ಚಳ್ಳಕೆರೆ : ಗ್ರಾಮೀಣ ಪ್ರದೇಶದ ಹಳ್ಳಿ ಹಳ್ಳಿಗೂ ಕುಡಿಯುವ ನೀರಿನ ಸೌಲಭ್ಯ ನೀಡುವ ಮಹತ್ವದ ಯೋಜನೆ ತುಂಗಾ ಭದ್ರಾ ಹಿನ್ನೀರು ಯೋಜನೆ ಇಂತಹ ಯೋಜನೆ ಈಗಾಗಲೇ ಬಯಲು ಸೀಮೆ ಜನರಿಗೆ ದಾಹ ನೀಗಿಸಲು ಕಳೆದ ವರ್ಷದಿಂದ ಈ ಯೋಜನೆ ಸುಮಾರು 60ರಷ್ಟು ಕಾಮಗಾರಿ ಮುಗಿದಿದೆ.
ಇನ್ನೂ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಲಭ್ಯವಾಗಲಿದೆ. ಅದರಂತೆ ಇಂದು ನಗರದ ತಾಪಂ. ಆವರಣದಲ್ಲಿ ಯೋಜನಾ ಅಧಿಕಾರಿಗಳು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಹಾಗೂ ವ್ಯಾಟರ್ ಮೆನ್‌ಗಳಿಗೆ ಒಂದು ದಿನದ ತರಬೇತಿ ನೀಡುವ ಮೂಲಕ ಆವರಣದಲ್ಲಿ ವಸ್ತು ಪ್ರದರ್ಶನ ನೀಡಿ ಜಾಗೃತಿ ಮೂಡಿಸಿದರು.
ಇದೇ ಸಂಧರ್ಭದಲ್ಲಿ ತಾಪಂ ಇಓ ಹೊನ್ನಯ್ಯ ವಸ್ತು ಪ್ರದರ್ಶ ಮೇಳಕ್ಕೆ ಚಾಲನೆ ನೀಡಿದರು, ನಂತರ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು, ಇದೇ ಸಂಧರ್ಭದಲ್ಲಿ ತಾಪಂ.ಸಹಾಯಕ ನಿರ್ದೇಶಕ ಸಂತೋಷ್, ಸಂಪತ್ ಕುಮಾರ್ , ಇಂಜಿನಿಯಾರ್ ನವನೀತ್, ಬೋರಣ್ಣ, ದಿವಕಾರ್, ತಿಪ್ಪೆಸ್ವಾಮಿ ಇತರರು ಹಾಜರಿದ್ದರು.