತ್ತ ಸೆಳೆಯುವಲ್ಲಿ ಮುಂದಿದ್ದಾರೆ.
ತಾಲೂಕಿನ ದೊಡ್ಡಚೆಲ್ಲೂರು ಗ್ರಾಪಂಚಾಯಿತಿಯ ಗ್ರಾಮಗಳ ಕಾಂಗ್ರೆಸ್ ಹಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಪಕ್ಷ ತೊರೆದು ಜೆಡಿಎಸ್ ಗೆ ಸೆರ್ಪಡೆಗೊಂಡರು.
ಚಿಕ್ಕಚೆಲ್ಲೂರು ಗ್ರಾಪಂ.ಅಧ್ಯಕ್ಷ ತಿಮ್ಮಣ್ಣ, ಸದಸ್ಯ ಚಿದಾನಂದಪ್ಪ, ಹನುಮಂತರಾಯ ದೊಡ್ಡಚೆಲ್ಲೂರು ಸದಸ್ಯ, ಚಿಕ್ಕಚೆಲ್ಲೂರು ಮಾಜಿ ಪಂಚಾಯತಿ ಸದಸ್ಯ ಶಂಕರಪ್ಪ, ಹೊನ್ನಯ್ಯನರೊಪ್ಪ – ಹೊನ್ನಪ್ಪ, ಶಿವಣ್ಣ, ವೀರಣ್ಣ, ತಿಪ್ಪೇಸ್ವಾಮಿ, ಚಿಕ್ಕಿರಪ್ಪ, ತಮ್ಮ ಅಪಾರ ಬೆಂಬಲಿಗರೊAದಿಗೆ ನಮ್ಮ ಪಕ್ಷದ ಸಿದ್ಧಾಂತಗಳು ಹಾಗೂ ಪಂಚರತ್ನ ಯೋಜನೆಗಳನ್ನು ಮೆಚ್ಚಿ, ಕಾಂಗ್ರೆಸ್ ಪಕ್ಷವನ್ನು ತೊರೆದು, ತಾಲೂಕು ಅಧ್ಯಕ್ಷರಾದ ಪಿ.ತಿಪ್ಪೇಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಂಡರು.
ಇದೇ ಸಮಯದಲ್ಲಿ ಪಕ್ಷದ ಮುಖಂಡರುಗಳಾದ, ಶಾಂತಕುಮಾರ್, ಮಾಜಿ ತಾಲೂಕು ಪಂಚಾಯತಿ ಅಧ್ಯಕ್ಷ ರಾಮಣ್ಣ, ಹೊನ್ನೆಶಣ್ಣ, ಯುವ ಮುಖಂಡರಾದ ಚಿಕ್ಕಚೆಲ್ಲುರು ಕುಮಾರ್, ದೇವರಾಜ್, ರಮೇಶ್, ಕಸ್ತೂರಪ್ಪ, ಪಂಚಾಯಿತಿಯ ಹಲವು ಕಾರ್ಯಕರ್ತರು ಹಾಗೂ ಮುಖಂಡರು ಹಾಜರಿದ್ದರು.