ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಯುವ ದಿನದ ಅಗವಾಗಿ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಲ್. ಈಶ್ವರಪ್ಪರವರು ಇಡೀ ಜಗತ್ತು ಬೆರಗಾಗುವ ಹಾಗೆ ಮಾಡಿದವರು ವಿವೇಕಾನಂದರು. ಯುವಕರನ್ನು ಬಡಿದೆಬ್ಬಿಸುವ ಕೆಲಸಮಾಡಿದರು ಎಂದು ಮಾತನಾಡಿದರು.
ಯುವಕರನ್ನು ಉದ್ದಿಮೆದಾರರನ್ನಾಡಿ ಮಾಡಬೇಕು. ನಮ್ಮ ದೇಶ ಇಂದು ಸದೃಢವಾಗಿ ಬೆಳೆಯಲು ಇಂತಹ ಮಹಾನ್ ಪುರುಷರು ಕಾರಣರು. ಎಲ್ಲ ದೇವರುಗಳನ್ನು ಒಂದೆಡೆ ಹಾಕಿ ಭಾರತ ಮಾತೆಯನ್ನು ಪೂಜಿಸಿ ಎಂದು ಹೇಳಿದರು.ಐಕ್ಯೂಎಸಿ ಸಂಚಾಲಕರಾದ ಶ್ರೀ. ಎನ್. ಚಲುವರಾಜು ಪ್ರತಿಯೊಬ್ಬ ಮನುಷ್ಯನಿಗೆ ಒಂದು ಗುರಿ ಇರಬೇಕು. ನಮ್ಮಲ್ಲಿ ಎಲ್ಲಾ ಸಾಮರ್ಥ್ಯ ಇದೆ. ಅದನ್ನು ಉತ್ತಮವಾಗಿ ಬಳಸಿಕೊಳ್ಳಬೇಕು. ಯುವಕರಲ್ಲಿ ರಾಷ್ಟçಭಕ್ತಿ ಒಡೆದ ಮನುಸ್ಸುಗಳಿಗೆ ಬೆಸುಗೆ ಹಾಕುವ ಶಕ್ತಿ ಇದೆ ಎಂದು ವಿವೇಕಾನಂದರು ಒತ್ತಿ ಹೇಳುತ್ತಿದ್ದರು. ದೇಶ ಕಂಡ ಪ್ರಬಲ ತತ್ತ÷್ವಜ್ಞಾನಿ. ಅವರು ಆಧ್ಯಾತ್ಮಿಕತೆಯ ಮೇರು ಪರ್ವತ. ಇಂದಿನ ಯುವಕರಿಗೆ ವಿವೇಕಾನಂದರು ಆದರ್ಶವಾಗಿದ್ದಾರೆ ಎಂದು ಹಿತನುಡಿಗಳನ್ನಾಡಿದರು.
ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಕು. ಚೇತನ ಜೆ. ಸ್ವಾಮಿ ವಿವೇಕಾನಂದರು ಹಿಂದುತ್ವವನ್ನು ಪ್ರಪಂಚದಾದ್ಯAತ ಪಸರಿಸಿದರು. ಪಾಶ್ಚಾತ್ಯ ತತ್ತ÷್ವವನ್ನು ಚೆನ್ನಾಗಿ ತಿಳಿದುಕೊಂಡಿದ್ದರು. ರಾಮಕೃಷ್ಣ ಪರಮಹಂಸರ ಮಾತುಗಳಿಗೆ ವಿವೇಕಾನಂದರು ಮಾರು ಹೋಗಿದ್ದರು. ಅವರು ಚಿಕಾಗೋದಲ್ಲಿ ಮಾತನಾಡಿದ ಮಾತುಗಳು ಜನರನ್ನು ಮುಗ್ಧಗೊಳಿಸುವುದು, ಹಿಂದೂ ದೇಶದ ಒಗ್ಗಟ್ಟು ಹಾಗೂ ಧರ್ಮದ ಬಗ್ಗೆ ಮಾತನಾಡಿದರು. ಜ್ಞಾನ, ಭಕ್ತಿ, ಕರ್ಮ ಮತ್ತು ರಾಜಯೋಗದ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಿದ್ದರು. ಅವರ ಜನ್ಮದಿನವನ್ನು ಭಾರತೀಯರು ರಾಷ್ಟಿçÃಯ ಯುವ ದಿನವನ್ನಾಗಿ ಆಚರಿಸುತ್ತಿದ್ದೇವೆ.
ಕು. ಸುನೀತ ವಿವೇಕಾನಂದರು ಭಾರತೀಯ ತತ್ತ÷್ವವನ್ನು ಪ್ರಪಂಚಕ್ಕೆ ತಿಳಿಸಿದರು. ಜಗತ್ತಿನ ಹಿತಕ್ಕಾಗಿ ಶ್ರಮಿಸಿದರು.
ಕು. ಪ್ರಿಯಾಂಕ: ವಿವೇಕಾನಂದರು ಆಧ್ಯಾತ್ಮಿಕ ಚಿಂತಕರಲ್ಲಿ ಶ್ರೇಷ್ಟರು, ದೇವರ ಬಗೆಗಿನ ಭೌತಿಕ ಪ್ರಶ್ನೆಯನ್ನು ಹಾಕಿದರು. ರಾಮಕೃಷ್ಣರ ಸರಳತೆಗೆ ವಿವೇಕಾನಂದರು ಮಾರುಹೋಗಿದ್ದರು. ವಿವೇಕಾನಂದ ಎಂದರೆ ಭೌತಿಕ ಎಂದರ್ಥ. ಚಿಕಾಗೋದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತದ ಧರ್ಮವನ್ನು ಜಗತ್ತಿಗೆ ಹೇಳಿದರು.
ಅಜೀಜ್: ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೆ ನಿಲ್ಲಬೇಡಿ ಎಂದು ಹೇಳಿದರು.
ಕು. ಜಯಶ್ರೀ: ನಮ್ಮನ್ನು ನಾವು ದುರ್ಬಲರೆಂದು ಪರಿಗಣಿಸುವುದೇ ಪಾಪ. ನಮ್ಮಲ್ಲಿ ಶಕ್ತಿ ಇದೆ. ಬಳಸಿಕೊಳ್ಳಿ. ಶಕ್ತಿಯೇ ನಮಗೆ ಜೀವನ.
ಕು. ನವಾಜಿಯಾ: ವಿವೇಕಾನಂದರ ಮಾತುಗಳು ಯುವಕರಿಗೆ ಸ್ಫೂರ್ತಿ ನೀಡುತ್ತಿದ್ದವು.
ಪ್ರಾರ್ಥನೆ: ಕು. ಪವಿತ್ರ
ಸ್ವಾಗತ: ಕು. ಚಂದನ ಎಂ.
ವಂದನಾರ್ಪಣೆ: ಕು. ಪೂರ್ಣಿಮ ವಡವಿ
ನಿರೂಪಣೆ: ಕು. ಪವಿತ್ರ