ಚಳ್ಳಕೆರೆ : ನಗರದಲ್ಲಿ ಕಡುಬಡತನ ನಡೆಸುವ ಕುಟುಂಬವೊAದು ಸ್ವತಃ ಮನೆಯಿಲ್ಲದೆ ಬಾಡಿಗೆ ಮನೆಯಲ್ಲಿ ವಾಸವಿದ್ದು ಕಳೆದ ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಬಾಡಿಗೆ ಕಟ್ಟಲಾಗದ ಸಂದ್ಘಿದ ಪರಸ್ಥಿತಿಯಲ್ಲಿ, ಕ್ಷೇತ್ರದ ಶಾಸಕರನ್ನು ಬೇಟಿ ಮಾಡಿದ ಕುಟುಂಬದ ಮಹಿಳೆಯರಿಗೆ ಶಾಸಕ ಟಿ.ರಘುಮೂರ್ತಿ ಅಭಯ ಹಸ್ತ ನೀಡಿದ್ದಾರೆ.
ಹೌದು ನಗರದ ಗಾಂಧಿನಗರದ ತಿಮ್ಮಪ್ಪ ದೇವಾಸ್ಥನ ಸಮೀಪದಲ್ಲಿ ವಾಸವಿದ್ದ ಕುಟುಂಬವೊAದು ಇಂದು ಸಂತೆ ಮೈದಾನದಲ್ಲಿ ಕಾಮಗಾರಿ ಪೂಜೆಗೆ ಆಗಮಿಸಿದ್ದ ಶಾಸಕ ಟಿ.ರಘುಮೂರ್ತಿ ಮುಂದೆ ಕಣ್ಣಿರು ಹಾಕಿದರು, ನಾವು ವಾಸ ಇದ್ದ ಮನೆಗೆ ಮಾಲೀಕರು ಬೀಗ ಹಾಕಿದ್ದಾರೆ ನಮಗೆ ಜೀವನ ಮಾಡಲು ತೊಂದರೆಯಾಗುತ್ತದೆ ಎಂದು ತೋಡಿಕೊಂಡಾಗ ಸ್ಥಳದಲ್ಲಿದ್ದ ಪೌರಾಯುಕ್ತ ಸಿ.ಚಂದ್ರಪ್ಪಗೆ ಈ ಕೂಡಲೇ ಮಾಲೀಕರನ್ನು ಸಂಪರ್ಕಿಸಿ ವಸತಿ ವ್ಯವಸ್ಥೆ ಕಲ್ಪಿಸಿ ಸೂಚಿಸಿದರು,
ನಂತರ ಮಹಿಳೆಯರಿಗೆ ನಮ್ಮ ಕಛೇರಿಗೆ ಪ್ರತಿ ತಿಂಗಳು ಬಂದು ಬಾಡಿಗೆ ನಗದು ಪಡೆದು ಜೀವನ ನಿರ್ವಾಹಣೆ ಮಾಡಿ ಎಂದು ಸಂತೈಸಿದರು.