ಚಳ್ಳಕೆರೆ : ದುಶ್ಚಟಗಳನ್ನು ತ್ಯಜಿಸಿ ಸಮಾಜದಲ್ಲಿ ತನ್ನದೆಯಾದಂತೆ ಚಾಪು ಮೂಡಿಸಿದ ಮಹಾನ್ ವ್ಯಕ್ತಿ ವೇಮರೆಡ್ಡಿ ಮಲ್ಲಮ್ಮ ಅವರ ಮೈದುನಾ ಪರಿರ್ವತನೆಯಲ್ಲಿ ಜಗತ್ತೆ ನಿಬ್ಬೆರುಗಾಗುವಂತೆ ಅವರು ಮಾಡಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು…
ನಗರದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವೇಮನ ಜಯಂತಿ ಕಾರ್ಯಕ್ರಮದಲ್ಲಿ ವೇಮನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು…ಸಾರ್ವ ಜನಾಂಗAದ ಏಳಿಗೆಗೆ ಶ್ರಮಿಸುವಂತಹ ಕೆಲಸವನ್ನು ವೇಮನ ಅವರು ಮಾಡಿದ್ದಾರೆ, ಅವರ ಸಾಧನೆಗಳ ಸದಾ ನಮಗೆ ಪ್ರೇರಣೆಯಾಗಬೇಕು ಎಂದು ಹೇಳಿದರು….
ತಹಶೀಲ್ದಾರ್ ಎನ್. ರಘುಮೂರ್ತಿ ಮಾತನಾಡಿ, ವೇಮನ ಅವರು ಹುಟ್ಟಿನಿಂದಲು ಬಹುಮುಖ ಪ್ರತಿಭೆಯಾಗಿ ಬೆಳೆದು ವಚನಕಾರನಾಗುತ್ತಾನೆ, ವೇಮನ ಆದರ್ಶಗಳನ್ನು, ತತ್ವಗಳನ್ನು ಈಗಿನ ಯುವ ಪೀಳಿಗೆಯು ಮೈಗೂಡಿಸಿಕೊಂಡು, ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕು ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ಪೌರಾಯುಕ್ತ ಸಿ.ಚಂದ್ರಪ್ಪ, ವೇಮನ ಸಮಾಜದ ರಘು, ಭೀಮರೆಡ್ಡಿ, ವೆಂಕಟೇಶ್ ರೆಡ್ಡಿ, ಪಶು ಇಲಾಖೆ ರೇವಣ್ಣ, ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು, ಕಂದಾಯ ಇಲಾಕೆ ಲಿಂಗೇಗೌಡ, ಪ್ರಕಾಶ್ ಸೇರಿದಂತೆ ಮುಂತಾದವರು ಇದ್ದರು.