ಚಳ್ಳಕೆರೆ : ಕುಟುಂಬದ ಪೌಷ್ಟಿಕ ಭದ್ರತೆಗಾಗಿ, ಗ್ರಾಮೀಣ ಪ್ರದೇಶಗಳಲ್ಲಿ ಜೀವಿಸುವ ಕುಟುಂಬಗಳು ಮನೆಯ ಹಿತ್ತಲಿನಲ್ಲಿ, ಹೊಲಗಳಲ್ಲಿ ಸಾವಯವ ಪದ್ಧತಿ ಅನುಸರಿಸಿ ಪೌಷ್ಟಿಕ ಕೈತೋಟ ನಿರ್ಮಾಣ ಮಾಡಿಕೊಳ್ಳಲು ಉತ್ತೇಜನ ನೀಡುವಂತೆ ಜಿಪಂ ಯೋಜನಾಧಿರಿ ಮಹಂತೇಶ್ ಹೇಳಿದರು.
ನಗರದ ತಾಲೂಕು ಪಂಚಾಯತ್ ಸಭಾಂಗದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಗ್ರಾಪಂ ಪಿಡಿಓ ಗಳಿಗೆ ಆಯೋಸಿದ್ದ ನರೇಗಾ ಪೌಷ್ಠಿಕ ಕೈತೋಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಗ್ರಾಮೀಣ ಭಾಗದ ಪ್ರತಿಯೊಂದು ಕುಟುಂಬದ ಮನೆಗಳ ವ್ಯರ್ಥವಾಗುವ ನೀರಿನಿಂದ ಖಾಲಿ ಜಾಗದಲ್ಲಿ ನರೇಗಾ ಯೋಜನೆಯಡಿಯಲ್ಲಿ ತರಕಾರಿ ಬೆಳೆಯಲು ಅನುದಾನ ನೀಡಲಿದ್ದು ಪ್ರತಿಯೊಂದು ಕುಟುಂಬಕ್ಕೂ ಪೌಷ್ಠಿಕ ಕೈತೋಟ ಬೆಳೆಸಲು ಕ್ರಿಯಾ ಯೋಜನೆ ರೂಪಿಸುವಂತೆ ಪಿಡಿಓ ಗಳಿಗೆ ಸೂಸನೆ ನೀಡಿದರು.
ತಾಪಂ ಹೊನ್ನಯ್ಯ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಅಪೌಷ್ಠಿಕತೆಯಿಂದ ನಾನಾ ಖಾಯಿಲೆಗಳಿಗೆ ತುತ್ತಾಗುತ್ತಿದ್ದು ಅಪೌಷ್ಠಿಕತೆಯನ್ನು ಹೋಗಲಾಡಿಸಲು ನರೇಗಾ ಯೋಜನೆಯಡಿಯಲ್ಲಿ ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಪ್ರತಿಕುಟುಂಬಗಳಿಗೆ ಮನೆಯ ಮುಂದೆ .ಹಿಂದೆ. ತೋಟಗಳಲ್ಲಿ ಸಾವಯವ ಕೃಷಿ ಪದ್ದತಿಯಲ್ಲಿ ಪೌಷ್ಟಿಕ ಕೈತೋಟದಲ್ಲಿನಾನಾ ಜಾತಿಯ ಹಣ್ಣು ಹಾಗೂ ತರಕಾರಿಗಳನ್ನು ಹಂಗಾಮಿಗನುಸಾರವಾಗಿ ಬೆಳೆದು ಕುಟುಂಬದ ಪೌಷ್ಟಿಕ ಅವಶ್ಯಕತೆ ಪೂರೈಸುವುದರ ಜತೆಗೆ ಹೆಚ್ಚಿನ ಹಣ್ಣು ಹಾಗೂ ತರಕಾರಿ ಮಾರಾಟ ಮಾಡಿ ಆದಾಯ ಪಡೆಯಬಹುದು. ಕೃಷಿ ಉತ್ಪಾದನೆಯಲ್ಲಿರೈತ ಮಹಿಳೆಯರು ಆಧಾಯ ಪಡೆಯುವ ಜತೆ ಸದೃಢ ಆರೋಗ್ಯವಂತರಾಗಲು ನೆರವಾಗುತ್ತದೆ, ಗ್ರಾಪಂ. ವ್ಯಾಪ್ತಿಯಲ್ಲಿ ಪೌಷ್ಠಿಕ ಕೈತೋಟ ನಿರ್ಮಿಸಲು ಮುಂದಾಗುವಂತೆ ತಿಳಿಸಿದರು.
ಸಭೆಯಲ್ಲಿ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಡಾ.ವಿರುಪಾಕ್ಷಪ್ಪ. ತಾಲೂಕು ಯೋಜನಾಧಿಕಾರಿ.ತಾಂತ್ರಿಕ ಅಧಿಕಾರಿ ಹಾಗೂ ಪಿಡಿಓಗಳು