ಚಳ್ಳಕೆರೆ : ಜ.19ರಂದು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಪ್ರಗತಿ ಪರೀಶಿಲನೆ ವೇಳೆಯಲ್ಲಿ ಶಾಸಕ ಟಿ.ರಘುಮೂರ್ತಿ ಹಾಗೂ ತಹಶೀಲ್ದಾರ್ ಎನ್.ರಘುಮೂರ್ತಿ ನಡುವೆ ನಡೆದ ಮಾತಿನ ಚಕಮಕಿಯಲ್ಲಿ ತಹಶೀಲ್ದಾರ್ ಎನ.ರಘುಮೂರ್ತಿ ಸಭತ್ಯಾಗ ಮಾಡಿದ ಹಿನ್ನೆಲೆಯಲ್ಲಿ ಇಂದು ಶಾಸಕರ ಭವನದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಆಯೋಜಿಸಿದ್ದ ಸಭೆಯಲ್ಲಿ ಮುಖಂಡರು ತಹಶೀಲ್ದಾರ್ ವರ್ತನೆಯ ಬಗ್ಗೆ ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ತಾಲೂಕಿನ ಪ್ರಥಮ ಪ್ರಜೆ ಶಾಸಕ ಟಿ.ರಘುಮೂರ್ತಿಗೆ ಅಗೌರವ ತೋರಿ ಸಭೆಯಿಂದ ಹೊರನಡೆದು, ಕಾನೂನು ಉಲ್ಲಂಘನೆ ಮಾಡಿದ ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿರನ್ನು ಈ ಕೂಡಲೆ ಸೇವೆಯಿಂದ ವಜಾಗೊಳಿಸಬೇಕು ಎಂದು ಮಾಜಿ ಜಿಲ್ಲಾ ಪಂಚಾಯಿತ್ ಸದಸ್ಯ ಬಿ.ಪಿ.ಪ್ರಕಾಶ್ ಮೂರ್ತಿ ಕಿಡಿಕಾರಿದರು.
ಇನ್ನೂ ಸಭೆಯಲ್ಲಿ ಮುಖಂಡ ಪಿ.ಟಿ.ತಿಪ್ಪೆಸ್ವಾಮಿ ಮಾತನಾಡಿ, ಇಂತಹ ತಹಶೀಲ್ದಾರ್ನ್ನು ಈ ಮೊದಲೇ ನೊಡಿದ್ದು ಇವರನ್ನು ಸರಕಾರ ಪದಚ್ಯುತಿಗೊಳಿಸಬೇಕು, ಈ ಕೂಡಲೇ ಬೇರೆಡೆಗೆ ವರ್ಗಾವಣೆ ಮಾಡಬೇಕು, ಶಾಸಕರಿಗೆ ಅಗೌರವ ಕೊಡುವ ಸೌಜನ್ಯವೂ ಕೂಡ ಇವರಲಿ ಇಲ್ಲ ಎಂದು ಆರೊಪ ಮಾಡಿದರು.
ಸಭೆಯಲ್ಲಿ ಅಭಿವೃದ್ಧಿ ವಿಷಯವಾಗಿ ಮಾಹಿತಿ ನೀಡ ಬೇಕಾದ ತಹಶೀಲ್ದಾರ್ ಶಾಸಕರ ವಿರುದ್ದವೇ ಉಡಾಫೆ ಉತ್ತರ ನೀಡಿ. ಕೈತೋರಿಸಿ ಜಿಲ್ಲಾಧಿಕಾರಿಗಳಿಗಾದರ ದೂರು ನೀಡಿ ಯಾರಿಗಾದರೂ ಕಳಿಸಿ ಎಂದು ಸಭೆಯಿಂದ ಎದ್ದು ಹೋಗಿರುವುದು ಇದು ವಿರೋಧ ಪಕ್ಷದವರನ್ನು ನಾಚುವಂತೆ ಮಾಡಿದ್ದು ಇದು ಶಾಸರೊಬ್ಬರಿಗೆ ಅಲ್ಲ ಇಡೀ ತಾಲೂಕಿನ ಜನತೆ ಅವಮಾನ ಮಾಡಿದಂತೆ ಇವರು ಕ್ಷೇತ್ರದ ಶಾಸಕರಿಗೆ ಈ ರೀತಿ ಯಾದರೆ ಇನ್ನು ಜನ ಸಾಮಾನ್ಯರ ಪಾಡೇನು ಎಂಬ ಪ್ರಶ್ನೆಯಾಗಿದೆ ಎಂದು ಸೈಯದ್ ಕಿಡಿಕಾರಿದರು.
ಇದೇ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ಸದಸ್ಯ ರಮೇಶ್ ಗೌಡ, ಮಲ್ಲಿಕಾರ್ಜುನಾ, ವೈ.ಪ್ರಕಾಶ್, ಕವಿತಾ, ಸುಜಾತ, ಜೈತುನ್ ಬಿ, ಸುಮಾ, ಸಾವಿತ್ರಮ್ಮ, ಮುಖಂಡ ರಾಜಣ್ಣ, ವಿರೇಶ್, ಗುಜ್ಜಾರಪ್ಪ, ಕಾಟಯ್ಯ, ಸಣ್ಣ ಸೂರಯ್ಯ, ಪ್ರಸನ್ನಕುಮಾರ್, ಮಂಜುನಾಥ್ ಇತರರು ಹಾಜರಿದ್ದರು.